ಮಂಗಳೂರು ವಿವಿ ಪದವಿ ಪರೀಕ್ಷೆ – ಸಂತ ಫಿಲೋಮಿನಾ ಕಾಲೇಜಿಗೆ 5 ರ‍್ಯಾಂಕ್

0

ಪುತ್ತೂರು: ಪುತ್ತೂರಿನ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿಗೆ 2023-2025ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ 5 ರ‍್ಯಾಂಕ್‌ಗಳು ಬಂದಿರುತ್ತವೆ. ಬಿಕಾಂ ಪದವಿ ವಿಭಾಗದಲ್ಲಿ ರಿತೇಶ್ ರೈ ಎಂ ರವರು 96.21% ಅಂಕಗಳೊಂದಿಗೆ ದ್ವಿತೀಯ ರ‍್ಯಾಂಕ್ ಪಡೆದಿರುತ್ತಾರೆ. ಇವರು ಸರ್ವೆ ಮೇಗಿನ ಗುತ್ತು ನಿವಾಸಿ ಸೀತಾರಾಮ ರೈ ಹಾಗೂ ಸರಸ್ವತಿ ದಂಪತಿಯ ಪುತ್ರ.
ಬಿಎಸ್‌ಸಿ ವಿಭಾಗದಲ್ಲಿ ಸುಧನ್ವ ಶ್ಯಾಮ್ ರವರು 97.6% ಅಂಕಗಳೊಂದಿಗೆ ದ್ವಿತೀಯ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಬಲ್ನಾಡಿನ ಸುಬ್ರಹ್ಮಣ್ಯ ಕುಮಾರ್ ಹಾಗೂ ಸುಶೀಲಾ ದೇವಿ ದಂಪತಿಯ ಪುತ್ರ. ಬಿಸಿಎ ಪದವಿ ವಿಭಾಗದಲ್ಲಿ ಅರ್ಪಿತಾ ಕೆ ಇವರು 95.75% ಅಂಕಗಳನ್ನು ಗಳಿಸುವುದರೊಂದಿಗೆ ತೃತೀಯ ರ‍್ಯಾಂಕ್ ಪಡೆದಿರುತ್ತಾರೆ. ಇವರು ಕೆಮ್ಮಿಂಜೆ ಗ್ರಾಮದ ಪ್ರಸಾದ್ ಹೆಬ್ಬಾರ್ ಹಾಗೂ ಮಹಾಲಕ್ಷ್ಮಿ ದಂಪತಿಯ ಪುತ್ರಿ.
ಕಾಲೇಜಿನ ಕಲಾ ವಿಭಾಗಕ್ಕೆ ಈ ಶೈಕ್ಷಣಿಕ ವರ್ಷದಲ್ಲಿ 2 ರ‍್ಯಾಂಕ್‌ಗಳು ದೊರೆತಿರುತ್ತವೆ. ವಿನ್ಯಾ ರೈ ಇವರು 89.98% ಅಂಕಗಳನ್ನು ಗಳಿಸುವುದರ ಮೂಲಕ 4 ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಕೈಕಾರದ ಅಂಭಾಗಿಲು ನಿವಾಸಿ ಸಂಜೀವ ರೈ ಹಾಗೂ ವೀಣಾ ಎಸ್ ರೈ ದಂಪತಿಯ ಪುತ್ರಿ. ಹರ್ಷಿಣಿ ಸಿಂಗ್ ಪಿ ಇವರು 88.74% ಅಂಕಗಳೊಂದಿಗೆ 8ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಮಡಿಕೇರಿಯ ಪ್ರದೀಪ್ ಕುಮಾರ್ ಸಿಂಗ್ ಹಾಗೂ ಮಹಾಲಕ್ಷ್ಮಿ ದಂಪತಿಯ ಪುತ್ರಿ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊ, ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಆಡಳಿತ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಕಾಲೇಜಿನ ಸಂಚಾಲಕ ಅತಿ ವಂ| ಲಾರೆನ್ಸ್ ಮಸ್ಕರೇನಸ್‌ರವರು ಶಿಕ್ಷಣ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕಾಲೇಜಿಗೆ ಪದವಿ ವಿಭಾಗದಲ್ಲಿ 5 ರ‍್ಯಾಂಕ್‌ಗಳು ದೊರೆತಿರುವುದು ಸಂತಸ ತಂದ ವಿಚಾರವಾಗಿದೆ. ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಸಾಧನೆ ಮಾಡಿದ ಈ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಕಾಲೇಜಿನಲ್ಲಿ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ವಾತಾವರಣವನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ.

LEAVE A REPLY

Please enter your comment!
Please enter your name here