ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸವಿರುವ ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳ ಗ್ರಾಮ ದೈವ ಶ್ರೀ ಶಿರಾಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.1ರಂದು ನೆರವೇರಿತು.
ದೈವಜ್ಞ ಸ್ವಾಮಿನಾಥನ್ ಪಣಿಕ್ಕರ್‌ರವರ ಮಾರ್ಗದರ್ಶನದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ವೇ.ಮೂ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎ.30ರಂದು ಸಂಜೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ, ತಂತ್ರಿಗಳ ಆಗಮನ ಆಲಯ ಪರಿಗ್ರಹ, ಪ್ರಾರ್ಥನೆ, ಆಚಾರ್ಯವರಣ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ಸ್ವಸ್ತಿ ಪುಣ್ಯಾಹವಾಚನ, ರಾಕ್ಷೋಘ್ನ ಹೋಮ, ಸುದರ್ಶನಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲಬಲಿ, ಬಿಂಬಾದಿವಾಸ, ರಕ್ಷೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಮೇ.1ರಂದು ಬೆಳಿಗ್ಗೆ ಗಣಹೋಮ, ಕಲಶಪೂಜೆ, ಶಿಖರ ಪ್ರತಿಷ್ಠೆ, ದೈವದ ಪ್ರತಿಷ್ಠೆ, ಕಲಶಾಭಿಷೇಕ, ಮಧ್ಯಾಹ್ನ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.
ದೈವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಯತಿರಾಜ್ ಜೈನ್ ಕೈಪಂಗಳಗುತ್ತು, ಅಧ್ಯಕ್ಷ ಎ.ವಿ ನಾರಾಯಣ ಅಲುಂಬುಡ, ಪ್ರಧಾನ ಕಾರ್ಯದರ್ಶಿ ಕೆ. ಸುಂದರ ಗೌಡ ನಡುಬೈಲು, ಕೋಶಾಧಿಕಾರಿ ಗುರುಪ್ರಸಾದ್ ಆಳ್ವ ಕೊಡಿನೀರು, ಉಪಾಧ್ಯಕ್ಷರಾದ ನಾಗರಾಜ ಪೂಜಾರಿ ದೋಳ, ವಸಂತ ಗೌಡ ಕೆದ್ಕಾರು, ಬಾಲಪ್ಪ ಗೌಡ ಕೆದ್ಕಾರು, ಮೋನಪ್ಪ ಮೂಲ್ಯ ಬಾರಿಕೆ, ರಮೇಶ್ ಕಾಯರ್‌ಮುಗೇರು, ದೇರಣ್ಣ ಶೆಟ್ಟಿ ನಡುಬೈಲು, ತಿಮ್ಮಪ್ಪ ಗೌಡ ನಡುಬೈಲು, ಪ್ರವೀಣ್ ನಾಕ್ ಸೇರಾಜೆ, ಜತೆ ಕಾರ್ಯದರ್ಶಿ ರವಿ ಮಣಿಯ, ಗೌರವ ಸಲಹೆಗಾರರಾದ ವಿಶ್ವನಾಥ ಆಳ್ವ ಕೊಡಿನೀರು, ವೇದನಾಥ ಸುವರ್ಣ, ಬೆಳಿಯಪ್ಪ ಗೌಡ ಕೆದ್ಕಾರ್, ಯೋಗೀಶ್ ನಾಕ್, ಉಪ ಸಮಿತಿ ಸದಸ್ಯರಾದ ಜಯರಾಮ ಪೂಜಾರಿ ಒತ್ತೆಮುಂಡೂರು, ದಿನೇಶ್ ದೊಳ, ಉಮೇಶ್ ಇಂದಿರಾನಗರ, ದಿನೇಶ್ ಕೈಪಂಗಳ ದೋಳ, ಕುಶಾಲಪ್ಪ ಗೌಡ, ಗಣೇಶ್ ಸಾಲ್ಯಾನ್ ಕೈಪಂಗಳ ದೋಳ, ಯಶೋಧ ಕೆ.ಗೌಡ, ಚಿದಾನಂದ ಕೆದ್ಕಾರ್, ರಾಧಾಕೃಷ್ಣ ನಾಯಕ್, ಪುರಂದರ ಗೌಡ ನಡುಬೈಲು, ಹರೀಶ್ ಗೌಡ ನಡುಬೈಲು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಜೆ ಧಾರ್ಮಿಕ ಸಭೆ:
ದೈವಸ್ಥಾನದಲ್ಲಿ ರಾತ್ರಿ ಶಿರಾಡಿ ದೈವದ ಭಂಡಾರ ತೆಗೆದ ಬಳಿಕ ಅನ್ನಸಂತರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ, ನಂತರ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ನಾಗತಂಬಿಲ’ ಎಂಬ ಯಕ್ಷಗಾನ ಬಯಲಾಟ, ಮೇ.2ರಂದು ಶಿರಾಡಿ ದೈವದ ನೇಮ ಹಾಗೂ ಮಾರಿಕಳ ನಡೆಯುವ ಮೂಲಕ ದೈವಸ್ಥಾನದಲ್ಲಿ ನೇಮೋತ್ಸವ ಗತ ವೈಭವವು ಮರುಕಲಿಸಲಿದೆ ಎಂದು ದೈವಸ್ಥಾನದ ಸಮಿತಿ ಪ್ರಕಟಣೆ ತಿಳಿಸಿದೆ.