ಕಾಣಿಯೂರು: ದೋಳ್ಪಾಡಿ ಸರಕಾರಿ ಪ್ರೌಢ ಶಾಲಾ ಮಂತ್ರಿ ಮಂಡಲವು ಚುನಾವಣೆಯ ಮೂಲಕ ನಡೆಸಲಾಯಿತು. ಶಾಲಾ ನಾಯಕಿಯಾಗಿ 10ನೇ ತರಗತಿಯ ದೀಕ್ಷಾ ಡಿ, ಉಪ ನಾಯಕನಾಗಿ 9ನೇ ತರಗತಿಯ ಸೃಜನ್ ಆಯ್ಕೆಯಾಗಿದ್ದಾರೆ. ಗೃಹ ಮಂತ್ರಿಯಾಗಿ ಅಭಿಷೇಕ್, ಕ್ರೀಡಾ ಮಂತ್ರಿಯಾಗಿ ದೀಕ್ಷಾ, ಅರೋಗ್ಯ ಮಂತ್ರಿಯಾಗಿ ದೀಕ್ಷಿತ್, ನೀರಾವರಿ ಮಂತ್ರಿಯಾಗಿ ಪ್ರತೀಕ್, ವಾರ್ತಾ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಲಿಖಿತಾ, ಕೃಷಿ ಮಂತ್ರಿಯಾಗಿ ವಿಕಾಸ್ ಆಯ್ಕೆಯಾದರು. ದೈಹಿಕ ಶಿಕ್ಷಣ ಶಿಕ್ಷಕಿ ವಿನೋದಾ ಇವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಿತು. ಶಿಕ್ಷಕರಾದ ಪ್ರಕಾಶ್ ಹೆಚ್. ಎಂ, ಉಷಾದೇವಿ, ಹಿತಾ, ನಿತ್ಯಾ ಇವರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು. ಶಿಕ್ಷಕಿ ಸವಿತಾ ಇವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಅವಶ್ಯಕತೆ, ರಹಸ್ಯ ಮತದಾನ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ರವಿರಾಜ್ ಮೊಳೆಯಾರ್ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು