ನಿಪ್ಪಾನ್ ಪೈಂಟ್ಸ್‌ನ ಮಳಿಗೆ ಗಜಾನನ ಟ್ರೇಡರ‍್ಸ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಏಷ್ಯಾದ ನಂಬರ್ ವನ್ ಪೈಂಟ್ ಎಂಬ ಹೆಗ್ಗಳಿಕೆಗೆ ಪಡೆದಿರುವ ನಿಪ್ಪಾನ್ ಪೈಂಟ್‌ನ ಮಳಿಗೆ ಗಜಾನನ ಟ್ರೇಡರ‍್ಸ್ ಜು.10ರಂದು ಸ್ಥಳಾಂತರಗೊಂಡು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿಯಿರುವ ಪಿಂಟೋ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.


ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ. ಎಂ.ಕೆ ಪ್ರಸಾದ್ ಮಾತನಾಡಿ, ನಿಪ್ಪಾನ್ ಪೈಂಟ್ ಉತ್ತಮ ಗುಣಮಟ್ಟದ ಪೈಂಟ್ ಆಗಿದ್ದು ಜಪಾನ್ ತಂತ್ರಜ್ಞಾನದಲ್ಲಿ ತಯಾರಾಗಿರುತ್ತದೆ. ಜಪಾನ್ ಏಷ್ಯಾ, ಭಾರತಕ್ಕೆ ಸಹಕಾರ, ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಎಲ್ಲರೂ ನಿಪ್ಪಾನ್ ಪೈಂಟ್ ಬಳಸಬೇಕು. ಏಷ್ಯಾ ಖಂಡವನ್ನು ಬೆಳೆಸಬೇಕು. ಇತರ ಪೈಂಟ್‌ಗಳಿಗಿಂತ ನಿಪ್ಪಾನ್ ಗುಣಮಟ್ಟದಿಂದ ಕೂಡಿದ್ದು ಮಳೆ, ದೂಳು ಬಂದರೂ ಏನಾಗುವುದಿಲ್ಲ. ಮಾರುತಿ ಕಾರು ಭಾರತದಲ್ಲಿ ತಯಾರಾಗುವಂತೆ ನಿಪ್ಪಾನ್ ಪೈಂಟ್ ಭಾರತದಲ್ಲಿ ತಯಾರಾಗಬೇಕು. ಸಣ್ಣ ಮಳಿಗೆಯಿಂದ ಪ್ರಾರಂಭಗೊಂಡು ಗಜಾನನ ಟ್ರೇಡರ‍್ಸ್ ಇಂದು ಬೃಹತ್ ಮಳಿಗೆಯನ್ನು ಪ್ರಾಂಭಿಸಿದ್ದು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.


ಮುಖ್ಯ ಅತಿಥಿಯಾಗಿದ್ದ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಪೈಂಟ್ ಉದ್ಯಮವನ್ನು ನಡೆಸಿಕೊಂಡು ಪಾರದರ್ಶಕವಾಗಿ ವ್ಯವಹಾರ ನಡೆಸುವ ಮೂಲಕ ಜಿಲ್ಲೆಯ ಜನರ ಮನಸ್ಸು ಗೆದ್ದಿದ್ದು ಬೃಹತ್ ಮಟ್ಟದಲ್ಲಿ ಪ್ರಾರಂಭಿಸಿರುವ ಮಳಿಗೆಗೆ ಪುತ್ತೂರಿನ ಜನತೆಯ ಸಹಕಾರ ದೊರೆಯಲಿ ಎಂದರು.


ಮಾಯಿದೇ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ಲೋಹಿತ್ ಅಜಯ್ ಮಸ್ಕರೇನಸ್ ಮಾತನಾಡಿ, ಸಣ್ಣ ಮಳಿಗೆಯಲ್ಲಿ ವ್ಯವಹಾರ ಪ್ರಾರಂಭಿಸಿ ಕಳೆದ ಎಂಟು ವರ್ಷಗಳಲ್ಲಿ ಜನತೆಗೆ ಉತ್ತಮ ಸೇವೆ ನೀಡಿವ ಮಳಿಗೆ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ ಎಂದರು.


