ಮೇ.27ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬಂಡಿ ರಥ ಸಮರ್ಪಣೆ -ಮೇ.20 ಕ್ಕೆ ಆಗಮನ

0

ಕಡಬ: ಆಂದ್ರಪ್ರದೇಶದವರಾಗಿದ್ದು ಅಮೇರಿಕಾದಲ್ಲಿ ಉದ್ಯಮಿಯಾದ ಸಾಯಿ ಶ್ರೀನಿವಾಸ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂಡಿ ರಥವನ್ನು ದೇಣಿಗೆಯಾಗಿ ನೀಡಲಿದ್ದು ಅದನ್ನು ಮೇ.20 ರಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತರಲಾಗುವುದು ಎಂದು ಮೋಹನ್ ದಾಸ್ ರೈ ಅವರು ಸುಬ್ರಹ್ಮಣ್ಯದಲ್ಲಿ ಮೇ.18 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಂಡಿ ರಥವು ಸುಮಾರು ಹದಿನಾರು (16ft) ಎತ್ತರವಿದ್ದು ಸಾಗುವಾಣಿ, ಹೆಬ್ಬಳಸು, ಚಿರ್ಪು ಈ ಮೂರು ಮರಗಳಿಂದ ನಿರ್ಮಿಸಲಾಗಿದೆ. ಇದು ಸುಮಾರು 12.5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಇದನ್ನು ಕೋಟೇಶ್ವರ ಶಿಲ್ಪಿಗಳಾದ ರಾಜಗೋಪಲ ಆಚಾರ್ಯ ರವರ ನೇತೃತ್ವದಲ್ಲಿ ಕೆತ್ತನೆ ಕೆಲಸವನ್ನು ಮಾಡಿ ಪೂರ್ಣ ಗೊಂಡಿರುತ್ತದೆ. ಮೇ.20ರ ಸಂಜೆ 3ಗಂಟೆಗೆ ಸುಬ್ರಹ್ಮಣ್ಯ ತಲುಪಲಿದ್ದು, ಮೇ.27ಕ್ಕೆ ರಥ ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಬಂಡಿ ರಥ ತರವ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಆಡಳಿತಾಧಿಕಾರಿ, ದೇವಸ್ಥಾನದ ಸಿಬ್ಬಂದಿ ವರ್ಗದವರು, ಊರಿನ ಮತ್ತು ಪರಊರಿನ ಭಕ್ತರು ಸೇರಿ ನೂತನ ಬಂಡಿ ರಥವನ್ನು ಸ್ವಾಗತಿಸಬೇಕಾಗಿ ಬಂಡಿರಥದ ದಾನಿಗಳ ಆತ್ಮೀಯರಾದ ಮೋಹನ್ ದಾಸ್ ರೈ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು ಹಾಗೂ ಪವನ್‌ ಎಂ.ಡಿ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾದವ ದೇವರಗದ್ದೆ, ವಿಮಲಾ ರಂಗಯ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here