ರೋಟರಿ ಪುತ್ತೂರು ಸ್ವರ್ಣದಿಂದ ಆಟಿ ಕೂಟ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಆ.1ರಂದು ರೋಟರಿ ಮನಿಷಾ ಸಭಾಂಗಣದಲ್ಲಿ ಆಟಿ ಕೂಟ ಕಾರ್ಯಕ್ರಮವನ್ನು ತೆಂಗಿನ ಕಾಯಿ ಕುಟ್ಟುವ ಮೂಲಕ ವಿಶೇಷವಾಗಿ ಉದ್ಘಾಟಿಸಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯರಾದ ನಿರಂಜನ್ ರೈ ಮಠಂತಬೆಟ್ಟುರವರು ತುಳುನಾಡಿನ ವೈಶಿಷ್ಟ್ಯತೆಗಳು ವಿಚಾರದ ಕುರಿತು ಮಾತನಾಡುತ್ತಾ ತುಳು ಭಾಷೆಯ ವಿಶೇಷತೆಗಳು ಮತ್ತು ಆಟಿ ತಿಂಗಳಿನ ವಿಶೇಷತೆಯ ಕುರಿತು ಮಾಹಿತಿಯನ್ನು ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಪರಿಷತ್ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಲಬ್ ವತಿಯಿಂದ ನಿರಂಜನ್ ರೈ ಮಠಂತಬೆಟ್ಟು ಹಾಗೂ ಕುಂಬ್ರ ದುರ್ಗಾಪ್ರಸಾದ್ ರೈ ಇವರುಗ ಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿಕೊಂಡ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಅಧ್ಯಕ್ಷರಾದ ಸುರೇಶ್ ಪಿ ಇವರು, ಆಟಿ ತಿಂಗಳಿನ ಬಾಲ್ಯದ ನೆನಪುಗಳನ್ನು ತಿಳಿಸುತ್ತಾ ತುಳು ಭಾಷೆ ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಆದಷ್ಟು ಬೇಗ ಆಂಗೀಕಾರವಾಗಲಿ. ಇದಕ್ಕಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ವಲಯ 5 ರ ವಲಯ ಸೇನಾನಿ ಸೂರ್ಯನಾಥ ಆಳ್ವ, ವಲಯ ಸೇನಾನಿ ವೆಂಕಟರಮಣ ಗೌಡ ಕಳುವಾಜೆ, ಕ್ಲಬ್ ಜಿ.ಎಸ್.ಆರ್. ಚಿದಾನಂದ ಬೈಲಾಡಿ ಇವರು ಶುಭ ಹಾರೈಸಿದರು. ಕ್ಲಬ್ ಕಾರ್ಯದರ್ಶಿ ಸೆನೋರಿಟಾ ಆನಂದ್ ವಾರದ ವರದಿಯನ್ನು ಮಂಡಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಚ ಸುಂದರ ರೈ ಬಲ್ಕಾಡಿ ವಂದಿಸಿದರು. ಸದಸ್ಯೆ ಮೀನಾಕ್ಷಿ ಪ್ರಾರ್ಥಿಸಿದರು. ದೀಪಕ್ ಬೊಳ್ವಾರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ರೋಟರಿ ಕ್ಲಬ್‌ನ ಅಧ್ಯಕ್ಷರು ಸದಸ್ಯರು ಹಾಗೂ ಪುತ್ತೂರಿನ ವಿವಿಧ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ರೋಟರಿ ಕ್ಲಬ್‌ನ ಸದಸ್ಯರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಆಟಿಗೆ ಸಂಬಂಧಿಸಿದ ವಿವಿಧ ಬಗೆಯ ಖಾದ್ಯಗಳನ್ನು ಸವಿದರು.

LEAVE A REPLY

Please enter your comment!
Please enter your name here