ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ ನಡೆದಿದೆ. ಈ ಚುನಾವಣೆ ರಾಷ್ಟ್ರೀಯತೆಯ ಆಧಾರದಲ್ಲಿ, ನರೇಂದ್ರ ಮೋದಿ ಸರಕಾರದ ದೂರದೃಷ್ಟಿಯ ಯೋಜನೆಗಳು ಹಾಗೂ ಭವಿಷ್ಯದ ಭಾರತಕ್ಕಾಗಿ, ಮುಂದಿನ ಪೀಳಿಗೆಯ ಸ್ವಾಭಿಮಾನದ ಬದುಕಿಗಾಗಿ ಜಿಲ್ಲೆಯ ಜನತೆ ಬಿಜೆಪಿಗೆ ಆಶೀರ್ವಾದ ಮಾಡುವುದು ನಿಶ್ಚಿತ. ಈ ಕಾರಣಕ್ಕಾಗಿ ಯುವನಾಯಕ, ದ.ಕ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ವಿಶೇಷ ಕನಸು, ಚಿಂತನೆಯನ್ನು ಹೊಂದಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ 1,50,000 ಕ್ಕೂ ಅಧಿಕ ಮತಗಳ ಮುನ್ನಡೆಯಿಂದ ಜಯಶಾಲಿಯಾಗಲಿದ್ದಾರೆ.
ದ.ಕ. ಜಿಲ್ಲೆಯ ಜನತೆ ಯಾವುದೇ ಆಮಿಷ, ಬಿಟ್ಟಿ ಭಾಗ್ಯ, ಜಾತಿಯ ಮೂಲಕ ಸಮಾಜವನ್ನು ಒಡೆಯುವ ಮನಸ್ಥಿತಿಗೆ ಮಾರು ಹೋಗುವವರಲ್ಲ. ಇಲ್ಲೇನಿದ್ದರೂ ಹಿಂದುತ್ವ, ಅಭಿವೃದ್ಧಿ ಹಾಗೂ ಸ್ವಾಭಿಮಾನದ ಭಾರತ, ಸಶಕ್ತ ಭಾರತ, ವಿಕಸಿತ ಭಾರತದ ನಿರ್ಮಾಣದ ಪರಿಕಲ್ಪನೆಯನ್ನು ಜನಸಾಮಾನ್ಯರು ಇಚ್ಚೆ ಪಡುತ್ತಾರೆ.
ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಸಾಮಾಜಿಕ ಕಾರ್ಯಕರ್ತ.