ಮೇ 24: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ – ಸನ್ಮಾನ ಸಮಾರಂಭ, ತಾಳಮದ್ದಳೆ ಮತ್ತು ಯಕ್ಷಗಾನ ಬಯಲಾಟವು ಮೇ 24 ರಂದು ಪತ್ತನಾಜೆಯ ಶುಭದಿನದಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿ ಯ ಬಿಲ್ವಶ್ರೀ ಸಭಾಂಗಣದಲ್ಲಿ ನಡೆಯಲಿದೆ.


ಬೆಳಿಗ್ಗೆ ಪುತ್ತೂರಿನ ಕಲ್ಲಾರೆ ಶಿವಬ್ರಾಹ್ಮಣ (ಸ್ಥಾನಿಕ) ಸ.ಸೇ. ಸಂಘದ ನಿರ್ದೇಶಕ ಬೆಟ್ಟಂಪಾಡಿ ಅಶೋಕ ಕುಮಾರ ಉದ್ಘಾಟಿಸಲಿದ್ದಾರೆ. ಬಳಿಕ ‘ಗುರು ಶಿಷ್ಯ ಸಂವಾದ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಡಾ. ಪ್ರಭಾಕರ ಜೋಷಿ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಭಾಗವಹಿಸಲಿದ್ದಾರೆ. ಪ್ರಶಾಂತ್ ರೈ ಭಾಗವತಿಕೆಯಲ್ಲಿ ಸಹಕರಿಸಲಿದ್ದಾರೆ.
ನಂತರ ನಡೆಯಲಿರುವ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಗಾನ ವಿದ್ವಾಂಸರಾದ ಡಾ. ಪ್ರಭಾಕರ ಜೋಷಿಯವರು ವಹಿಸಲಿದ್ದಾರೆ.‌ ಮುಖ್ಯ ಅತಿಥಿಗಳಾಗಿ ಪುತ್ತೂರಿನ ಎಸ್‌ಡಿಪಿ ರೆಮಿಡೀಸ್ & ರೀಸರ್ಚ್ ಸೆಂಟರ್ ನ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ಬೆಟ್ಟಂಪಾಡಿ ನವೋದಯ ವಿದ್ಯಾಸಮಿತಿಯ ಅಧ್ಯಕ್ಷ ಡಿ.ಎಂ. ಬಾಲಕೃಷ್ಣ ಭಟ್ ಘಾಟೆ, ಪ್ರಗತಿಪರ ಕೃಷಿಕ ಎಂ.‌ಮುತ್ತಣ್ಣ ಶೆಟ್ಟಿ ರೇಖಾ ನಿಲಯ ಚೆಲ್ಯಡ್ಕ ಪಾಲ್ಗೊಳ್ಳಲಿದ್ದಾರೆ.


ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ, ನಿವೃತ್ತ ಅಧ್ಯಾಪಕ‌ ನಾರಾಯಣ ಭಟ್ ಕುಂಚಿನಡ್ಕ, ಕಲಾಪೋಷಕ ಜನಾರ್ದನ ರಾವ್ ರವರಿಗೆ ಸನ್ಮಾನ‌ ನಡೆಯಲಿದೆ. ಅಪರಾಹ್ನ ಸಂಘದ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಮಹಾಶೂರ ಭೌಮಾಸುರ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ,‌ ನಿವೃತ್ತ ಚಿತ್ರಕಲಾ ಅಧ್ಯಾಪಕ ಐ.‌ ಗೋಪಾಲಕೃಷ್ಣ ರಾವ್ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here