ನೆಲ್ಯಾಡಿ: ತಾಯಿ, ಮಗು ನಾಪತ್ತೆ-ದೂರು

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿಯ ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೊಪ್ಪ ಮಾದೇರಿ ನಿವಾಸಿ ಜೋಜೋ ಟಿ.ಕೆ.ಎಂಬವರ ಪತ್ನಿ ಚಂದ್ರಕಲಾ (37ವ.)ಹಾಗೂ ಅವರ 9 ವರ್ಷದ ಕೊನೆಯ ಮಗ ಜೂ.7ರಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಪ್ಲಂಬರ್ ಕೆಲಸ ಮಾಡಿಕೊಂಡಿರುವ ಜೋಜೋ ಟಿ.ಕೆ. ಅವರು ಪತ್ನಿ ಚಂದ್ರಕಲಾ ಹಾಗೂ ಮೂವರು ಮಕ್ಕಳೊಂದಿಗೆ ಕೊಪ್ಪ ಮಾದೇರಿಯಲ್ಲಿ ವಾಸವಿದ್ದು ಜೂ.7ರಂದು ಬೆಳಿಗ್ಗೆ 8.15ಕ್ಕೆ ಅವರು ಕೆಲಸಕ್ಕೆ ಹೋಗಿದ್ದು ಈ ವೇಳೆ ಮೂವರು ಮಕ್ಕಳು ಹಾಗೂ ಪತ್ನಿ ಮನೆಯಲ್ಲಿದ್ದರು. ಮಧ್ಯಾಹ್ನ 12.30ರ ವೇಳೆಗೆ ಪತ್ನಿ ದೂರವಾಣಿ ಕರೆ ಮಾಡಿ ತಾಯಿ ಮನೆಯಾದ ಹಾಸನಕ್ಕೆ ಹೋಗುತ್ತೇನೆಂದು ಹೇಳಿದ್ದರು. ಅದಕ್ಕೆ ಮನೆಗೆ ಬಂದ ಮೇಲೆ ನೀನು ಹೋಗು ಎಂದು ಹೇಳಿದ್ದರು. 12.45ಕ್ಕೆ ಮನೆಗೆ ಬಂದಾಗ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳು ಇರಲಿಲ್ಲ. ನೆಲ್ಯಾಡಿ ಮತ್ತು ಅಸುಪಾಸಿನಲ್ಲಿ ಸಂಜೆ ತನಕ ಹುಡುಕಾಡಿದರೂ ಪತ್ತೆಯಾಗಲಿಲ್ಲ. ನಂತರ ಮನೆಗೆ ಬಂದಾಗ ಇಬ್ಬರು ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದು ಕೊನೆಯ ಮಗ ಮತ್ತು ಪತ್ನಿ ಚಂದ್ರಕಲಾ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಮಕ್ಕಳಲ್ಲಿ ವಿಚಾರಿಸಿದಾಗ ನಾವು ಬೆಳಿಗ್ಗೆ 8.45ಕ್ಕೆ ಶಾಲೆಗೆ ಹೋಗುವ ಸಮಯ ತಾಯಿ ಮತ್ತು ತಮ್ಮ ಮನೆಯಲ್ಲಿದ್ದರು ಎಂದು ತಿಳಿಸಿದ್ದಾರೆ. ಪತ್ನಿ ಮತ್ತು ಮಗ ಜೂ.7ರಿಂದ ನಾಪತ್ತೆಯಾಗಿದ್ದು ಹುಡುಕಾಟ ನಡೆಸಿದರೂ ಪತ್ತೆಯಾಗದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿ ಜೋಜೋ ಅವರು ಜೂ.14ರಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here