ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ದೇವರ ಪ್ರತಿಷ್ಠೆ

0

ಗರ್ಭಗುಡಿಯಲ್ಲಿ ನೆಲೆನಿಂತ ಸುಬ್ರಹ್ಮಣ್ಯ ದೇವರು, ಗಣಪತಿ, ದುರ್ಗಾದೇವಿ, ದೈವಗಳ ಪ್ರತಿಷ್ಠೆ

ಪುತ್ತೂರು:ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನರ್ ಪ್ರತಿಷ್ಠ ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಎ.26ರಂದು ಪ್ರಧಾನ ದೇವರಾಗಿರುವ ಶ್ರೀ ಸುಬ್ರಹ್ಮಣ್ಯ, ಪರಿವಾರ ದೇವರುಗಳಾದ ಗಣಪತಿ ಹಾಗೂ ದುರ್ಗಾದೇವಿ ಹಾಗೂ ದೈಗಳ ಪ್ರತಿಷ್ಠೆಯು ನೆರವೇರಿತು.


ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಪ್ರಾತಃಕಾಲ ಮಹಾಗಣಪತಿ ಹೋಮ, ಮಂಟಪ ಸಂಸ್ಕಾರ, ಕುಂಭೇಶಕರ್ಕರಿಪೂಜೆ, ಅಗ್ನಿಜನನ, ಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ಅಲ್ಪಪ್ರಸಾದಶುದ್ಧಿ, ಪ್ರಾಸಾದ ಪ್ರತಿಷ್ಠೆ, ನಾಂದೀ ಪುಣ್ಯಾಹ ವಾಚನ, ನಪುಂಸಕ ಶಿಲಾ ಪ್ರತಿಷ್ಠೆ, ರತ್ನನ್ಯಾಸಾದಿ ಪೀಠಪ್ರತಿಷ್ಠೆ, ಶಯ್ಯಾಮಂಟಪದಿಂದ ಜೀವಕಲಶಬಿಂಬ, ನಿದ್ರಾಕಲಶಾದಿಗಳನ್ನು ಗರ್ಭಗೃಹದ ಒಳಗೆ ಒಯ್ಯವುದು, ಶ್ರಿ ಸುಬ್ರಹ್ಮಣ್ಯ, ಗಣಪತಿ, ದುರ್ಗಾದೇವಿ ಪ್ರತಿಷ್ಠೆ ಅಷ್ಟಬಂಧಕ್ರಿಯೆ, ನಂತರ ಕುಂಭೇಶಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಶಾಭಿಷೇಕ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಪ್ರತಿಷ್ಠಾ ಬಲಿ, ಬ್ರಾಹ್ಮಣ ಹಸ್ತೋದಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.


ರಾತ್ರಿ ದೇವಸ್ಥಾನದಲ್ಲಿ ಮುಂದಿನ ನಿತ್ಯ ನೈಮಿತ್ತಿಕಗಳನ್ನು ನಿಶ್ಚಯಿಸಿ, ಪ್ರಾರ್ಥನೆ, ದುರ್ಗಾಪೂಜೆ, ಮಹಾಬಲಿಪೀಠಾಧಿವಾಸ, ಅಧಿವಾಸಹೋಮ, ಕಲಶಾಧಿವಾಸ, ಮಹಾಪೂಜೆ ನಡೆಯಿತು. ಬೆಳಿಗ್ಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಬಂಗಾರಡ್ಕ ಶ್ರೀರಾಮ ಭಜನಾ ಮಂಡಳಿ, ಆರ್ಲಪದವು ಸಿಂದೂರು ಮಹಿಳಾ ಭಜನಾ ಮಂಡಳಿ, ಪಾದಕಟ್ಟೆ ಅಂಬಭವಾನಿ ಭಜನಾ ಮಂಡಳಿ, ಬೆದ್ರಾಳ ನಂದಿಕೇಶ್ವ ಭಜನಾ ಮಂಡಳಿ ಹಾಗೂ ಪುರುಷರಕಟ್ಟೆ ಶ್ರೀದೇವಿ ಗುರುಕುಲ ಕಲಾಕೇಂದ್ರದವರಿಂದ ಭಜನೆ ನೆರವೇರಿತು. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿಂಚನ ಬಳಗ ಅಡ್ಡೂರು ಪೊಳಲಿಯವರಿಂದ ಭರತನಾಟ್ಯ-ಜನಪದನೃತ್ಯ-ಭಕ್ತಿಗೀತೆ, ಕುರಿಯ ವಿಶ್ವಗುರು ನೃತ್ಯ ಮತ್ತು ಸಂಗೀತ ಕಲಾ ಶಾಲೆಯವರಿಂದ ಭರತನಾಟ್ಯ, ರಾತ್ರಿ ರಂಗ ಮಾಣಿಕ್ಯ ಸುಬ್ಬು ಸಂಟ್ಯಾರ್ ರಚನೆಯ ‘ಅಜ್ಜನ ಪಜ್ಜೆ’ ತುಳು ಯಕ್ಷಗಾನ ನಡೆಯಿತು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಉಪ ಸಮಿತಿಗಳ ಸಂಚಾಲಕರು, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ, ದೇವರ ದರ್ಶನ ಪಡೆದರು.


ನಾಳೆ(ಎ.27) ದೇವರಿಗೆ ಬ್ರಹ್ಮಕಲಶಾಭಿಷೇಕ:
ಕ್ಷೇತ್ರದಲ್ಲಿ ಎ.27ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪಂಚಾಮೃತಾಭಿಷೇಕ, ಇಂದ್ರಾದಿ ದಿಕ್ಪಾಲ ದೇವತೆಗಳ ಪ್ರತಿಷ್ಠೆ, ಮಹಾಬಲಿಪೀಠ ಪ್ರತಿಷ್ಠೆ ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ರಾತ್ರಿ ರಂಗಪೂಜೆ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಸಾರ್ವಜನಿಕ ಕಟ್ಟೆ ಪೂಜೆ, ಸಂಪ್ಯ ಶ್ರೀಗಣೇಶ ಸುಬ್ರಹ್ಮಣ್ಯ ಕಟ್ಟೆಗೆ ದೇವರ ಸವಾರ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಯಕ್ಷಶ್ರೀ ಹವ್ಯಾಸಿ ಬಳಗದವರಿಂದ ತಾಳಮದ್ದಳೆ ನಡೆಯಲಿದೆ.

LEAVE A REPLY

Please enter your comment!
Please enter your name here