ಮುಖ್ಯಮಂತ್ರಿ-ಖುಷಿ, ಉಪಮುಖ್ಯಮಂತ್ರಿ-ವೀಕ್ಷಾ
ನೆಲ್ಯಾಡಿ: ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಮಂತ್ರಿಯಾಗಿ ಖುಷಿ ಎಂ.ಆರ್., ಹಾಗೂ ಉಪಮುಖ್ಯಮಂತ್ರಿಯಾಗಿ ವೀಕ್ಷಾ ಪಿ.ಎಂ.ಆಯ್ಕೆಯಾಗಿದ್ದಾರೆ.
ವಿದ್ಯಾಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ವರ್ಷಿತ್, ಕ್ರೀಡಾಮಂತ್ರಿಯಾಗಿ ಅಭಿಜಿನ್ ಪಿ., ಸಮಯಪಾಲನಾ ಮತ್ತು ಸ್ವಚ್ಛತಾ ಮಂತ್ರಿಯಾಗಿ ಪ್ರೀತಂ, ತೋಟಗಾರಿಕಾ ಮಂತ್ರಿಯಾಗಿ ವಿಜೇಶ್, ನೀರಾವರಿ ಮಂತ್ರಿಯಾಗಿ ಲೇಖನ್‌ಕುಮಾರ್ ಪಿ.ಜಿ., ಶಿಸ್ತುಪಾಲನಾ ಮಂತ್ರಿಯಾಗಿ ಲೋಚನ, ರಕ್ಷಣಾ ಮಂತ್ರಿಯಾಗಿ ಚಿರಾಗ್ ಪಿ.ಸಿ., ಆಹಾರ ಮಂತ್ರಿಯಾಗಿ ಅಂಜು, ಸಂಸದೀಯ ವ್ಯವಹಾರ ಮಂತ್ರಿಯಾಗಿ ಕುಶಾಂತ್, ಆರೋಗ್ಯ, ವಾರ್ತಾ ಮತ್ತು ಪ್ರಚಾರ ಮಂತ್ರಿಯಾಗಿ ಅಲೀನಾ, ಸಂಪರ್ಕ ಖಾತೆ ಮಂತ್ರಿಯಾಗಿ ಯಜ್ಞೇಶ್ ಎಸ್., ವಿರೋಧ ಪಕ್ಷದ ನಾಯಕಿಯಾಗಿ ಶ್ರೇಯಾ, ಆಯ್ಕೆಗೊಂಡಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಮೋಹನ ಪಿ.ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯಗುರು ಪದ್ಮನಾಭ ಪಿ.,ಪ್ರಮಾಣ ವಚನ ಬೋಧಿಸಿದರು. ಶಾಲಾ ಸರಕಾರದ ಸಂಚಾಲಕ ಪುರಂದರ ಗೌಡ ಡಿ., ಸಹಶಿಕ್ಷಕರಾದ ಜಾಹ್ನವಿ ಐ., ಯೋಗೀಶ, ದಿನೇಶ ಕೆ.ಎಸ್., ಗೌರವ ಶಿಕ್ಷಕಿ ಚಿತ್ರಾ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.