ನಾಡೋಳಿ ಸೇತುವೆ ಬಳಿ ಮಣ್ಣು ಕುಸಿತ – ಶಾಸಕಿ ಭಾಗೀರಥಿ ಮುರುಳ್ಯ ಭೇಟಿ -ಕ್ರಮಕ್ಕೆ ಸೂಚನೆ

0

ಸವಣೂರು: ಪಾಲ್ತಾಡಿ ಗ್ರಾಮದ ಬಂಬಿಲ-ಅಂಕತಡ್ಕ ಸಂಪರ್ಕಿಸುವ ನಾಡೋಳಿ ಸೇತುವೆಯ ಕೂಡು ರಸ್ತೆಯ ಎರಡೂ ಬದಿಗಳಲ್ಲಿಯೂ ಮಣ್ಣು ಕುಸಿಯುತ್ತಿದ್ದು, ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಜು.28ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮತ್ತು ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಟ್ಟವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸೂಚನೆ ನೀಡಿದರು.

 ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಸದಸ್ಯರಾದ ಸತೀಶ್ ಅಂಗಡಿಮೂಲೆ,ಹರೀಶ್ ಕೆ.ಜೆ.ಕಾಯರಗುರಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಮಹಾಶಕ್ತಿ ಕೇಂದ್ರ ಹಾಗೂ ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ  ತಾರಾನಾಥ ಕಾಯರ್ಗ, ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ.,ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸುಳ್ಯ ಮಂಡಲ ಎಸ್.ಸಿ.ಮೋರ್ಚಾ ಕೋಶಾಧಿಕಾರಿ ಸತ್ಯಕುಮಾರ್ ಬಿ.ಎನ್.,ಸವಣೂರು ಶಕ್ತಿ ಕೇಂದ್ರ ಪ್ರಮುಖ್ ,ಸವಣೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸತೀಶ್ ಬಲ್ಯಾಯ, ಸ್ಥಳೀಯರಾದ ಜಗದೀಶ್ ನಾಡೋಳಿ,ದೇವಪ್ಪ ನಾಡೋಳಿ,ಯಮುನಾ ಬಂಬಿಲ, ವಿಕ್ರಂ ರಾಜ್,ಅಕ್ಷಯ್ ಬಿ.ಎಸ್.,ಅನುಷ್,ಚರಣ್ ಕುಮಾರ್, ಜಗತ್ ಕುಮಾರ್, ಪ್ರೀತಮ್ ,ಮಹೇಶ್ ಬಿ.,ಶಶಿಕುಮಾರ್, ಪ್ರವೀಣ್ ಕುಮಾರ್,ದೀಕ್ಷಿತ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here