ಉಪ್ಪಿನಂಗಡಿ ಚರ್ಚ್ ಧರ್ಮಗುರು ವಂ|ಅಬೆಲ್ ಲೋಬೊರವರಿಗೆ ಚರ್ಚ್ ವತಿಯಿಂದ ಶುಭ ವಿದಾಯ

0

ಪುತ್ತೂರು: ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಸೂಚನೆಯಂತೆ 2018, ಜೂನ್ 5 ರಂದು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯಕ್ಕೆ ವರ್ಗಾವಣೆಯಾಗಿ ಆಗಮಿಸಿ, ಪ್ರಸ್ತುತ ಉಜಿರೆ ಸಂತ ಅಂತೋನಿ ಚರ್ಚ್ ಗೆ ವರ್ಗಾವಣೆಗೊಂಡಿರುವ ವಂ|ಅಬೆಲ್ ಲೋಬೊರವರನ್ನು ಚರ್ಚ್ ಪಾಲನಾ ಸಮಿತಿ ಹಾಗೂ ಕ್ರೈಸ್ತ ಬಾಂಧವರ ವತಿಯಿಂದ ಗೌರವದ ಬೀಳ್ಕೊಡುಗೆ ಸನ್ಮಾನ ಮೇ 19 ರಂದು ಚರ್ಚ್ ನಲ್ಲಿ ನೆರವೇರಿತು.


ಚರ್ಚ್ ನಲ್ಲಿ ವಂ|ಅಬೆಲ್ ಲೋಬೊ ರವರ ಆರು ವರ್ಷಗಳ ಸೇವೆಯನ್ನು ಸ್ಮರಿಸಿ ಅವರನ್ನು ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮ್ಯಾಕ್ಸಿಮ್ ಲೋಬೊ, ಕಾರ್ಯದರ್ಶಿ ವಿಲ್ ಫ್ರೆಡ್ ಡಿಸೋಜ, ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಗ್ರೇಸಿ , 21 ಆಯೋಗಗಳ ಸಂಚಾಲಕ ನವೀನ್ ಬ್ರ್ಯಾಗ್ಸ್ ಸಹಿತ ಚರ್ಚ್ ಪಾಲನಾ ಸಮಿತಿ ಸದಸ್ಯರು, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here