ಲೋಕಾಯುಕ್ತ ದೂರುಗಳ ತನಿಖೆ: ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸುವಂತೆ ಮನವಿ

0

ಪುತ್ತೂರು: ಲೋಕಾಯುಕ್ತ ಕಛೇರಿಗೆ ಸಲ್ಲಿಸಿದ ದೂರುಗಳ ತನಿಖೆಯನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸುವಂತೆ ಸೂಕ್ತ ಕ್ರಮಕ್ಕಾಗಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ಲೋಕಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಸಾರ್ವಜನಿಕರು ಸರಕಾರಿ ಕಛೇರಿಗಳಲ್ಲಿ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದರೆ, ವಿಚಾರಣೆಗೆ ಬೆಂಗಳೂರಿಗೆ ಹೋಗಬೇಕಾಗುತ್ತದೆ. ಒಂದೆರಡು ಸಲ ಹೋದರೆ ಸಾಕಾಗುವುದಿಲ್ಲ. ಕರೆದಾಗಲೆಲ್ಲ ಹೋಗಬೇಕು. ಜನಸಾಮಾನ್ಯರಿಗೆ ದ.ಕ. ಜಿಲ್ಲೆಗಳಿಂದ ಬೆಂಗಳೂರಿಗೆ ಹೋಗುವುದು ಕಷ್ಟಕರವಾಗಿರುತ್ತದೆ. ಸಮಯ ಹಾಗೂ ಹಣಕಾಸಿನ ತೊಂದರೆಗಾಗಿ ಜನ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ದೂರು ಸಲ್ಲಿಸುವಾಗ ನೀವು ಬೆಂಗಳೂರಿಗೆ ಬರಬೇಕಾಗಿಲ್ಲ ಎಂದು ಸಲಹೆ ಕೊಡುತ್ತಾರೆ. ಆದರೆ ವಿಚಾರಣೆ ಸಮಯದಲ್ಲಿ ಬೆಂಗಳೂರಿಗೆ ಬರುವಂತೆ ಹೇಳುತ್ತಾರೆ. ಜನರಿಗೆ ಸರಕಾರಿ ಕಛೇರಿಗಳಲ್ಲಿ ಅನೇಕ ಸಮಸ್ಯೆಗಳಿದ್ದರೂ ಈ ಕಾರಣಕ್ಕಾಗಿ ಜನ ದೂರು ಸಲ್ಲಿಸಲು ಮುಂದೆ ಬರುತ್ತಾ ಇಲ್ಲ. ಆಯಾ ಜಿಲ್ಲೆಯ ಜಿಲ್ಲಾ ಕೇಂದ್ರಗಳಲ್ಲಿ ಈ ವಿಚಾರಣೆಗಳು ನಡೆಯುವಂತಾದರೆ ಬಹಳಷ್ಟು ಜನರಿಗೆ ಉಪಯೋಗವಾಗುತ್ತದೆ. ಈ ಬಗ್ಗೆ ಆದ್ಯತೆ ಮೇರೆಗೆ ಪರಿಶೀಲಿಸಿ ಕ್ರಮಕ್ಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here