ಆಲಂಕಾರಿನಲ್ಲಿ ಕಡಬ ತಾಲ್ಲೂಕಿನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮಾಹಿತಿ ಕಾರ್ಯಗಾರ

0

ರೇಷನ್ ಕಾಡ್೯ ಸರ್ವರ್ ಸಮಸ್ಯೆಯನ್ನು ಬಗೆಹರಿಸಿ ಸಭೆಯಲ್ಲಿ ಒತ್ತಾಯ

ಆಲಂಕಾರು: ಕಡಬ ತಾಲ್ಲೂಕಿನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮಾಹಿತಿ ಕಾರ್ಯಗಾರ ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಜಿಲ್ಲಾ ಸಂಯೋಜಕರಾದ ಪ್ರಜ್ವಲ್ ರವರು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ನಡೆಯುವ ಸೇವೆಗಳ ಬಗ್ಗೆ ಮಾಹಿತಿ ನೀಡಿ ಇನ್ನು ಮುಂದೆ ಯಾವ ಸೇವೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಮಾಹಿತಿ ಪಡೆದು ಪ್ರೋಜೆಕ್ಟರ್ ಮೂಲಕ ಮಾಹಿತಿ ತರಬೇತಿ ನೀಡಿ ಗ್ರಾಮ ಒನ್ ನ ಮೂಲಕ ಇನ್ನುಷ್ಟು ಉತ್ತಮ ಸೇವೆ ಜನರಿಗೆ ನೀಡುವಂತೆ ತಿಳಿಸಿದರು.

ರೇಷನ್ ಕಾಡ್೯ ಸರ್ವರ್ ಸಮಸ್ಯೆಯನ್ನು ಸರಿಪಡಿಸಿ
ಕಡಬ ಆಹಾರ ಇಲಾಖೆಯ ಉಪನೀರಿಕ್ಷಕರಾದ ಶಂಕರ್ ರವರು ರೇಷನ್ ಕಾಡ್೯ ತಿದ್ದುಪಡಿಯ ಬಗ್ಗೆ ಮಾಹಿತಿ ನೀಡುತ್ತಿರುವ ಸಂಧರ್ಭದಲ್ಲಿ ಗ್ರಾಮವನ್ ನಾಗರಿಕ ಸೇವಾಕೇಂದ್ರಕ್ಕೆ ರೇಷನ್ ಕಾರ್ಡ್ ಸೇರ್ಪಡೆ ಹಾಗು ಡಿಲಿಟ್ ಗೆ ಅವಕಾಶ ನೀಡಿದ್ದು ದಿವಸದಲ್ಲಿ ಸರ್ವರ್ ಸಮಸ್ಯೆಯಿಂದ ಒಂದು ಅಥವಾ ಎರಡು ರೇಷನ್ ಕಾರ್ಡ್ ಗಳು ತಿದ್ದುಪಡಿ ಗೆ ಬೆಳಿಗ್ಗಿನಿಂದ ಸಂಜೆ ತನಕ ಸಮಯ ತೆಗೆದುಕೊಳ್ಳುತ್ತಿದ್ದು ಇದರಿಂದ ತುಂಬಾ ತೊಂದರೆ ಆಗುತ್ತಿದೆ ಇದನ್ನು ಸರಿಪಡಿಸುವಂತೆ ಗ್ರಾಮವನ್ ಸೇವಾ ಕೇಂದ್ರದವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಆಹಾರ ಉಪನೀರಿಕ್ಷಕರಾದ ಶಂಕರ್ ರವರು 16 ಜಿಲ್ಲೆಗೆ ಒಂದು ಸರ್ವರ್ ಇದ್ದು ಇದರಿಂದ ಗ್ರಾಮವನ್,ಕರ್ನಾಟಕ ವನ್ ,ಆಹಾರ ಇಲಾಖೆ ಹಾಗು ಪಡಿತರ ವಿತರಣೆ ಮಾಡುವವರು ಇದೇ ಒಂದು ಸರ್ವರ್ ನ್ನು ಅವಲಂಬಿಸಿದ್ದು ನಾವು ಕೂಡ ಇದರಿಂದಾಗಿ ಕಷ್ಟ ಅನುಭವಿಸುತ್ತಿದ್ದೇವೆ ನಮ್ಮ ಕಛೇರಿಗೆ ತಿದ್ದುಪಡಿ ಮಾಡಿದ ರೇಷನ್ ಕಾಡ್೯ ಅಪ್ರೋವಲ್ ಮಾಡಲು ನಾವು ಕೂಡ ಕಷ್ಟ ಅನುಭಿಸುತ್ತಿದ್ದೇವೆ .ಅಗಸ್ಟ್ 20 ರ ನಂತರ ಈ ಸರ್ವರ್ ಸಮಸ್ಯೆ ಬಗೆಹರಿಯಬಹುದು ಎಂದು ತಿಳಿಸಿ 2022-23 ನೇ ಸಾಲಿನಲ್ಲಿ ಬಂದ ಒಟ್ಟು 270 ಬಿ.ಪಿ.ಎಲ್ ಕಾಡ್೯ದಾರರ ಅರ್ಜಿಯನ್ನು ಪರಿಶೀಲಿಸಿ,ಅನುಮೋದನೆ ನೀಡುವುದಾಗಿ ತಿಳಿಸಿ.ಹೊಸ ರೇಷನ್ ಕಾಡ್೯ ಗೆ ಅರ್ಜಿ ಗಳು ಇನ್ನು ಪ್ರಾರಂಭವಾಗಿಲ್ಲ ಎಂದು ತಿಳಿಸಿ ಜನರು ಕೆಲವು ಗಾಳಿಸುದ್ದಿಗೆ ಕಿವಿಕೊಡಬಾರದು ಎಂದು ತಿಳಿಸಿದರು.

