ನಿಡ್ಪಳ್ಳಿ; ಮುಳುಗು ಸೇತುವೆ ಎಂದು ಖ್ಯಾತಿಯ ಶಿಥಿಲಗೊಂಡ ಚೆಲ್ಯಡ್ಕ ಸೇತುವೆ ಮೇಲೆ ಘನ ಗಾತ್ರದ ವಾಹನಗಳ ಒಡಾಟಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿ ಸಣ್ಣ ಪ್ರಮಾಣದ ವಾಹನಗಳ ಒಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.ಆದರೆ ಈ ಸೇತುವೆ ಮೇಲೆ ಸಣ್ಣ ಬಿರುಕು ಉಂಟಾಗಿದ್ದು ಅದನ್ನು ಇತ್ತೀಚೆಗೆ ದುರಸ್ತಿ ಮಾಡಲಾಗಿತ್ತು. ದುರಸ್ತಿ ಕಾಮಗಾರಿ ಮಾಡುವಾಗ ಅಲ್ಲಿಗೆ ಕಾಂಕ್ರೀಟ್ ಹಾಕದೆ ಕೇವಲ ಜಲ್ಲಿ ಹಾಕಿ ಬಿರುಕು ಮುಚ್ಚಿದ್ದರು. ಆದರೆ ಹಾಕಿದ ಜಲ್ಲಿ ಜು.30 ರಂದು ಬಂದ ನೀರಿನಲ್ಲಿ ಕೊಚ್ಚಿ ಹೋಗಿದ್ದು ಈಗ ಮತ್ತೆ ಗುಂಡಿ ಬಿದ್ದ ಕಾರಣ ಅಗತ್ಯ ವಾಹನಗಳ ಒಡಾಟಕ್ಕೆ ತೊಂದರೆ ಉಂಟಾಗಿದೆ.
ಗ್ರಾಮ ಪಂಚಾಯತ್ ನಿಯೋಗ ಭೇಟಿ- ತುರ್ತು ದುರಸ್ತಿಗೆ ಮನವಿ
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ನಿಯೋಗ ಅ.1 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಗುಂಡಿ ಬಿದ್ದ ಕಾರಣ ಸಾರ್ವಜನಿಕರ ಅಗತ್ಯ ಒಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಮತ್ತೆ ತುರ್ತು ದುರಸ್ತಿ ಮಾಡುವಂತೆ ಪಿಡಬ್ಲ್ಯುಡಿ ಇಲಾಖೆಗೆ ಮನವಿ ಮಾಡಲಾಯಿತು.ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ.ಜಿ, ಪಿಡಿಒ ಸೌಮ್ಯ ಹಾಗೂ ಸಿಬ್ಬಂದಿ ಸಂದೀಪ್ ನಿಯೋಗದಲ್ಲಿದ್ದರು.
ಸೇತುವೆಯ ಮೇಲೆ ಇದ್ದ ಬಿರುಕನ್ನು ದುರಸ್ತಿ ಮಾಡಲಾಗಿತ್ತು. ಆದರೆ ಮತ್ತೆ ಸೇತುವೆ ಮೇಲೆ ನೀರು ಹರಿದು ಗುಂಡಿ ಬಿದ್ದಿದೆ. ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರ ಅಗತ್ಯ ಒಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ದುರಸ್ತಿ ಮಾಡುವಂತೆ ಪಿಡಬ್ಲ್ಯುಡಿ ಇಲಾಖೆಗೆ ಮನವಿ ಮಾಡಲಾಗಿದೆ. ಪಂಚಾಯತಿನಿಂದ ಆಗುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿದ್ಯಾಶ್ರೀ, ಅಧ್ಯಕ್ಷರು
ಬೆಟ್ಟಂಪಾಡಿ ಗ್ರಾಮ ಪಂಚಾಯತ್