ಗ್ರಾಮೀಣ ಪ್ರದೇಶದಲ್ಲೊಂದು ಅಂತರ್ರಾಷ್ಟ್ರೀಯ ಗುಣಮಟ್ಟದ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ-ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್

0

ಪುತ್ತೂರು: ಗ್ರಾಮಾಂತರ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಆಂಗ್ಲ ಮಾಧ್ಯಮ ವಿದ್ಯಾಲಯ ಎನಿಸಿಕೊಂಡಿರುವ ಬೆಳಂದೂರಿನ ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ 2024-25ನೇ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ. ಎಲ್.ಕೆ.ಜಿ.ಯಿಂದ ಗ್ರೇಡ್-10 ರ ವರೆಗೆ ದಾಖಲಾತಿ ನಡೆಯುತ್ತಿದ್ದು ಸಾಕಷ್ಟು ವಿದ್ಯಾರ್ಥಿಗಳು ದಾಖಲಾತಿಯನ್ನು ಮಾಡಿಕೊಂಡಿದ್ದಾರೆ. ಮೊಬೈಲ್ ಆಪ್ ಆಧಾರಿತ ಅತ್ಯುತ್ತಮ ಕಲಿಕಾ ತಂತ್ರಜ್ಞಾನದ ಮೂಲಕ ವಿದ್ಯಾಭ್ಯಾಸ ನೀಡಲಾಗುತ್ತಿದ್ದು ನೈತಿಕ ಮೌಲ್ಯಗಳೊಂದಿಗೆ ಆಧುನಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪೋಷಕರಿಗೆ ನಿರಂತರ ತರಬೇತಿ ಕಾರ್ಯಾಗಾರ ನೀಡುವುದರ ಮೂಲಕ ತಮ್ಮ ಮಕ್ಕಳ ಕಲಿಕಾ ವಿಧಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಗೆ ವಿಶೇಷ ಪ್ರಯತ್ನ ವಿಧಾನವನ್ನೂ ಸಂಸ್ಥೆ ಮಾಡುತ್ತಿದ್ದು ಮಕ್ಕಳಿಗೆ ಆಟವಾಡಲು ವಿಶಾಲ ಮೈದಾನ ಹಾಗೂ ಆಕರ್ಷಕ ಪ್ಲೇ ಹಬ್ ವ್ಯವಸ್ಥೆಯಿದೆ. ಉತ್ತಮ ಆಡಳಿತ ಮಂಡಳಿ ಹಾಗೂ ನುರಿತ ಶಿಕ್ಷಕ ವೃಂದವನ್ನು ಹೊಂದಿರುವ ಈಡನ್ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲರಾಗಿ ಕೆ.ಪಿ ರಂಸೀ ಮುಹಮ್ಮದ್ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾಖಲಾತಿ ಇಲ್ಲವೇ ಮಾಹಿತಿಗಾಗಿ ಮೊ: 9731190429, 7760793773 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಅತ್ಯಾಧುನಿಕ ಮಾದರಿಯ ಶಾಲೆ:
ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಪಠ್ಯಕ್ರಮದೊಂದಿಗೆ ಗುಣಮಟ್ಟದ ಶಿಕ್ಷಣ, ವಿಶಿಷ್ಟ ತಂತ್ರಜ್ಷಾನ ಆಧಾರಿತ ತರಗತಿಗಳು, ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಪೂರಕ ಸೌಕರ್ಯಗಳು, ವಾಹನ ಸೌಲಭ್ಯ ಹಾಗೂ ಭವಿಷ್ಯ ಆಧಾರಿತ ಅತ್ಯಾಧುನಿಕ ಮೌಲ್ಯಯುತ ಶೈಕ್ಷಣಿಕ ಪದ್ದತಿಗಳನ್ನು ಒಳಗೊಂಡಿದೆ. ಶಾಲೆಯು ಮಧ್ಯಾಹ್ನದ ಊಟವನ್ನು ಒದಗಿಸುತ್ತಿದೆ. ವಾರದಲ್ಲಿ ಬೇರೆ ಬೇರೆ ರೀತಿಯ ಗುಣಮಟ್ಟದ ಆಹಾರವನ್ನು ಒದಗಿಸುತ್ತಿದೆ. ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸಲು ನುರಿತ ತರಬೇತುದಾರರಿಂದ ಚೆಸ್, ಆರ್ಟ್ ಅಂಡ್ ಕ್ರಾಫ್ಟ್ ಮತ್ತು ಡ್ರಾಯಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ಶಾಲೆಯು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ.
ಮಕ್ಕಳ ಸ್ವಯಂ ರಕ್ಷಣೆಯ ಉದ್ದೇಶಕ್ಕೆ ವಾರದಲ್ಲಿ ಒಂದು ದಿನ ನುರಿತ ಕರಾಟೆ ತರಬೇತುದಾರರಿಂದ ಕರಾಟೆ ತರಬೇತಿ ನೀಡಲಾಗುತ್ತದೆ.

ಎಸ್‌ಎಸ್‌ಎಲ್‌ಸಿಯಲ್ಲಿ ಸತತ 100% ಫಲಿತಾಂಶ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ಸತತವಾಗಿ ಶೇ.100% ಫಲಿತಾಂಶವನ್ನು ಪಡೆದುಕೊಂಡು ಬಂದಿದೆ.

ಪದವಿ ಪುರಸ್ಕಾರ:
ಈಡನ್ ಗ್ಲೋಬಲ್ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಹಾಗೂ ಹತ್ತನೇ ತರಗತಿ ಮುಗಿಸಿ ಹೋಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರತೀ ವರ್ಷ ಪದವಿ ಪ್ರಧಾನ ಮಾಡಲಾಗುತ್ತದೆ.

