ಪ್ರಿಯದರ್ಶಿನಿಯಲ್ಲಿ ನವಾಗತ ಸ್ವಾಗತಮ್, ಅಭಿವಂದನಮ್- ಮಕ್ಕಳಿಗೆ ಸಾಂಪ್ರದಾಯಿಕ ಸ್ವಾಗತ

0

ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ 2023-24ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಭಿವಂದನಮ್ ಕಾರ್ಯಕ್ರಮ ಮೇ 29 ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಬೆಟ್ಟಂಪಾಡಿ ಇಲ್ಲಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿಯವರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸುವುದರೊಂದಿಗೆ ಶಿಕ್ಷಕರ ಪರಿಶ್ರಮವನ್ನು ಪೋಷಕರೊಂದಿಗೆ ಹಂಚಿಕೊಂಡು “ಮನುಷ್ಯ ಆರ್ಡಿನರಿಯಾಗಲು ಕಷ್ಟವೇನಿಲ್ಲ. ಆದರೆ ಎಕ್ಸ್ಟ್ರಾ ಆರ್ಡಿನರಿಯಾಗಲು ಎಕ್ಸ್ಟ್ರಾ ಪ್ರಯತ್ನದ ಅಗತ್ಯತೆಯಿದೆ ಎಂದರು”.

ವೇದಿಕೆಯಲ್ಲಿದ್ದ ಗಣ್ಯರು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಹೂ ನೀಡಿ ಅಭಿವಂದಿಸಿದರು. ಜೊತೆಗೆ ಆಡಳಿತ ಮಂಡಳಿಯ ವತಿಯಿಂದ ಶಿಕ್ಷಕರಿಗೆ ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಶುಭ ಹಾರೈಸಿದರು. ನೂತನವಾಗಿ ದಾಖಲಾದ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಸಮಿತ್ತುಗಳನ್ನು ಸಮರ್ಪಿಸಿ ಸಿಹಿ ಹಂಚಿಕೊಂಡರು. ಪುರೋಹಿತರಾದ ರಾಧಾಕೃಷ್ಣ ಭಟ್ ಕಕ್ಕೂರು ವೈದಿಕ ಕಾರ್ಯಗಳನ್ನು ನೆರವೇರಿಸಿದರು. ಸಂಸ್ಥೆಯ ಸಂಚಾಲಕ ಡಾ. ಸತೀಶ್ ರಾವ್ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಭವ್ಯ ವಂದಿಸಿದರು. ಹಿರಿಯ ವಿದ್ಯಾರ್ಥಿಗಳಾದ ಹೇಮಂತ್ ಕುಮಾರ್ ಕೆ.ವೈ. , ಕುಮಾರಿ ಹರ್ಷ, ಕುಮಾರಿ ಕೃತಿ ಹಾಗೂ ಶಿಕ್ಷಕರ ಪರವಾಗಿ ಮುಖ್ಯಗುರು ರಾಜೇಶ್ ಎನ್ ಅನಿಸಿಕೆ ವ್ಯಕ್ತಪಡಿಸಿದರು. ಅರವಿಂದ ಭಟ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here