ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ವೈಕುಂಠ ಸಮಾರಾಧನೆ- ಶ್ರದ್ಧಾಂಜಲಿ ಸಭೆ

0

ಕಲಿಯುವುದು, ಕಲಿಸುವುದು, ಸಂಘಟಿಸುವ ಪ್ರಯತ್ನ ಪಾಲ್ತಾಡಿಯವರದ್ದು – ಡಾ| ವಿವೇಕ್ ರೈ
ಅಧ್ಯಯನ ಮಾಡುವರಿಗೆ ಉತ್ತಮ ತಳಹದಿ ಪಾಲ್ತಾಡಿ ಡಾ| ರಾಮಕೃಷ್ಣ ಆಚಾರ್ -ಡಾ| ಚಿನ್ನಪ್ಪ ಗೌಡ

ಪುತ್ತೂರು: ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ನಿವೃತ್ತ ಉಪನ್ಯಾಸಕ ಡಾ|ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯು ಮೇ.19ರಂದು ಪುತ್ತೂರು ಸುಕೃತೀಂದ್ರ ಕಲಾ ಮಂಟಪದಲ್ಲಿ ನಡೆಯಿತು. ಬೆಳಿಗ್ಗೆ ಕುಟುಂಬದ ಹಿರಿಯರು ಪಾಲ್ತಾಡಿಯವರ ಭಾವ ಚಿತ್ರದ ಮುಂದೆ ದೀಪ ಪ್ರಜ್ವಲಿಸಿದರು.


ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ವಿವೇಕ್ ರೈ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಡಾ| ಚಿನ್ನಪ್ಪ ಗೌಡ ನುಡಿನಮನ ಸಲ್ಲಿಸಿದರು.


ನರೇಂದ್ರ ರೈ ದೇರ್ಲ ಅವರು ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಕುರಿತು ಬರೆದ ವಿಚಾರಧಾರೆ ಪುಸ್ತಕವನ್ನು ಪರಿಚಯಿಸಿದರು. ಇದೇ ಸಂದರ್ಭ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ರಚಿತ ಹಲವು ತುಳು ಜನಪದ ಗೀತೆಯನ್ನು ಕೆ ಆರ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಹಾಡಲಾಯಿತು.

LEAVE A REPLY

Please enter your comment!
Please enter your name here