ಪುತ್ತೂರು: ನಾನೂ ಕಳೆದ ಒಂದೂವರೆ ವರುಷದಿಂದ ಟ್ರೈಬೆರ್ ಕೂಲ್ ವೈಟ್ ಕಾರಿನ ಮಾಲೀಕನಾಗಿ ಖುಷಿಯಿಂದ ಇದ್ದೇನೆ. ಮನಸ್ಸು ಕೂಡ ಕೂಲ್ ಆಗಿದ್ದು, ಜರ್ನಿಯೂ ಕೂಡ ತುಂಬಾನೇ ಕೂಲ್ ಕೂಲ್ ಆಗಿದೆ. ಇಲ್ಲಿಯವರೆಗೆ ಯಾವೊಂದು ಸಮಸ್ಯೆಯೂ ಇಲ್ಲದೇ, ನಿರ್ವಹಣೆಯೂ ಕೂಡ ಸರಳವಾಗಿದೆಯೆಂದು ನ್ಯಾಯವಾದಿ ಗಿರೀಶ್ ಮಳಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಮೇ.10 ರಂದು ದರ್ಬೆ ಬೈಪಾಸ್ ಸರ್ಕಲ್ ಬಳಿಯ ರೆನಾಲ್ಟ್ ಪುತ್ತೂರು ಕಿಲ್ಲೆ ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ “ನಮ್ಮ ರೆನಾಲ್ಟ್ ಗಾಡಿ ಹಬ್ಬ”ವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 7 ರಿಂದ 8 ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಲ್ಲ ಟಾಪ್ ಎಂಡ್ ಕಾರುಗಳು ಒಂಭತ್ತುವರೆ ಲಕ್ಷ ರೂಪಾಯಿಗಳಲ್ಲಿ ರೆನಾಲ್ಟ್ ನೀಡುತ್ತಿದೆ. ಯಾವ ಕಂಪನಿಯ ಕಾರುಗಳೂ ಕೂಡ ಈ ಬೆಲೆಗೆ ಸಿಗಲೂ ಸಾಧ್ಯವಿಲ್ಲ. ಜೊತೆಗೆ ಅಂತರ್ ರಾಷ್ಟ್ರೀಯ ಗುಣಮಟ್ಟವನ್ನು ರೆನಾಲ್ಟ್ ಕಾರುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದ ಅವರು, ಹಬ್ಬದ ಯಶಸ್ವಿಗೆ ಶುಭ ಹಾರೈಸಿದರು. ಮಾಜಿ ಸೈನಿಕರ ಸಂಘದ ಟ್ರಸ್ಟಿ ಜೋ.ಡಿ ಸೋಜಾ ಕೂಡ ಮಾತನಾಡಿ ಶುಭ ಕೋರಿದರು.
ಈ ವೇಳೆ ಚಾರ್ಟಡ್ ಎಕೌಂಟೆಂಟ್ ಶಿವಕುಮಾರ್ ಹಿಳ್ಳೆಮನೆ, ಶ್ರೀ ರಾಂ ಫೈನಾನ್ಸ್ ಮ್ಯಾನೇಜರ್ ಜಯಪ್ರಕಾಶ್ ರೈ ಸಹಿತ ಎಕ್ಸಿಕ್ಯೂಟಿವ್ ಗಳಾದ ಪ್ರಸಾದ್, ಶ್ರೇಯಸ್, ಕೇಶವ್ ಮತ್ತು ಭವನ್ ರಾಜ್ ಹಾಗೂ ರೆನಾಲ್ಟ್ ಮಂಗಳೂರಿನ ವ್ಯವಸ್ಥಾಪಕಿ ಯಶೋಧ, ಎಕ್ಸಿಕ್ಯೂಟಿವ್ ಮಮತಾ ಮತ್ತು ರೆನಾಲ್ಟ್ ಪುತ್ತೂರು ಉದ್ಯೋಗಿ ಚರಿತ್ರಾ ಉಪಸ್ಥಿತರಿದ್ದರು.