ಒಂದು ಪ್ರಯತ್ನ 10ರಲ್ಲಿ “ಪ್ರಗತಿ”-ಯುವಕನ ಸಾಧನೆಗೆ ಸಾಕ್ಷಿಯಾದ “ಸ್ಟಡಿ ಸೆಂಟರ್”

0

ಪುತ್ತೂರು: ಕಾಸರಗೋಡಿನ ನೆಟ್ಟಣಿಗೆ ಗ್ರಾಮದ ವಿಠಲರಾವ್ ಮತ್ತು ಸುನಂದ ವಿರವು ದಂಪತಿಗಳ ಪುತ್ರನಾದ ದೀಕ್ಷಿತ್ ಎಂ. ವಿ. ಇವರು 2019-2022 ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಕಾಲೇಜಿನಲ್ಲಿ ಬಿ.ಬಿ.ಎ ವ್ಯಾಸಂಗವನ್ನು ಮಾಡಿದ್ದು ಪ್ರಥಮ ಸೆಮಿಸ್ಟರ್ ನಲ್ಲಿ 1 ವಿಷಯ, ಮೂರನೇ ಸೆಮಿಸ್ಟರ್‌ನಲ್ಲಿ 5 ವಿಷಯ ಹಾಗೂ ಐದನೇ ಸೆಮಿಸ್ಟರ್‌ನಲ್ಲಿ 4 ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು.

ಪದವಿಯಿಂದ ವಂಚಿತನಾಗುತ್ತೇನೆಂದು ಅರಿತ ದೀಕ್ಷಿತ್ ಅಳುಕಿನಿಂದಲೇ ಪ್ರಗತಿ ಸ್ಟಡಿ ಸೆಂಟರ್‌ ಗೆ ಸೇರಿದ್ದ. 6 ಸೆಮಿಸ್ಟರ್‌ ಗಳಲ್ಲಿ ತೇರ್ಗಡೆಯಾಗದೆ ಉಳಿದ 10 ವಿಷಯಗಳಿಗೆ ಪ್ರಗತಿ ಸ್ಟಡಿ ಸೆಂಟರ್‌ನ ನುರಿತ ಅಧ್ಯಾಪಕರ ಮಾರ್ಗದರ್ಶನದಲ್ಲಿ ಅಭ್ಯಸಿಸಿದ ದೀಕ್ಷಿತ್ ಪವಾಡವನ್ನೇ ಸೃಷ್ಟಿಸಿದ್ದಾನೆ. ತನ್ನ ವಿದ್ಯಾರ್ಥಿಗಳ ಗೆಲುವನ್ನೇ ಬಯಸುವ ಅಧ್ಯಾಪಕರ ಪರಿಶ್ರಮ ವ್ಯರ್ಥವಾಗದ ರೀತಿಯಲ್ಲಿ ಪರೀಕ್ಷೆಗೆ ಬರೆದ ದೀಕ್ಷಿತ್‌ ಎಲ್ಲಾ 10 ವಿಷಯಗಳಲ್ಲಿಯೂ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗುವ ಮೂಲಕ ತನ್ನ ಶೈಕ್ಷಣಿಕ ಬದುಕಿನಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾನೆ ಎಂದು ಪ್ರಗತಿ ಸ್ಟಡಿ ಸೆಂಟರ್‌ನ ಪ್ರಾಂಶುಪಾಲೆ ಕೆ. ಹೇಮಲತಾ ಗೋಕುಲ್‌ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here