ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಕೊನೆಯ ತನಕವೂ ಅವಮಾನಿಸಿದ್ದು ಕಾಂಗ್ರೆಸ್ -ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಸಂಜೀವ ಮಠಂದೂರು

0

ಪುತ್ತೂರು: ದೇಶಕ್ಕೆ ಸಂವಿಧಾನದ ಮೂಲಕ ಹೊಸ ದಿಕ್ಕನ್ನು ನೀಡಿದ ಹಾಗೂ ದೇಶದ ಆದಿವಾಸಿ, ದಲಿತ ಸಮಾಜಕ್ಕೆ ಶಕ್ತೀಯನ್ನು ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ವಿರುದ್ಧ ಕಾಂಗ್ರೆಸ್  ಲೋಕಸಭಾ ಚುನಾವಣೆಯಲ್ಲಿ ಎದುರು ಅಭ್ಯರ್ಥಿಯನ್ನು ನಿಲ್ಲಿಸಿ ಸೋಲಿಸಿದ್ದು ಮಾತ್ರವಲ್ಲದೆ ಅವರು ನಿಧನರಾದಾಗ ಅವರ ಪಾರ್ಥೀವ ಶರೀರವನ್ನು ದೆಹಲಿಯಲ್ಲಿ ಸಂಸ್ಕರಿಸಲು ಬಿಡದೇ ಜೀವಮಾನದ ಉದ್ದಕ್ಕೂ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೇಳಿದರು. 

ಪುತ್ತೂರು ಬಿಜೆಪಿ ಕಛೇರಿಯಲ್ಲಿ ಎ.14 ರಂದು  ಸಂವಿಧಾನ ಶಿಲ್ಪಿ ಬಾಬ ಸಾಹೇಬ್ ಅಂಬೆಡ್ಕರ್ ರವರ 133ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅವಮಾನಿಸಿತು‌. ಬಿಜೆಪಿ ಅಂಬೇಡ್ಕರ್ ಅವರನ್ನು ಗೌರವಿಸಿತು. ಮೋದಿ ಸರಕಾರ ಬಂದ ಮೇಲೆ ಸಂವಿಧಾನ ಶಿಲ್ಪಿಯ ಹುಟ್ಟಿದ ಸ್ಥಳ, ವ್ಯಾಸಂಗ ಸ್ಥಳದಂತೆ ಐದು ಜಾಗವನ್ನು ಪಂಚತೀರ್ಥಗಳೆಂದು ಗುರುತಿಸಿ ಗೌರವಿಸಿದ್ದು ಮಾತ್ರವಲ್ಲದೇ ದೇಶದ ಪರಮೋಚ್ಛ ಗೌರವ ಭಾರತ ರತ್ನವನ್ನು ನೀಡಿದೆ ಎಂದರು. ಹಾಗಾಗಿ ಬಿಜೆಪಿ ಡಾ. ಬಿ.  ಅರ್ ಅಂಬೇಡ್ಕರ್ ಅವರನ್ನು ಕೊನೆಯ ತನಕವೂ ಗೌರವಿಸಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಸತೀಶ್ ನಾಯ್ಕ್, ರಮಣಿಗಾಣಿಗ, ಬಾಲಕೃಷ್ಣ ಜೋಯಿಷ, ರಾಧಕೃಷ್ಣ, ನವೀನ್ ಪಡ್ನೂರು, ವಸಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here