ಬಿ.ಜೆ.ಪಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ವತಿಯಿಂದ ನಾರಿಶಕ್ತಿ ಸಮಾವೇಶ- ತುಂಬಿದ ಸಭಾಂಗಣ

0

ಆಲಂಕಾರು: ಬಿ.ಜೆ.ಪಿ ಮಹಿಳಾ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ನಾರಿಶಕ್ತಿ ಸಮಾವೇಶ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ ದಯಾಳು ರೈತ ಸಭಾಭವನದಲ್ಲಿ ನಡೆಯಿತು.


ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ನಾರಿಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ ಸರಕಾರದ ಹಲವು ಜನಪರ ಯೋಜನೆಗಳಿಂದ ಮಹಿಳೆಯರು ಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಮಹಿಳೆಯರಿಗೆ ವಿಶೇಷ ಸ್ಥಾನಮಾನಗಳನ್ನು ನೀಡುವ ಮೂಲಕ ಮಹಿಳೆಯರು ಸುಭೀಕ್ಷವಾಗಿ ಬದುಕಬಹುದು, ನರೇಂದ್ರ ಮೋದಿಜೀಯವರು ತನ್ನ ತಾಯಿಯ ಪ್ರೀತಿ, ವಿಶ್ವಾಸ, ಅಶ್ರೀ 9 ವಾದದೊಂದಿಗೆ, ನಾರಿಶಕ್ತಿಯೊಂದಿಗೆ ಬೆಳೆದು ಬಂದವರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಎಂಬುವುದು ಹಬ್ಬವಿದ್ದಂತೆ. ನರೇಂದ್ರ ಮೋದಿಯವರಿಗೆ ಶಕ್ತಿನೀಡುವ ಉದ್ದೇಶದಿಂದ ನಮ್ಮ ಬಿ.ಜೆ ಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ರವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸುವಂತೆ ವಿನಂತಿಸಿ ಕಿಕ್ಕಿರಿದು ಸೇರಿದ ಎಲ್ಲಾ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

ಕ್ಯಾಪ್ಟನ್ ಬೃಜೇಶ್ ಚೌಟರವರು ಮಾತನಾಡಿ, ಹಿಂದುತ್ವಕ್ಕೆ ಬದ್ದತೆ, ಅಭಿವೃದ್ಧಿಗೆ ಅಧ್ಯತೆಯೊಂದಿಗೆ ತುಳುನಾಡಿನ ಎಲ್ಲಾ ದೈವಿ ಶಕ್ತಿಯೊಂದಿಗೆ ದ.ಕ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲಾಗುವುದು. ಸಂಘಟನೆಯಲ್ಲಿ ಕರ್ನಾಟಕಕ್ಕೆ ದಕ್ಷಿಣ ‌ಕನ್ನಡ ಜಿಲ್ಲೆ ಮಾದರಿ, ಜಿಲ್ಲೆಗೆ ಸುಳ್ಯ ಕ್ಷೇತ್ರ ಮಾದರಿಯಾಗಿದೆ, ಸುಳ್ಯದ ಕಾರ್ಯಕರ್ತರು ಶಿಸ್ತನ್ನು ರೂಢಿಸಿ ಮೈಗೊಡಿಸಿಕೊಂಡವರು. ಶಿಸ್ತಿನಿಂದ ಮಾತ್ರ ಎಲ್ಲವನ್ನು ಸಾಧಿಸಬಹುದು, ನನಗೆ ಸ್ಪೂರ್ತಿ ನೀಡುವ ಶಕ್ತಿಯೆಂದರೆ ಅದು ನಾರಿಶಕ್ತಿ. ನಾರಿಶಕ್ತಿಯ ಮೂಲಕ ನಾವೆಲ್ಲರೂ ಪ್ರತಿ ಬೂತ್ ನಲ್ಲಿ ಮನೆ ಮನೆಗೆ ತೆರಳಿ
ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರಕಾರ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಮಹಿಳೆಯರಿಗಾಗಿ ಅನೇಕ ಜನಪರ ಯೋಜನಗಳನ್ನು ಜಾರಿಗೆ ತಂದು ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಕಾರ್ಯ ಮಾಡಿದೆ. ಈ ಕೆಲಸ ಕಾರ್ಯಗಳನ್ನು ಜನರಿಗೆ ಅತ್ಯಧಿಕ ಬಹುಮತದಿಂದ ಬಿ.ಜೆ.ಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯೆ, ಬಿಜೆಪಿ ಮಹಿಳಾ ಮೋಚಾದ ರಾಜ್ಯ ಸಹಸಂಚಾಲಕಿ ಭಾರತೀ ಶೆಟ್ಟಿ ಮಾತನಾಡಿ, ಈ ಚುನಾವಣೆ ಜಾತಿ ಧರ್ಮಾಧಾರಿತವಾಗಿ ನಡೆಯುವ ಚುನಾವಣೆಯಲ್ಲ. ಇದು ದೇಶದ ಗೌರವ, ರಕ್ಷಣೆ ಹಾಗೂ ಜಾಗತಿಕ ಮನ್ನಣೆಗೆ, ನಮ್ಮ ಸಂಸ್ಕಾರ, ಸಂಸ್ಕೃತಿ, ನಡೆ, ಆಚಾರ, ವಿಚಾರಕ್ಕೆ ನಡೆಯುವ ಚುನಾವಣೆ. ನಮ್ಮ ದೇಶದ ರಕ್ಷಣೆಯನ್ನು ಮಾಡಿದ ಸೈನಿಕ ಬೃಜೇಶ್ ಚೌಟರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಹಗಲು ರಾತ್ರಿ ಕೆಲಸ ಮಾಡಬೇಕು. ಆ ಮುಖೇನ ಭಾರತವನ್ನಾ ವಿಶ್ವಗುರುವನ್ನಾಗಿ ಮಾಡಲು ನಾವೆಲ್ಲ ಶ್ರಮಿಸಬೇಕೆಂದರು.

ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ದ.ಕ ಜಿಲ್ಲಾ ಬಿ.ಜೆ.ಪಿ ನಿಕಟ ಪೂರ್ವ ಕಾರ್ಯದರ್ಶಿ ಕಸ್ತೂರಿ ಪಂಜ, ದ.ಕ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಧನಲಕ್ಷೀ 6, ಸುಳ್ಯ ಮಂಡಲ ಬಿ.ಜೆ.ಪಿ ಅಧ್ಯಕ್ಷ ವೆಂಕಟ್ ವಳಲಂಬೆ ಸಂದರ್ಭೋಚಿತವಾಗಿ ಮಾತನಾಡಿ ಶುಭಾ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಸುಳ್ಯಮಂಡಲ ಮಹಿಳಾಮೋರ್ಚ ಅಧ್ಯಕ್ಷೆ ಇಂದಿರಾ ಬಿ.ಕೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಅಪ್ಪಯ್ಯ ಮಣಿಯಾಣಿ, ದ.ಕ ಬಿ.ಜೆ.ಪಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಮುಖರಾದ ಎ.ವಿ.ತೀರ್ಥಾರಾಮ, ಜಿ.ಪಂ. ಮಾಜಿ ಅಧ್ಯಕ್ಷ ಆಶಾ ತಿಮ್ಮಪ್ಪ ಗೌಡ, ಜಿಲ್ಲಾ ಮಹಿಳಾ ಮೋರ್ಚಾದ ಉಪಾದ್ಯಕ್ಷೆ ಗುಣವತಿ ಕೊಲ್ಲಂತ್ತಡ್ಕ, ಕಾರ್ಯದರ್ಶಿ ಜಾಹ್ನವಿ ಮಂಡಲ ಉಪಾಧ್ಯಕ್ಷೆ ಶುಭದಾ ಎಸ್ ರೈ, ಪ್ರಧಾನ ಕಾರ್ಯದರ್ಶಿ ಲೋಲಾಕ್ಷಿ, ಕಾರ್ಯದರ್ಶಿಗಳಾದ ತೇಜಸ್ವಿನಿ ಕಟ್ಟಪುಣಿ, ಯಶೋಧಾ ಬಾಳೆಗುಡ್ಡೆ, ಗಂಗಾರತ್ನ ಪೆರಾಬೆ, ಯಶಸ್ವಿನಿ ಶಾಸ್ತ್ರಿ, ಸುಮಾ ಶೆಟ್ಟಿ, ಅಮಿತಾ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾಂಗ್ರೇಸ್‌ನ ಆಲಂಕಾರಿನ ಪ್ರಮುಖರಾದ ಕೃಷ್ಣಪ್ಪ ಗೌಡ ನಾಡ್ತಿಲ ರವರು ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸುಳ್ಯಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪಕ್ಷದ ಧ್ವಜ ನೀಡಿವ ಮೂಲಕ ಬಿಜೆಪಿಗೆ ಸೇರ್ಪಡೆ ಗೊಳಿಸಲಾಯಿತು. ಸುಳ್ಯಮಂಡಲ ಮಹಿಳಾಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ ಸ್ವಾಗತಿಸಿ, ವಿನಯ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಶಶಿಕಲಾ ಎ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಬಿ.ಜೆ.ಪಿಯ ಜಿಲ್ಲಾ, ಮಂಡಲ, ಮಹಾಶಕ್ತಿ, ಶಕ್ತಿಕೇಂದ್ರದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಸಹಕರಿಸಿದರು.

ಸುಳ್ಯ ಮಂಡಲದ ಸಮಾವೇಶದಲ್ಲಿ ಕಿಕ್ಕಿರಿದ ಮಹಿಳೆಯರು:
ಸಭಾಂಗಣದಲ್ಲಿ ನಾರಿ ಶಕ್ತಿಯ ಅನಾವರಣಗೊಂಡಿದ್ದು, ಸಭಾಂಗಣ ಪೂರ್ತಿಗೊಂಡಿದೆ.

LEAVE A REPLY

Please enter your comment!
Please enter your name here