ನಿಡ್ಪಳ್ಳಿ: ಕಳೆದ ರಾತ್ರಿ (ಶನಿವಾರ)ಸುರಿದ ಭಾರೀ ಮಳೆಗೆ ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ಎಂಬಲ್ಲಿ ರಸ್ತೆ ಬದಿ ಚರಂಡಿ ಇಲ್ಲದೆ ನೀರು ರಸ್ತೆ ಮೇಲೆ ಹರಿದ ಪರಿಣಾಮ ರಸ್ತೆ ಸಂಪೂರ್ಣ ಕೆಸರು ತುಂಬಿದ್ದು ವಾಹನ ಸವಾರರಿಗೆ ಬಹಳ ಸಮಸ್ಯೆಯಾಗಿದೆ.
ರಸ್ತೆ ಬದಿ ನೀರು ಹರಿಯಲು ಚರಂಡಿ ವ್ಯವಸ್ಥೆ ಮಾಡದೆ ಇರುವ ಕಾರಣ ನೀರಿನೊಂದಿಗೆ ಮಣ್ಣು ಬಂದು ರಸ್ತೆ ಎಲ್ಲಾ ಕೆಸರು ತುಂಬಿದೆ. ಆದಿತ್ಯವಾರ ಬೆಳಿಗ್ಗೆ ಅದರ ಮೇಲೆ ಸವಾರಿ ಮಾಡಿದ ದ್ವಿಚಕ್ರ ವಾಹನ ಸವಾರರು ಬಿದ್ದ ಪ್ರಸಂಗ ನಡೆಯಿತು. ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಸಾರ್ವಜನಿಕರು ಸಂಚರಿಸುತ್ತಿದ್ದರು. ಮಳೆಗಾಲ ಆರಂಭವಾದರೂ ನಿಡ್ಪಳ್ಳಿ ಮತ್ತು ಬೆಟ್ಟಂಪಾಡಿ ಗ್ರಾಮದ ರಸ್ತೆ ಬದಿ ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದ್ದು ರಸ್ತೆ ಸಂಪೂರ್ಣ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸಾರ್ವಜನಿಕರ ಅಭಿಪ್ರಾಯ.