ಕೋಡಿಂಬಾಳದ ಯುವಕ ಕುಂತೂರಿನಲ್ಲಿ ಸಾವು

0

ಕಡಬ: ಕುಂತೂರು ನಿವಾಸಿ ಉದಯಶಂಕರ ಭಟ್ ಎಂಬವರ ಮನೆಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಬರುತ್ತಿದ್ದ ಕಡಬ ಕೋಡಿಂಬಾಳ ನಿವಾಸಿ ಶರತ್(29ವ.)ಅವರು ಉದಯಶಂಕರ ಭಟ್ ಅವರ ತೋಟದ ಮನೆಯಲ್ಲಿ ಮೃತಪಟ್ಟ ಘಟನೆ ಮೇ 17ರಂದು ಸಂಜೆ ನಡೆದಿದೆ.


ಶರತ್ 6 ತಿಂಗಳಿನಿಂದ ಕುಂತೂರು ನಿವಾಸಿ ಉದಯಶಂಕರ್ ಭಟ್ ಎಂಬವರ ಮನೆಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದು ಮೇ.17ರಂದು ಸಂಜೆ ಉದಯಶಂಕರ್ ಭಟ್‌ರವರ ಜಾಗದಲ್ಲಿರುವ ಶೆಡ್‌ನಲ್ಲಿ ಮೃತಪಟ್ಟಿದ್ದರು. ಶರತ್ ಅವರಿಗೆ ಕುಡಿತದ ಅಭ್ಯಾಸವಿದ್ದು ಯಾವುದೋ ಕಾರಣದಿಂದ ಬಿದ್ದು ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಶರತ್ ಅವರ ಬಾವ ಸುಳ್ಯ ಸಂಪಾಜೆ ನಿವಾಸಿ ಕೃಷ್ಣಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here