ಸ್ಕೂಲ್ ರೇಡಿಯೋ:
ಈ ವರ್ಷದಿಂದ ಸ್ಕೂಲ್ ರೇಡಿಯೋ ಎಂಬ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಕ್ಕಳ ಭಾಷೆಯಲ್ಲಿ ಸುಧಾರಣೆ ಮತ್ತು ಮಕ್ಕಳ ಆತ್ಮ ವಿಶ್ವಾಸವನ್ನು ಬಲ ಪಡಿಸುದು ಇದರ ಉದ್ದೇಶವಾಗಿದೆ. ಈ ಕಾರ್ಯಕ್ರಮವನ್ನು ಮಕ್ಕಳೇ ರೇಡಿಯೋ ಕಾರ್ಯಕ್ರಮದ ಮಾದರಿಯಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಮದರಸ ಪರೀಕ್ಷೆಯಲ್ಲೂ ಶೇ.100 ಫಲಿತಾಂಶ:
ಈಡನ್ ಗ್ಲೋಬಲ್ ಶಾಲೆಯ ಮದರಸ ಉತ್ತಮ ಸಾಧನೆಯನ್ನು ಮಾಡಿದೆ. ಕಳೆದ ವರ್ಷದ ಹತ್ತನೇ ಮತ್ತು ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮ ಮದರಸಗಳ ಪೈಕಿ ಈಡನ್ ಗ್ಲೋಬಲ್ ಸ್ಕೂಲ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 95% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ತೇರ್ಗಡೆಗೊಂಡಿದ್ದಾರೆ.

ಬಸ್ ವ್ಯವಸ್ಥೆ:
ಶಾಲೆಯು ತಾಲೂಕಿನ ಉದ್ದಗಲಕ್ಕೂ ಬಸ್ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಕುದ್ಮಾರು, ಆಲಂಕಾರು ಮಾರ್ಗವಾಗಿ ಕುಂತೂರು, ಕಡಬ, ಮರ್ದಾಳ, ಕುಂಬ್ರ ಮಾರ್ಗವಾಗಿ ಅಜ್ಜಿಕಲ್ಲು, ಮಾಡಾವು ಮಾರ್ಗವಾಗಿ ಕಟ್ಟತ್ತಾರು, ಸವಣೂರು ಮಾರ್ಗವಾಗಿ ಪುತ್ತೂರು ದರ್ಬೆ ಬನ್ನೂರು, ಸರ್ವೆ ಮಾರ್ಗವಾಗಿ ಕೂಡುರಸ್ತೆ, ಆಲಂಕಾರು ಮಾರ್ಗವಾಗಿ ಆತೂರು, ಮಠ, ಉಪ್ಪಿನಂಗಡಿ, ಬೆಳಂದೂರು, ಪಲ್ಲತಾರು ಮಾರ್ಗವಾಗಿ ಬೆಳ್ಳಾರೆ, ಕಳಂಜ, ಬೈತಡ್ಕ ನಿಂತಿಕಲ್ಲು ಮಾರ್ಗವಾಗಿ ಪಂಜ ಮಾರ್ಗದಲ್ಲಿ ಬಸ್ ವ್ಯವಸ್ಥೆ ಇದೆ.

ಝೀಕ್ಯೂ ತರಗತಿಗೆ ದಾಖಲಾತಿ
ಈಡನ್ ಗ್ಲೋಬಲ್ ವಿದ್ಯಾ ಸಂಸ್ಥೆಯಲ್ಲಿ ಝೀಕ್ಯೂ ತರಗತಿಗೂ ದಾಖಲಾತಿ ನಡೆಯುತ್ತಿದೆ. 3ರಿಂದ 4 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ಝೀಕ್ಯೂ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ ಎಂದು ವಿದ್ಯಾ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಜೆನಿಯೋಡೆಲ್ಮೆಸ್ ಸಿವಿಲ್ ಸರ್ವೀಸ್ ಮಾದರಿ ಸ್ಪರ್ಧಾತ್ಮಕ ಪರೀಕ್ಷೆ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಅತ್ಯುತ್ತಮ ಶಿಕ್ಷಣ ಮತ್ತು ಉದ್ಯೋಗ ಪಡೆಯಬೇಕಾದರೆ ಮಕ್ಕಳು CET,NEET,UPSC KPSC& BANKING ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮತ್ತು ಸಂದರ್ಶನಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಆ ಪರೀಕ್ಷೆಗಳಿಗೆ ಉತ್ತಮ ತಯಾರಿ ಅತೀ ಮುಖ್ಯ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಉದ್ದೇಶದಿಂದ ಈಡನ್ ಗ್ಲೋಬಲ್ ಶಾಲೆಯು ಪ್ರತೀ ವರ್ಷ ಜೆನಿಯೋಡೆಲ್ಮೆಸ್ ಎಂಬ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆಯು 3 ಹಂತಗಳಲ್ಲಿ ನಡೆಯುತ್ತದೆ.

ಶಾಲೆಯು ಪ್ರಪಂಚದ ಒಂದು ಕಿರು ಕಣವಾಗಿದೆ. ನಾವು ನಮ್ಮ ಮಕ್ಕಳನ್ನು ಪ್ರತಿಭಾನ್ವಿತ ಜಾಗತಿಕ ನಾಗರಿಕರಾಗಿ ರೂಪಿಸುತ್ತೇವೆ.

-ಕೆ.ಪಿ ರಂಸೀ ಮುಹಮ್ಮದ್(ಪ್ರಾಂಶುಪಾಲರು)

LEAVE A REPLY

Please enter your comment!
Please enter your name here