ನಿಪ್ಪಾನ್ ಪೈಂಟ್ಸ್‌ನ ಡಿವಿಜನಲ್ ಸೇಲ್ಸ್ ಮ್ಯಾನೇಜರ್ ಪ್ರಶಾಂತ್ ಕುಂದಾಪುರ ಮಾತನಾಡಿ, ನಿಪ್ಪಾನ್ ಪೈಂಟ್ ದ.ಕ ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಡೆಕೋರೇಟಿಂಗ್, ವಾಟರ್‌ಪ್ರೂಫಿಂಗ್, ಇಂಡಸ್ಟ್ರೀಯಲ್ ಸೇರಿದಂತೆ ಎಲ್ಲಾ ತರದ ಪೈಂಟ್‌ಗಳಿವೆ. ಪೈಂಟಿಂಗ್ ಸರ್ವೀಸ್, ಪೈಂಟ್ ಆಗುವ ಮೊದಲೇ ಕಟ್ಟಡ ಬಣ್ಣ, ಟಚ್ & ಫೀಲ್ ಪ್ಯಾನಲ್ಸ್ ಹಾಗೂ ಉತ್ಕೃಷ್ಠ ತಂತ್ರಜ್ಞಾನದ ಹೆಸರು ಉತ್ಪನ್ನಗಳು, ಲ್ಯಾಮಿನೇಷನ್, ಆಂಟಿ ಫಂಗಸ್ ಪೈಂಟ್‌ಗಳು ಇಂಟೀರಿಯರ್ ಎಕ್ಸ್ಟೀರಿಯರ್ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. 143 ವರ್ಷಗಳ ಇತಿಹಾಸವಿರುವ ಪೈಂಟ್ ಕಂಪನಿಯಾಗಿದ್ದು, 18 ವರ್ಷಗಳಿಂದ ಭಾರತದಲ್ಲಿದ್ದು ದೇಶದಾದ್ಯಂತ ಎಲ್ಲಾ ಕಡೆ ಲಭ್ಯವಿದೆ. ಪುತ್ತೂರಿನ ಮಳಿಗೆ ದ.ಕ ಜಿಲ್ಲೆಯಲ್ಲಿ ಅತೀ ದೊಡ್ಡ ಶೋ ರೂಂ ಆಗಿದ್ದು ಇಲ್ಲಿ ಕಂಪನಿಯ ಎಲ್ಲಾ ತರದ ಪೈಂಟ್‌ಗಳು ಇಲ್ಲಿದೆ ಎಂದರು.


ನಿಪ್ಪಾನ್ ಪೈಂಟ್‌ನ ವ್ಯವಸ್ಥಾಪಕ ಗುಣಪಾಲ ಆಳ್ವ ಮಾತನಾಡಿ, ಅವಿಭಜಿತ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಪ್ರಥಮವಾಗಿ ಪುತ್ತೂರಿನಲ್ಲಿಯೇ ನಿಪ್ಪಾನ್ ಕಂಪನಿಯ ದೊಡ್ಡ ಮಳಿಗೆ ಪ್ರಾರಂಭವಾಗಿದೆ. ಬೇರೆ ಎಲ್ಲಿಯೂ ಇಷ್ಟು ದೊಡ್ಡ ಶೋ.ರೂಂಗಳಿಲ್ಲ. ಇಂತಹ ಮಳಿಗೆಗಳು ಪುತ್ತೂರು ನಗರ ಬೆಳವಣಿಗೆಗೆ ಸಹಕಾರಿಯಾಗಲಿದೆ. ನಿಪ್ಪಾನ್ ಪೈಂಟ್ ಪುತ್ತೂರಿಗೆ ಈ ಹಿಂದೆಯೇ ಬಂದಿದ್ದರೂ ಇಷ್ಟು ದೊಡ್ಡ ಮಳಿಗೆ ಇದೇ ಪ್ರಥಮ ಬಾರಿಗೆ ಪ್ರಾರಂಭವಾಗಿದೆ. ಇಲ್ಲಿ ಕಂಪನಿಯ ಎಲ್ಲಾ ತರದ ಉತ್ಪನ್ನಗಳು ಒಂದೇ ಕಡೆ ದೊರೆಯಲಿದೆ. ಸಾಕಷ್ಟು ಬಣ್ಣಗಳು ಆಯ್ಕೆಗೆ ಲಭ್ಯವಿದೆ. ನಿಪ್ಪಾನ್ ಕಂಪನಿಯ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು.


ಸನ್ಮಾನ:
ನಿಪ್ಪಾನ್ ಪೈಂಟ್‌ನ ಕಂಪನಿಯಿಂದ ಗಜಾನನ ಟ್ರೇಡರ‍್ಸ್‌ನ ಪಾಲುದಾರರಾದ ಶೌರೀಶ್ ಕುಮಾರ್, ಪದ್ಮನಾಭ ರಾವ್, ಉಪ್ಪಿನಂಗಡಿಯ ಮಳಿಗೆ ಮ್ಹಾಲಕ ಸುರೇಶ್ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು.


ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಆದರ್ಶ ಆಸ್ಪತ್ರೆಯ ಡಾ.ಸುಬ್ರಾಯ ಭಟ್, ಕುಂಬ್ರ ಕೆಐಸಿಯ ಕಾರ್ಯದರ್ಶಿ ಎ.ಎಂ ಭಾವ ಹಾಜಿ, ಎಪಿಎಂಸಿ ರಸ್ತೆಯ ಸಲಾಫಿ ಮಸ್ಜಿದ್‌ನ ಅಧ್ಯಕ್ಷ ಯಾಹ್ಯಾ, ಆರ್ಥೋಪೆಡಿಕ್ ಸರ್ಜನ್ ಡಾ.ಭಾಸ್ಕರ್ ಎಂ., ಜೆ,ಕೆ ಕನ್‌ಸ್ಟ್ರಕ್ಷನ್‌ನ ಆಡಳಿತ ನಿರ್ದೇಶಕ ಜಯಕುಮಾರ್ ನಾಯರ್, ಕೆ.ಎಂ ಕನ್‌ಸ್ಟ್ರಕ್ಷನ್‌ನ ಆಡಳಿತ ನಿರ್ದೇಶಕ ಕೆ.ಎಂ ಹಂಝ, ನಿಪ್ಪಾನ್ ಪೈಂಟ್ಸ್‌ನ ಉಪ್ಪಿನಂಗಡಿಯ ವಿತರಕ ಗಜಾನನ ಟ್ರೇಡರ‍್ಸ್‌ನ ಸುರೇಶ್ ಕೆ. ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here