ರಾಮಕುಂಜ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಎ.17ರಂದು ಶ್ರೀ ರಾಮನವಮಿ ಉತ್ಸವ ನಡೆಯಿತು. ಬೆಳಿಗ್ಗೆ ಭಜನೆ, ಬೆಳಗ್ಗಿನ ಪೂಜೆ, ನಂತರ ಸಾಮೂಹಿಕ ಪ್ರಾರ್ಥನೆ ನಡೆಯಿತು. ನಂತರ ಶ್ರೀ ರಾಮನಾಮ ತಾರಕ ಮಹಾಯಜ್ಞ, ಶ್ರೀ ರಾಮ ದೇವರಿಗೆ ಪವಮಾನ ಸೂಕ್ತ ಕಲಶಾಭಿಷೇಕ, ಶ್ರೀರಾಮ ಜಪ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ಯಜ್ಞದ ಪೂರ್ಣಾಹುತಿ, ಶ್ರೀ ಸತ್ಯನಾರಾಯಣ ಪೂಜೆಯ ಮಂಗಳಾರತಿ, ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಮಂಗಳ, ರಾತ್ರಿ ರಂಗಪೂಜೆ, ಶ್ರೀ ರಾಮ ದೇವರ ಉತ್ಸವ, ದರ್ಶನ ಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಾಟ್ಯಾರಾಧನ ನೃತ್ಯಾಲಯ ಆಲಂಕಾರು ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ನಿನಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದೇಳದ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪವಿತ್ರಪಾಣಿಗಳು ಪಾಲ್ಗೊಂಡಿದ್ದರು.


ಭಜನಾ ಸೇವೆ:
ಶ್ರೀ ರಾಮನವಮಿ ಉತ್ಸವದ ಸಲುವಾಗಿ ಬೆಳಿಗ್ಗೆ 6.15ರಿಂದ ಸಂಜೆ 6.45ರ ತನಕ ನಿರಂತರ ಭಜನಾ ಸೇವೆ ನಡೆಯಿತು. ಶ್ರೀ ಶಾರದಾಂಬಾ ಭಜನಾ ಮಂಡಳಿ ಶಾರದಾನಗರ, ಶ್ರೀ ದೇವಿ ಭಜನಾ ಮಂಡಳಿ ವರ್ನಡ್ಕ, ಶ್ರೀ ದೇವಿ ಭಜನಾ ಮಂಡಳಿ ವರ್ನಡ್ಕ ಮಕ್ಕಳ ತಂಡದಿಂದ ಕುಣಿತ ಭಜನೆ, ಶ್ರೀ ಗುರು ಸಾರ್ವಭೌಮ ಮಹಿಳಾ ಭಜನಾ ಮಂಡಳಿ ರಾಮಕುಂಜ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಲೆಂಗಲ್ಲು, ಶ್ರೀ ಹರಿ ಭಜನಾ ಮಂಡಳಿ ಗಾಣಂತಿ, ಶ್ರೀ ಶಾರದಾಂಬಾ ಭಜನಾ ಮಂಡಳಿ ಶಾರದಾನಗರ ಮಕ್ಕಳ ಕುಣಿತ ಭಜನೆ, ಶ್ರೀ ರಾಧಾಕೃಷ್ಣ ಮಹಿಳಾ ಭಜನಾ ಮಂಡಳಿ ಗೋಕುಲನಗರ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಳೆನೇರೆಂಕಿ, ಶ್ರೀ ಶಾರದಾಂಬಾ ಭಜನಾ ಮಂಡಳಿ ಶಾರದಾನಗರ ಇವರಿಂದ ಭಜನಾ ಸೇವೆ ನಡೆಯಿತು.

LEAVE A REPLY

Please enter your comment!
Please enter your name here