ಪುತ್ತೂರು: ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ಪ್ರೌಢ ಶಾಲೆ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 96.83% ಫಲಿತಾಂಶ ದಾಖಲಿಸಿದೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ 63 ವಿದ್ಯಾರ್ಥಿಗಳ ಪೈಕಿ 61 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ನಾರಾಯಣ ಕೆ. ಕೊನೆತೋಟ ಮತ್ತು ಜಾನಕಿ ದಂಪತಿಗಳ ಪುತ್ರಿ ನಮಿತಾ ಕೆ. 576/625 (ಶೇ.92.16) ಶಾಲೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಎಸ್. ವಾಸು ನಾಯ್ಕ ಮತ್ತು ಸುಂದರಿ ಇ. ದಂಪತಿಗಳ ಪುತ್ರಿ ಸಹನಾ ಎಂ 575/625 (ಶೇ.92) ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಟಿ ಅಬ್ದುಲ್ ರಝಾಕ್ ಮತ್ತು ನೆಬಿಸತ್ ಮಿಸ್ರಿಯಾ ದಂಪತಿಗಳ ಪುತ್ರಿ ಫಾತಿಮತ್ ತಸ್ನೀಮಾ 542/625 (ಶೇ.86.72) ಮೂರನೇ ಸ್ಥಾನದಲ್ಲಿದ್ದಾರೆ.