ಬನ್ನೂರು ದೈಯರಮಾಡ ನಡಿಮಾರು ಸಾನಿಧ್ಯದಲ್ಲಿ ಗುಳಿಗರಾಜ ದೈವದ ಪ್ರತಿಷ್ಠೆ, ತಂಬಿಲ ಸೇವೆ

0

ಪುತ್ತೂರು: ಇತ್ತೀಚೆಗಷ್ಟೆ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ನಡೆದ ಬನ್ನೂರು ಆನೆಮಜಲು ದೈಯರ ಮಾಡ ನಡಿಮಾರು ಮತ್ತು ಆನೆಮಜಲು ನ್ಯಾಯಾಲಯದ ಸಂಕೀರ್ಣದ ಬಳಿಯ ಶ್ರೀ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನಿಧ್ಯಕ್ಕೆ ಸಂಬಂಧಿಸಿ ನಡಿಮಾರಿನಲ್ಲಿ ಜೂ.9ರಂದು ಗುಳಿಗರಾಜ ದೈವದ ಪ್ರತಿಷ್ಠೆ ಮತ್ತು ತಂಬಿಲ ಸೇವೆ ನಡೆಯಿತು.

ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಕುಂಟಾರು ಗುರುಪ್ರಸಾದ್ ತಂತ್ರಿಯವರು ಪ್ರತಿಷ್ಠಾ ವೈದಿಕ ಕಾರ್ಯ ನೆರವೇರಿಸಿದರು. ಈ ಹಿಂದೆ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕ ಕ್ಷೇತ್ರದಲ್ಲಿ ಗುಳಿನ ಸಾನಿಧ್ಯಕ್ಕೆ ಶಿಲಾನ್ಯಾಸಕ್ಕೆ ನಿಶ್ಚಯಿಸಿದಂತೆ ನಡಿಮಾರಿನಲ್ಲಿ ಶ್ರೀ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ದೈವದ ಬ್ರಹ್ಮಕಲಶೋತ್ಸವದ ಬಳಿಕ ಗುಳಿಗರಾಜನ ಸಾನಿಧ್ಯಕ್ಕೆ ಶಿಲಾನ್ಯಾಸ ನೆರವೇರಿಸಿ ಕೇವಲ ಮೂರೇ ತಿಂಗಳಲ್ಲಿ ಗುಳಿರಾಜ ದೈವದ ಪ್ರತಿಷ್ಠೆ ಕಾರ್ಯ ನೆರವೇರಿದೆ. ಪ್ರತಿಷ್ಠೆ ಸಂದರ್ಭ ಅರ್ಚಕ ಶ್ರೀಕೃಷ್ಣ ಭಟ್ ಕೆದುವಡ್ಕ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ, ಖಜಾಂಚಿ ರಮೇಶ್ ಗೌಡ ನೀರ್ಪಾಜೆ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌನೀಶ್, ವಾಸಪ್ಪ ಗೌಡ, ಗುಡ್ಡಪ್ಪ ಗೌಡ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here