ಕಡಬ ಸರಸ್ವತೀ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ

0

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಾ ಕೆ ಬಿ ಎಸ್.ಎಸ್.ಎಲ್.ಸಿ ಯ ಮರು ಮೌಲ್ಯ ಮಾಪನದಲ್ಲಿ 12 ಹೆಚ್ಚುವರಿ ಅಂಕ ಲಭಿಸಿ 572ರ ಬದಲಾಗಿ 584 ಅಂಕ ಪಡೆದುಕೊಂಡಿರುತ್ತಾರೆ. ಈಕೆ ಬಳ್ಪ ಗ್ರಾಮದ ಬೀದಿಗುಡ್ಡೆ ಕಟ್ಟ ಬಾಲಚಂದ್ರ ಕೆ ಹಾಗ ಸಂಧ್ಯಾ ಕೆ ದಂಪತಿಗಳ ಪುತ್ರಿ. ಇನ್ನೋರ್ವ ವಿದ್ಯಾರ್ಥಿ ಶ್ರೇಯಸ್ ಬಿ ಇವನು 4 ಹೆಚ್ಚುವರಿ ಅಂಕಗಳನ್ನು ಪಡೆದು 546ರ ಬದಲಾಗಿ 550 ಅಂಕ ಪಡೆದಿರುತ್ತಾನೆ. ಇವರು ಬಾಳುಗೋಡು ಗ್ರಾಮದ ಪದ್ಮನಾಭ ಬಿ ಹಾಗೂ ನಾಗವೇಣಿ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here