*ಸಂಸ್ಥೆಯ ಮೇಲಿನ ಜನರ ವಿಶ್ವಾಸ ಸಂಸ್ಥೆಯ ಬೆಳವಣಿಗೆಗೆ ಪೂರಕ: ಶಕುಂತಳಾ ಟಿ. ಶೆಟ್ಟಿ
*ಇದೊಂದು ಯುವಕರ ಕನಸಿನ ಯೋಜನೆಯಾಗಿದೆ: ಶಕೂರ್ ಹಾಜಿ
*ಪ್ರತಿಯೊಂದೂ ಯೋಜನೆಗಳು ಬಡವರಿಗೆ ಪೂರಕವಾಗಿದೆ: ನೇಹಾ ಅನೀಶ್ ಪೂಜಾರಿ
ಪುತ್ತೂರು: ವಿಷನ್ ಇಂಡಿಯಾ ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ಈ ಒಂದು ಯೋಜನೆಗೆ ಇಳಿದಿದೆ. ನೀವುಗಳು ಇದರಲ್ಲಿ ಯಶಸ್ಸಾಗಿ. ಯಾರೆಲ್ಲಾ ಈ ಯೋಜನೆಯಲ್ಲಿ ಭಾಗಿಯಾಗುತ್ತಾರೋ ಅವರೆಲ್ಲರಿಗೂ ನಿಮ್ಮಿಂದ ಉತ್ತಮ ಸೇವೆ ಸಿಗುವಂತಾಗಲಿ. ಯಾವುದೇ ವ್ಯವಹಾರದಲ್ಲಿ ಜನರ ವಿಶ್ವಾಸಗಳಿಸುವುದು ಅತೀ ಮುಖ್ಯ. ಜನರು ನಮ್ಮ ಮೇಲೆ ವಿಶ್ವಾಸ ಇರಿಸಿದಾಗ ಸಂಸ್ಥೆ ಬೆಳೆಯಲು ಪೂರಕ. ಜನರ ವಿಶ್ವಾಸನೀಯ ಸಂಸ್ಥೆ ಇದಾಗಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಅವರು ಆ.5ರಂದು ಪುತ್ತೂರಿನ ಮೀನು ಮಾರುಕಟ್ಟೆ ಸಮೀಪ ಇರುವ ಯೂನಿಯನ್ ಬಿಲ್ಡಿಂಗ್ ನಲ್ಲಿ ಆರಂಭಗೊಂಡ ಸ್ಕೀಮ್ ಹಾಗೂ ಸೇವಿಂಗ್ ಯೋಜನೆಯ ಇತಿಹಾಸದಲ್ಲೇ ಅತೀ ದೊಡ್ಡ ಬಹುಮಾನವನ್ನು ನೀಡಲು ಹೊರಟಿರುವ ಮಂಗಳೂರಿನ ಪ್ರತಿಷ್ಠಿತ ವಿಷನ್ 2 ಇಂಡಿಯಾ ಎಲೆಕ್ಟ್ರಾನಿಕ್ಸ್ & ಫರ್ನೀಚರ್ ನ ಪುತ್ತೂರು ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ ರವರು ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಇದೊಂದು ಯುವಕರ ಕನಸಿನ ಯೋಜನೆಯಾಗಿದೆ. ಇದು ಉತ್ತಮ ರೀತಿಯಲ್ಲಿ ಬೆಳೆಯಲಿ. ಇದೊಂದು ವ್ಯವಸ್ಥಿತ ಯೋಜನೆಯಾಗಿದ್ದು, ಎಲ್ಲರೂ ಒಟ್ಟಾಗಿ ಸಹಕರಿಸೋಣ ಎಂದರು.
ಯೂಟೂಬರ್ ನೇಹ ಅನೀಶ್ ಪೂಜಾರಿ ಮಾತನಾಡಿ ನಾವು ಕೂಡ ವಿಷನ್ ಇಂಡಿಯಾದ ಒಂದು ಭಾಗವಾಗಿದ್ದೇವೆ. ಇದರ ಪ್ರತಿಯೊಂದೂ ಯೋಜನೆಗಳು ಬಡವರಿಗೆ ಪೂರಕವಾಗಿದೆ. ಪ್ರತಿಯೊಬ್ಬರೂ ಈ ಸ್ಕೀಮ್ ಗೆ ಜಾಯಿನ್ ಆಗಿ, ಬಂಪರ್ ಪ್ರೈಸ್ ಸಿಗದಿದ್ದರೂ ನೀವು ಕಟ್ಟಿದ ಹಣಕ್ಕೆ ಯಾವುದೇ ಮೋಸವಾಗದ ರೀತಿಯಲ್ಲಿ ಉತ್ತಮ ಬೆಲೆಯ ಪ್ರಾಡಕ್ಟ್ ಗಳನ್ನು ನೀಡುತ್ತಾರೆ. ಎಲ್ಲರೂ ಜಾಯಿನ್ ಆಗಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಪದ್ಮರಾಜ್ ಆರ್ ಪೂಜಾರಿ, ