ಪುತ್ತೂರು : ತಾಲೂಕು ಪಂಚಾಯತ್ ಪುತ್ತೂರು ಹಾಗೂ ಕಂಪಾನಿಯೋ ನೆಮ್ಮದಿ ಸೆಂಟರ್ ಕಲ್ಲಾರೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ತಾಲೂಕು ಪಂಚಾಯತ್ ಇದರ ಸಭಾಂಗಣದಲ್ಲಿ
15 ದಿನಗಳ ಕಾಲ ನಡೆಯಲಿರುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಜು.18 ರಂದು ಪ್ರಾರಂಭಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ದೀಪ ಪ್ರಜ್ವಲನೆ ಮೂಲಕ ಶಿಬಿರಕ್ಕೆ ಚಾಲನೆ ನೀಡಿ, ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಗರಸಭಾ ಪೌರಯುಕ್ತ ಮಧು ಎಸ್ ಮನೋಹರ್ ಭಾಗವಹಿಸಿದರು. ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಇದರ ಮುಖ್ಯಸ್ಥ ಪ್ರಭಾಕರ್ ಕೆ ಸಾಲ್ಯಾನ್ ನೀಡಿ, ಸಾರ್ವಜನಿಕರು ಈ ಉಚಿತ ಶಿಬಿರದ ಪ್ರಯೋಜನ ಪಡೆಯುವಂತೆ ವಿನಂತಿಸಿಕೊಂಡರು.
ಈ ವೇಳೆ ತಾಲೂಕು ಪಂಚಾಯತ್ ವ್ಯವಸ್ಥಾಪಕ ರಾದ ಜಯಪ್ರಕಾಶ್ , ಪಿ.ಡಿ.ಓ. ನಾಗೇಶ್ ಸಹಿತ ತಾಲೂಕು ಪಂಚಾಯತ್ ಇದರ ಎಲ್ಲಾ ಸಿಬಂದಿ ತಂಡ ಮತ್ತು ಸಾರ್ವಜನಿಕರು ಹಾಜರಿದ್ದರು. ನೆಮ್ಮದಿ ವೆಲ್ನೇಸ್ ಸೆಂಟರ್ ಇದರ ಸಿಬಂದಿಗಳಾದ ಪ್ರಶಾಂತ್ ,ಪ್ರಮೀಳಾ ,ಕಾವ್ಯ ಅತಿಥಿಗಳನ್ನು ಸ್ವಾಗತಿಸಿದರು.
ತಾ.ಪಂಚಾಯತ್ ವಲಯ ಮೇಲ್ವಿಚಾರಕಿ ನಮಿತಾ ನಿರೂಪಿಸಿದರು. ಕೀರ್ತನಾ ಸಹಕರಿಸಿದರು. ಆ ಬಳಿಕ ಶಿಬಿರ ಪ್ರಾರಂಭಗೊಂಡಿತು. ಇ.ಓ. ನವೀನ್ ಭಂಡಾರಿ , ಪೌರಯುಕ್ತ ಮಧು.ಎಸ್ ಮನೋಹರ್ ಸಹಿತ ತಾಲೂಕು ಪಂಚಾಯತ್ ಇದರ ಎಲ್ಲಾ ಸಿಬಂದಿಗಳ ಸಹಿತ ಸಾರ್ವಜನಿಕರು ಥೆರಪಿ ಪ್ರಯೋಜನ ಪಡೆದುಕೊಂಡರು.
17 ತಿಂಗಳಿನಲ್ಲಿ 52 ಶಿಬಿರ ಆಯೋಜಿಸಿರುವ ಸಂಸ್ಥೆ…
ನೆಮ್ಮದಿ ವೆಲ್ನೆಸ್ ಸೆಂಟರ್ ಬರೀ 17 ತಿಂಗಳಿನಲ್ಲಿ ಜಿಲ್ಲೆಯ ವಿವಿದೆಡೆ ಉಚಿತ ಫೂಟ್ ಪಲ್ಸ್ ಥೆರಫಿ ಆಯೋಜಿಸಿ, ಸುಮಾರು 19 ಸಾವಿರ ಶಿಬಿರಾರ್ಥಿಗಳು ಪಾಲ್ಗೊಂಡು , 90 ಸಾವಿರದಷ್ಟು ಉಚಿತ ಥೆರಪಿ ಪಡೆದುಕೊಂಡು ಮೂಲಕ ಸಂಪೂರ್ಣವಾಗಿ ನೋವಿನ ಸಮಸ್ಯೆಯಿಂದ ಪಾರಾಗಿದ್ದಾರೆ.