ಸವಣೂರು : ತಾಲೂಕು ಮಟ್ಟದ ಸಾಸ್ಥ್ಯ ಸಂಕಲ್ಪ ಮಾಸಾಚರಣೆ 2024- ಉದ್ಘಾಟನೆ-ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಿಗೆ ಸನ್ಮಾನ

0

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ವಿದ್ಯಾರ್ಥಿಗಳ ಪರಿವರ್ತನೆಗೆ ಉತ್ತಮ ಮಾರ್ಗ – ಪದ್ಮನಾಭ ಶೆಟ್ಟಿ

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ಇದರ ಆಶ್ರಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ 2024 ರ ಉದ್ಘಾಟನೆ ಸವಣೂರು ಸ.ಪ.ಪೂ.ಕಾಲೇಜಿನಲ್ಲಿ ಜು.22ರಂದು ನಡೆಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಉದ್ಘಾಟಿಸಿ ಮಾತನಾಡಿದ ಅವರು ಸ್ವಾಸ್ಥ್ಯ ಸಂಕಲ್ಪದ ಕಾರ್ಯಕ್ರಮವು ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಶಿಕ್ಷಣದ ಬಗ್ಗೆ ಹೆಚ್ಚಿನ ಮಹತ್ವ ವಹಿಸಿಕೊಂಡು ಉತ್ತಮ ಜೀವನ ನಡೆಸಲು ಪ್ರಯತ್ನಿಸಬೇಕು. ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯು ತಾನು ಕೆಡುವುದಲ್ಲದೆ, ಇತರರನ್ನು ಕೆಡಿಸುತ್ತಾನೆ ಎಂದರು.

ಮುಖ್ಯ ಅತಿಥಿಗಳಾಗಿ ಸುಳ್ಯ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ರಾಕೇಶ್ ರೈ ಕೆಡೆಂಜಿ ಮಾತನಾಡಿ, ವಿದ್ಯಾರ್ಥಿಗಳು ತನ್ನ ಸಾಧನೆ ಮಾಡುವುದರ ಮೂಲಕ ತಂದೆ ತಾಯಿಗಳ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ನ್ಯಾಯಾವಾದಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ ಸವಣೂರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ ಕಡಬ ತಾಲೂಕಿನಾದ್ಯಾಂತ ಸ್ವಾಸ್ಥ್ಯ ಸಂಕಲ್ಪದ ಮಾಸಾಚರಣೆ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡುವ ಕೆಲಸವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಡುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕ ಜೆಸಿಐಯ ತರಬೇತುದಾರ ಪ್ರದೀಪ್ ಬಾಕಿಲ ಮಾತನಾಡಿ, ದುಶ್ಚಟಕ್ಕೆ ಒಳಗಾದ ವ್ಯಕ್ತಿಗಳು ಮಾನಸಿಕ, ದೈಹಿಕ, ಕೌಟುಂಬಿಕವಾಗಿ ದೂರವಾಗುವುದಲ್ಲದೆ, ಸಮಾಜದಲ್ಲಿ ತನ್ನ ಸ್ಥಾನಮಾನವನ್ನು ಕಳೆದುಕೊಂಡು ಬದುಕನ್ನು ಹಾಳುಮಾಡಿಕೊಂಡ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಕಾಣುತ್ತಿದ್ದಾರೆ. ನಾವೆಲ್ಲಾ ಉತ್ತಮ ಜೀವನದತ್ತ ಮನಸ್ಸು ಮಾಡಿ ದುಶ್ಚಟಗಳಿಂದ ದೂರವಿರುವ ಪ್ರಯತ್ನ ಮಾಡಬೇಕು ಎಂದರು.

ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಚರಣ್ ಪುದು, ಜಗನ್ನಾಥ ಅರಿಯಡ್ಕ ಅವರನ್ನು ಸನ್ಮಾನಿಸಲಾಯಿತು.ತೀರ್ಪುಗಾರರ ಪರವಾಗಿ ಚಿತ್ರಕಲಾ ಶಿಕ್ಷಕ ಚರಣ್ ಪುದು ಮಾತನಾಡಿ ದುಶ್ಚಟದ ಕುರಿತು ಜಾಗೃತಿಗಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆ ಧನಾತ್ಮಕ ಜಾಗೃತಿ ಎಂದರು.

ವೇದಿಕೆಯಲ್ಲಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ ಎನ್.ಪಿ.,ಸವಣೂರು ಸರಕಾರಿ ಪ್ರೌಢಶಾಲೆಯ ಮುಖ್ಯಗುರು ರಘು ಬಿ ಆರ್, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯದ ಅಧ್ಯಕ್ಷ ಕರುಣಾಕರ ಗೋಗಟೆ, ಜನಜಾಗೃತಿ ವೇದಿಕೆಯ ಆಲಂಕಾರು ವಲಯಾಧ್ಯಕ್ಷ ಇಂದು ಶೇಖರ ಶೆಟ್ಟಿ,ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಯನ ಜಿ ಪಾಲೆಕ್ಕಾರ್, ರೀನಾ ಎಂ ಡಿ, ಸರಸ್ವತಿ ಎಂ, ಕವಿತಾ ಸಿ ಕೆ, ಮಾಮಚ್ಚನ್, ಚರಿತಾ ಕೆ ಬಿ, ದಿವ್ಯ ಬಿ ಸಿ, ರೇಖಾ, ಉಪನ್ಯಾಸಕರಾದ ರಾಜೀವ ಶೆಟ್ಟಿ, ಹರಿಶಂಕರ್, ವಿದ್ಯಾಧರ್ ರೈ, ರಾಜಶೇಖರ್, ನಾಗೇಶ್, ಸೇವಾ ಪ್ರತಿನಿಧಿಗಳಾದ ಶ್ರೀಮತಿ ಪ್ರೇಮ ಆರೆಲ್ತಡಿ, ಶ್ರೀಮತಿ ಅಮಿತಾ ದೇವಸ್ಯ, ಶ್ರೀಮತಿ ಮೀನಾಕ್ಷಿ ದೇವಸ್ಯ, ಕುಮಾರಿ ಕಾವ್ಯ ಕಾಣಿಯೂರು, ಕುಮಾರಿ ಕಾವ್ಯ ಚಾರ್ವಾಕ, ಶ್ರೀಮತಿ ಮನೋರಮ್ಮ ಪುಣ್ಚತ್ತಾರು ಮೊದಲಾದವರು ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ವಿದುಷಿ ಪವಿತ್ರರೂಪೇಶ್ ಪ್ರಾರ್ಥಿಸಿ, ಕಡಬ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಕಿಶನ್ ಬಿ.ವಿ ಕಾಯಕ್ರಮ ನಿರೂಪಿಸಿದರು. ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ವೀಣಾ ಕೆ ವಂದಿಸಿದರು.

LEAVE A REPLY

Please enter your comment!
Please enter your name here