ಗ್ರಾಮವನ್ ಗೆ ಕೆಲವು ಗ್ರಾ.ಪಂ ಗಳು ಸ್ಪಂದನೆ ನೀಡುತ್ತಿಲ್ಲ
ಸರಕಾರದ ವಿವಿಧ ಸವಲತ್ತುಗಳನ್ನು ಒಂದೇ ಸೂರಿನಡಿಯಲ್ಲಿ ನೀಡಬೇಕೆಂದು ಗ್ರಾಮ ವನ್ ನಾಗರಿಕ ಸೇವಾ ಕೇಂದ್ರವನ್ನು ಆರಂಭಿಸಿದ್ದು. ಗ್ರಾ.ಪಂಗಳು ನರೇಗಾ ಯೋಜನೆಯಡಿಯಲ್ಲಿ ಗ್ರಾಮವನ್ ನಾಗರಿಕ ಸೇವಾ ಕೇಂದ್ರವನ್ನು ಅನುಷ್ಠಾನ ಮಾಡಿದ್ದು ಕೆಲವು ಗ್ರಾ.ಪಂಗಳು ಇದಕ್ಕೆ ಸ್ಪಂದನೆ ನೀಡುತ್ತಿಲ್ಲ ಹಾಗು ಗ್ರಾ.ಪಂ ನಲ್ಲಿರುವ ಕೊಠಡಿಗಳನ್ನು ಕೂಡ ಬಾಡಿಗೆಗೆ ನೀಡದೇ ಅವರು ಏಲಂ ಮಾಡುತ್ತಿದ್ದಾರೆ ಎಂದು ನೆಲ್ಯಾಡಿ ಗ್ರಾಮವನ್ ನಾಗರಿಕ ಸೇವಾ ಕೇಂದ್ರದ ಉಷಾಆಂಚನ್ ರವರು ತಿಳಿಸಿದರು.ಇದಕ್ಕೆ ಉತ್ತರಿಸಿದ ಜಿಲ್ಲಾ ಸಂಯೋಜಕರಾದ ಪ್ರಜ್ವಲ್ ರವರು ಈ ವಿಚಾರವನ್ನು ಮುಂದೆ ಗ್ರಾಮವನ್ ನಾಗರಿಕ ಸೇವಾ ಕೇಂದ್ರದ ನಡೆಯುವ ಜಿಲ್ಲಾಮಟ್ಟದ ಸಭೆಯಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿ. ವಿವಿಧ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಪ್ರೋಜೆಕ್ಟರ್ ಮೂಲಕ ಮಾಹಿತಿ ನೀಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಗ್ರಾಮವನ್ ನಾಗರಿಕ ಸೇವಾ ಕೇಂದ್ರಗಳ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ಮಾತನಾಡಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ಮೂಲಕ ಗ್ರಾಮಸ್ಥರಿಗೆ ಸರಕಾರ ನಿಗದಿಪಡಿಸಿದ ದರದಲ್ಲಿ ನೀಡುತ್ತಿರುವುದು ಸಂತಸದ ವಿಚಾರವಾಗಿದ್ದು,ಗ್ರಾಮವನ್ ನಾಗರಿಕ ಸೇವಾ ಕೇಂದ್ರಕ್ಕೆ ಸಹಕರಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿ ಕಡಬ ತಾಲ್ಲೂಕಿನ ಎಲ್ಲಾ ಗ್ರಾಮ ಒನ್ ನಾಗರಿಕ ಸೇವಾಕೇಂದ್ರದಲ್ಲಿ ಏಕಮುಖವಾದ ಒಂದೇ ತರದ ಸೇವೆಗಳು ದೊರೆಯುವ ಉದ್ದೇಶದಿಂದ ಈ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಸಹಕರಿಸಿದವರಿಗೆಲ್ಲಾ ಅಭಿನಂದನೆ ಸಲ್ಲಿಸಿದರು.ಬಲ್ಪ ಗ್ರಾಮ ಒನ್ ಸೇವಾ ಕೇಂದ್ರ ವಿನೋದ್‌ ರವರು ಒಟ್ಟು ಸಂಘಟನೆ,ಕಾರ್ಯಕ್ರಮದ ವಿವರವನ್ನು ಸಭೆಗೆ ತಿಳಿಸಿದರು.

