ಗೆಟ್ ವೆಲ್ ಪೆಟ್ ಶಾಪ್, ಸರ್ಜಿಕಲ್ಸ್ ಶುಭಾರಂಭ

0

ಸಾಕು ಪ್ರಾಣಿಗಳ ಆಹಾರ, ಔಷಧಿ, ಪರಿಕರಗಳು, ಸರ್ಜಿಕಲ್ ಸಾಮಾಗ್ರಿಗಳ ಮಳಿಗೆ

ಪುತ್ತೂರು: ಸಾಕು ಪ್ರಾಣಿಗಳ ಆಹಾರ, ಔಷಧಿ, ಪರಿಕರಗಳು ಹಾಗೂ ಸರ್ಜಿಕಲ್ ಸಾಮಾಗ್ರಿಗಳ ಮಳಿಗೆ ಗೆಟ್ ವೆಲ್ ಪೆಟ್ ಶಾಪ್ ಮತ್ತು ಸರ್ಜಿಕಲ್ಸ್ ಜು.18ರಂದು ಬೊಳುವಾರು ಅಹ್ಮದ್ ಟವರ್ಸ್ ನಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಸರಕಾರಿ ಆಸ್ಪತ್ರೆಯ ಡಾ.ಅಜೇಯ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಲವು ಬ್ರಾಂಡೆಡ್ ನ ಸರ್ಜಿಕಲ್ ಸಾಮಾಗ್ರಿಗಳು ಹಾಗೂ ಸಾಕು ಪ್ರಾಣಿಗಳ ಔಷಧಿ, ಆಹಾರಗಳು ಒಂದೇ ಮಳಿಗೆಯಲ್ಲಿ ದೊರೆಯುತ್ತಿದ್ದು ಗ್ರಾಹಕರು ಇದರ ಸದುಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಖತೀಬರಾದ ಅಬೂನಜ ಉಸ್ತಾದ್ ದುವಾಃ ನೆರವೇರಿಸಿದರು. ಮೋಟೋಕಾರ್ ಕಾರ್ ಡೆಕೋರ್ ನ ಖಲಂದರ್, ಉದ್ಯಮಿ ರಜಾಕ್ ಮದೀನ, ಬಾಟಾ ಶೋ.ರೂಂನ ವ್ಯವಸ್ಥಾಪಕ ಮೋಹನ್ ದಾಸ್, ನೌಫಲ್ ಸಂಪ್ಯ, ಮಹಾಲಿಂಗೇಶ್ವರ ಅಟೋ ವರ್ಕ್ಸ್ ನ ಸುಧಾಕರ, ಅಪೋಲೋ ಟಯರ್ ನ ಹರೀಶ್, ನಿಹಾಲ್ ಸಿಮೆಂಟ್ ಪ್ರಾಡಕ್ಟ್ ನ ನಿಹಾಲ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.


ನಮ್ಮಲ್ಲಿ ಡಯಾಬಿಟಿಸ್ ನವರಿಗೆ ಅವಶ್ಯಕವಾದ ಆರ್ಥೋ ಫೂಟ್ ವೇರ್, ಫೂಟ್ ಮ್ಯಾಟ್ರಿಕ್ಸ್, ವ್ಹೀಲ್ ಚೆಯರ್, ಸ್ಟಿಕ್ ಎಲ್ಲಾ ರೀತಿಯ ಸರ್ಜಿಕಲ್ ಸಾಮಾಗ್ರಿಗಳು, ಸಾಕುಪ್ರಾಣಿಗಳಾದ ನಾಯಿ, ಬೆಕ್ಕು ಮತ್ತು ದನಗಗಳಿಗೆ ಆಹಾರ ಔಷಧಿ, ಆಂಟಿಬಯೋಟಿಕ್ ಗಳು, ವಿಶಕನ್, ಪೆಡಿಗ್ರಿ, ಮೀ-ಯೋ, ಡ್ರೂಲ್ಸ್ ಕಂಪನಿಯ ಆಹಾರಗಳು, ಟಾಯ್ಸ್, ಕ್ಯಾಪ್, ಕಾಸ್ಮೆಟಿಕ್, ಬೆಲ್ಟ್, ಸೋಪ್, ಶ್ಯಾಂಪ್, ಅಕ್ವೇರಿಯಂನ ವಿವಿಧ ಉಪಕರಣಗಳು, ಮೀನಿನ ಆಹಾರಗಳು ಮೊದಲಾದ ಸಾಮಾಗ್ರಿಗಳು ಲಭ್ಯವಿದೆ.

ಫ್ರೀ ಹೋಂ ಡೆಲಿವರಿ:
ನಮ್ಮ ಮಳಿಗೆಯಲ್ಲಿ ರೂ.500ರ ಮೇಲ್ಪಟ್ಟ ಸಾಮಾಗ್ರಿಗಳ ಖರೀದಿಗೆ 5 ಕಿ.ಮೀ ದೂರದ ತನಕ ಉಚಿತವಾಗಿ ಡೆಲಿವರಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವ್ಹೀಲ್ ಚೆಯರ್ ರಿಯಾಯಿತಿ ದರದಲ್ಲಿ: ಸಂಘ ಸಂಸ್ಥೆಗಳಿಗೆ ಅಥವಾ ವೈಯಕ್ತಿಕವಾಗಿ ವ್ಹೀಲ್ ಚೆಯರ್ ಕೊಡುಗೆ ನೀಡುವವರಿಗೆ ನಮ್ಮ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here