ಪುತ್ತೂರು: ಇಲ್ಲಿನ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ. 100 ಫಲಿತಾಂಶ ದಾಖಲಾಗಿದೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ 119 ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳು 600 ಕ್ಕಿಂತ ಮೇಲ್ಪಟ್ಟು, 36 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ.
613 ಅಂಕಗಳನ್ನು ಪಡೆದುಕೊಂಡಿರುವ ಸ್ವಸ್ತಿ ಎನ್. ಶೆಟ್ಟಿ (ನಿಖಿಲ್ ಶೆಟ್ಟಿ ಮತ್ತು ಪೂನಮ್ ಶೆಟ್ಟಿ ದಂಪತಿ ಪುತ್ರಿ) ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಸಾನ್ವಿ ಜೆ.ಎಸ್ (ಜತ್ತಪ್ಪ ಗೌಡ ಮತ್ತು ಸುನೀತ ಎಂ.ಕೆ. ದಂಪತಿ ಪುತ್ರಿ) 606 ಅಂಕ, ಯಶಸ್ವಿ ಎಚ್. ಸುವರ್ಣ (ಹರೀಶ್ಚಂದ್ರ ಮತ್ತು ತೇಜಾಕ್ಷಿ ದಂಪತಿ ಪುತ್ರಿ) 606 ಅಂಕ, ಹಾಗೂ ಶೇಕ್ ಮೊಹಮ್ಮದ್ ಅಯಾನ್ (ಫಾಜಿಲುಲ್ಲ ಶೇಕ್ ಮೊಹಮ್ಮದ್ ಕೂರ್ನಡ್ಕ ಮತ್ತು ರಾಶ್ವಿ ಫಾಜಿಲುಲ್ಲ ದಂಪತಿ ಪುತ್ರ) 604 ಅಂಕಗಳನ್ನು ಪಡೆದು ಶಾಲೆಯ ಟಾಪರ್ ಎನಿಸಿಕೊಂಡಿದ್ದಾರೆ.