ಎಲಿಯ ದೇವಳಕ್ಕೆ ಧಾರ್ಮಿಕ ದತ್ತಿ ಪರಿಷತ್‌ನ ಸದಸ್ಯ ಶಿವನಾಥ ರೈ ಮೇಗಿನಗುತ್ತು ಭೇಟಿ-ಪ್ರಾಕೃತಿಕ ವಿಕೋಪದಿಂದ ದೇವಳದ ಆವರಣ ಗೋಡೆಗೆ ಹಾನಿ, ಪರಿಶೀಲನೆ, ಮನವಿ ಪತ್ರ ಸಲ್ಲಿಕೆ

0

ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಪರಿಷತ್‌ನ ಜಿಲ್ಲಾ ಸದಸ್ಯರಾದ ಶಿವನಾಥ ರೈ ಮೇಗಿನಗುತ್ತುರವರು ಭೇಟಿ ನೀಡಿ ದೇವಳದ ಹೊರಸುತ್ತಿನ ಅಂಗಳದ ಈಶಾನ್ಯ ಭಾಗದಲ್ಲಾದ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ತೊಂದರೆಯನ್ನು ಎಲಿಯ ದೇವಳದ ಸಮಿತಿ ಸದಸ್ಯರೊಂದಿಗೆ ಇದ್ದು ಪರಶೀಲನೆ ನಡೆಸಿದರು. ಆಗಿರುವ ನಷ್ಟಕ್ಕೆ ಸೂಕ್ತ ರೀತಿಯಲ್ಲಿ ನಷ್ಟ ಪರಿಹಾರ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿರುತ್ತಾರೆ. ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಲಿಯ ಕರುಣಾಕರ ಗೌಡರವರು ನಷ್ಟ ಪರಿಹಾರದ ಬಗ್ಗೆ ಧಾರ್ಮಿಕ ದತ್ತಿ ಪರಿಷತ್‌ಗೆ ಮನವಿ ಪತ್ರ ನೀಡಿದರು. ದೇವಳದ ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯರವರು ಶಿವನಾಥ ರೈ ಮೇಗಿನಗುತ್ತುರವರಿಗೆ ಶಾಲು ಹಾಕಿ, ದೇವರ ಪ್ರಸಾದ ನೀಡಿ ಹರಸಿದರು.


ಈ ಸಂದರ್ಭದಲ್ಲಿ ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಜೀರ್ಣೋದ್ಧಾರ ಸಮಿತಿಯ ಸದಸ್ಯ ಉದಯಕುಮಾರ್ ರೈ ಬಾಕುಡ, ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜಾತ್ರಾ ಸಮಿತಿಯ ಖಜಾಂಚಿ ಮಜಿತ್ ಸುವರ್ಣ ಸೊರಕೆ ಹಾಗೂ ಶ್ರೀ ವಿಷ್ಣುಮೂರ್ತಿ ದೇವಳದ ದೈವಗಳ ನೇಮೋತ್ಸವ ಸಮಿತಿಯ ಸಹಸಂಚಾಲಕ ರಾಮಚಂದ್ರ ಸೊರಕೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here