ಕಡಬ ತಾಲೂಕು ಗ್ರಾಮ ಒನ್ ಸೇವಾಕೇಂದ್ರಗಳಾದ ಬೆಳಂದೂರಿನ ಚಂದ್ರಶೇಖರ, ಕೊಯಿಲದ ಚಿದಾನಂದ, ಸುಬ್ರಹ್ಮಣ್ಯ ದ ಲೋಲಾಕ್ಷಿ ಕೆದ್ಲಾಯ,ಕೊಂಬಾರಿನ ಮಮತಾ,ಐತ್ತೂರಿನ ಪ್ರಜ್ಞಾ,ಸುಬ್ರಹ್ಮಣ್ಯ ದ ಪವಿತ್ರ, ಸವಣೂರಿನ ರಶ್ಮಿ.ಕೆ,ಕೌಕ್ರಡಿಯ ಗುಣಶೀಲಾ,ಗೋಳಿತ್ತೋಟ್ಟಿನ ಲವಣ್ಯ,ಕಾಣಿಯೂರಿನ ನಮಿತಾ, ಕೌಕ್ರಡಿಯ ಅಕ್ಷತಾ,ಮರ್ದಾಳದ ಲೋಲಾಕ್ಷ,ಬಿಳಿನೆಲೆಯ ದೀಕ್ಷಿತ್ ಕುಮಾರ್, ಎಣ್ಮೂರಿನ ರವಿವರ್ಮ ಸೇರಿದಂತೆ ಎಲ್ಲಾ ಕಡಬ ತಾಲೂಕಿನ ಎಲ್ಲಾ ಗ್ರಾಮ ಒನ್ ಸೇವಾ ಕೇಂದ್ರದವರು ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.ನೂಜಿ ಬಾಳ್ತಿಲ ಗ್ರಾಮ ಒನ್ ಸೇವಾ ಕೇಂದ್ರದ ಕಡಬ ತಾಲೂಕು ಗ್ರಾಮ ಒನ್ ಸೇವಾ ಕೇಂದ್ರಗಳ ಕಾರ್ಯದರ್ಶಿ ಪದ್ಮನಾಭ.ಕೆಯವರು ಸ್ವಾಗತಿಸಿ, ರಾಮಕುಂಜ ಗ್ರಾಮ ಒನ್ ಸೇವಾಕೇಂದ್ರದ ಸಂಘದ ಕೋಶಾಧಿಕಾರಿ ಪ್ರವೀಣ್ ರಾಮಕುಂಜ ಧನ್ಯವಾದ ಸಮರ್ಪಿಸಿದರು.ನಂತರ ರಾಷ್ಟಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here