ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು:ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ ಜೂ .21ರಂದು ಯೋಗ ಉತ್ಸವ ಕಾರ್ಯಕ್ರಮ ನಡೆಯಿತು .

ಅಂತಾರಾಷ್ಟ್ರೀಯ ಯೋಗಪಟು ತೃಪ್ತಿ . ಎನ್ . ಯೋಗಾಸನ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಿತು . ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಆಯುರ್ವೇದ ತಜ್ಞ ವೈದ್ಯ, ಆಯುರ್ವೇದ ವಾಚಸ್ಪತಿ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ “. ಮನಸ್ಸು ಮತ್ತು ಯೋಗ ಮಾರ್ಗ , ಲಾಭೋಪಾಯ ” ಎಂಬ ವಿಷಯದ ಕುರಿತು ಸತ್ಸಂಗ ಪ್ರವಚನ ನಡೆಯಿತು. “ಯೋಗವೆಂದರೆ ಕೇವಲ ಆಸನಗಳಲ್ಲ . ಅಹಿಂಸೆ , ಪರಮಾತ್ಮನಲ್ಲಿ ಶರಣಾಗತಿಗಳೂ ಸೇರಿವೆ . ಯೋಗ ಮತ್ತು ಆಯುರ್ವೇದ ವಿಚಾರದ ಯಾವತ್ತೂ ಸೇವೆಗಳಿಗೆ ನಮ್ಮ ಆಸ್ಪತ್ರೆ ಬದ್ಧವಾಗಿದೆ. ವಿದೇಶದಿಂದ ಕೂಡಾ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವುದಕ್ಕೆ , ಇಲ್ಲಿನ ಗುಣಮಟ್ಟದ ಆಯುರ್ವೇದ ಚಿಕಿತ್ಸೆ ಹಾಗೂ ಗುಣ ಹೊಂದಿದ ರೋಗಿಗಳ ಮನದುಂಬಿದ ಹರಸುವಿಕೆಯೇ ಕಾರಣ ” ಎಂದರು .

ಉದ್ಘಾಟನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಾಗೂ ರೋಟರಿಯನ್ ಎ . ಜಗಜೀವನ್ ದಾಸ್ ರೈ ಇವರು ವಹಿಸಿ ಮಾತನಾಡಿ “ಡಾ . ಬಂಗಾರಡ್ಕ ಅವರ ಪರಿಣಾಮಕಾರಿ ಅರೋಗ್ಯ ಲೇಖನಗಳು ಸಮಾಜದಲ್ಲಿ ಪರಿವರ್ತನೆ ತರುತ್ತಿವೆ . ಯೋಗ ಆರೋಗ್ಯಕ್ಕೆ ಎಷ್ಟು ಸಹಕಾರಿಯೆಂದರೆ ನನ್ನ ಬಿ .ಪಿ . ಯೋಗ ಮಾಡಿದ ಮೇಲೆ ನಿಯಂತ್ರಣಕ್ಕೆ ಬಂತು .” ಎಂದರು .

ಧನ್ವಂತರಿ ಸುಳಾದಿ , ಭಜನೆಯನ್ನು ಸುಧೀಕ್ಷಾ ಹಾಗೂಸುನಿಧಿ , ಕಾಂಚನಮಾಲಾ ಸಿಂಧೂರ ಮನೆ , ಗೀತಾ ಸದಾಶಿವ ಭಟ್ ನವಚೇತನ ನಡೆಸಿಕೊಟ್ಟರು . ದೇವಕಿ ಭಟ್, ಭಾರತಿ ಭಜನೆಯಲ್ಲಿ ಸಹಕರಿಸಿದರು . ಆಸ್ಪತ್ರೆಯ ವ್ಯವಸ್ಥಾಪನಾ ನಿರ್ದೇಶಕಿ ಡಾ . ಶ್ರುತಿ .ಎಂ . ಎಸ್ . ಕಾರ್ಯಕ್ರಮ ನಿರ್ವಹಿಸಿದರು . ಆಸ್ಪತ್ರೆಯ ಆಡಳಿತ ಸಮಿತಿ ಸದಸ್ಯ ಎಂ ಸುಬ್ರಮಣ್ಯ ಭಟ್ ಸ್ವಾಗತಿಸಿ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧನಂಜಯ ಭಟ್ ವಂದಿಸಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ , ಉಡುಪಿ ಮಿಲಾಗ್ರಿಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಹರಿಣಾಕ್ಷಿ ಕೇವಳ , ನಿವೃತ್ತ ಪ್ರಾಧ್ಯಾಪಕ ರಾಜಾರಾಮ ನೆಲ್ಲಿತ್ತಾಯ , ಸದಾಶಿವ ಭಟ್ ನವಚೇತನ , ಯೋಗ ಶಿಕ್ಷಕ ನವೀನ್ ಕೆಯ್ಯೂರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here