ಬುರೂಜ್ ಶಾಲಾ ವಿದ್ಯಾರ್ಥಿನಿ ಇಸ್ರತ್ ಬಾನು ಇವರಿಗೆ “ಮೀಫ್ ಎಕ್ಸ್ ಲೆನ್ಸ್ ಆವಾರ್ಡ್ 24” ಪ್ರಧಾನ

0

ಪುಂಜಾಲಕಟ್ಟೆ: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಮೂಡುಪಡುಕೋಡಿ ಇಲ್ಲಿನ ಹತ್ತನೇ ತರಗತಿ ವಿದ್ಯಾರ್ಥಿನಿ ಇಸ್ರತ್ ಬಾನು ಇವರಿಗೆ ಮುಸ್ಲಿಂ ಎಜುಕೇಷನ್ ಇನ್ಸ್ಟಿಟ್ಯೂಟ್ ಫೆಡರೇಷನ್ ದ.ಕ ಮತ್ತು ಉಡುಪಿ ಜಿಲ್ಲೆ ಇವರ ವತಿಯಿಂದ ವೈ.ಮೊಹಮ್ಮದ್ ಬ್ಯಾರಿ ಮೆಮೊರಿಯಲ್”ಮೀಫ್ ಎಕ್ಸೆಲೆನ್ಸ್ ಅವಾರ್ಡ್-24″ ಲಭಿಸಿದೆ.

2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 96.64 ಫಲಿತಾಂಶ ಪಡೆದಿರುವ ವಿದ್ಯಾರ್ಥಿನಿ ಇಸ್ರತ್ ಬಾನು ಇವರಿಗೆ ಇತ್ತೀಚಿಗೆ ಮಂಗಳೂರಿನ ಜಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವೇಳೆ ತಾಯಿ ಆಬಿದ ಕೂಡ ಜತೆಗಿದ್ದರು. ಈಕೆ ಕಾವಳಕಟ್ಟೆ ಬೆಂಗೆತ್ತೊಡಿ ನಿವಾಸಿ ರಹ್ಮತ್ತ್ ಅಲಿ, ಆಬಿದ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here