ಶಾಂತಿನಗರ ಶಾಲೆಗೆ ಸೈಕಲ್ ಸ್ಟ್ಯಾಂಡ್ ಕೊಡುಗೆ

0

ನೆಲ್ಯಾಡಿ: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಶಾಂತಿನಗರ ಗೋಳಿತ್ತೊಟ್ಟು ಇಲ್ಲಿನ ವಿದ್ಯಾರ್ಥಿಗಳಿಗಾಗಿ ಶಾಲಾ ದಾನಿ ಶಿವಪ್ರಸಾದ್ ಶಾಂತಿನಗರ ಅವರು 40 ಸಾವಿರ ರೂ.ವೆಚ್ಚದಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಿದ ಸೈಕಲ್ ಸ್ಟ್ಯಾಂಡನ್ನು ಶಾಲೆಗೆ ಹಸ್ತಾಂತರಿಸಿದರು.

ಶಾಲಾ ವಿದ್ಯಾರ್ಥಿಗಳ ಸೈಕಲ್ ಹಾಗೂ ಶಿಕ್ಷಕರ ದ್ವಿಚಕ್ರ ವಾಹನಗಳು ಬಿಸಿಲು ಮಳೆಗೆ ನಿರಂತರವಾಗಿ ಹೊರಗಿರುವುದನ್ನು ಗಮನಿಸಿದ ಶಿವಪ್ರಸಾದ್ ಅವರು ಸ್ವಯಂ ಪ್ರೇರಿತರಾಗಿ 40 ಸಾವಿರ ರೂ.ವೆಚ್ಚದಲ್ಲಿ ಸ್ಟ್ಯಾಂಡನ್ನು ನಿರ್ಮಿಸಿ ಶಾಲೆಗೆ ಹಸ್ತಾಂತರ ಮಾಡಿದರು. ಅಂಗನವಾಡಿ ಪುಟಾಣಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಹಸ್ತಾಂತರ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ಉಪಾಧ್ಯಕ್ಷೆ ಮೀನಾಕ್ಷಿ, ಅಂಗನವಾಡಿ ಶಿಕ್ಷಕಿ ರೀತಾಕ್ಷಿ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಪ್ರದೀಪ್ ಬಾಕಿಲ ಸ್ವಾಗತಿಸಿ, ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಹಶಿಕ್ಷಕ ಮಂಜುನಾಥ ಮಣಕವಾಡ ವಂದಿಸಿದರು. ಶಾಲಾ ಸಹಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here