ಕುಂಬ್ರ ಮರ್ಕಝುಲ್ ಹುದಾ ಸಮ್ಮೇಳನ ಸ್ವಾಗತ ಸಮಿತಿ ಸಭೆ

0

ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ-ಅರಿಯಡ್ಕ ಹಾಜಿ

ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಮ್ಮೇಳನ ಮತ್ತು ಅಲ್ ಮಾಹಿರಾ ಪದವಿ ಪ್ರದಾನ ಸಮಾವೇಶದ ಯಶಸ್ವಿಗಾಗಿ ನಡೆಸಿದ ಸ್ವಾಗತ ಸಮಿತಿಯ ಸಭೆ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಮಾತನಾಡಿ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸ್ವಾಗತ ಸಮಿತಿಯ ಚೇರ್‌ಮೆನ್‌ಮುಸ್ತಫಾ ಸುಳ್ಯ, ಸಂಸ್ಥೆಯ ಉಪಾಧ್ಯಕ್ಷ ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಮಾತನಾಡಿ ಶುಭ ಹಾರೈಸಿದರು.

ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಗಲ್ಫ್ ಆರ್ಗನೈಸರ್ ಶಂಸುದ್ದೀನ್ ಬೈರಿಕಟ್ಟೆ, ಸದಸ್ಯರಾದ ಆಶಿಕುದ್ದೀನ್ ಅಕ್ತರ್, ಹಮೀದ್ ಸುಳ್ಯ, ಮರ್ಕಝುಲ್ ಹುದಾ ಪದವಿ ವಿಭಾಗದ ಮುದರ್ರಿಸ್ ಸ್ವಾಲಿಹ್ ಹನೀಫಿ, ಜಲೀಲ್ ಹಾಜಿ ಕೆ.ಎಚ್, ಅಡ್ವಕೇಟ್ ಮೂಸಾ ಪೈಂಬಚ್ಚಾಲ್, ರವೂಫ್ ಹಾಶಿಮಿ, ಉಸ್ಮಾನ್ ಮುಸ್ಲಿಯಾರ್, ಉವೈಸ್ ಬೀಟಿಗೆ, ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ಕುಂಬ್ರ, ಫಾರೂಕ್, ಮಜೀದ್, ಮಹಮ್ಮದ್‌ಉಜ್ರೋಡಿ, ಇಬ್ರಾಹಿಂ ಬಾತಿಷ, ಝುಹ್ರಿ, ತಕಿಯ್ಯುದ್ದೀನ್ ಮದನಿ, ಇಬ್ರಾಹಿಂ ಉಜ್ರೋಡಿ, ಇಸ್ಮಾಯಿಲ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು. ಯೂಸುಫ್ ಮೈದಾನಿಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here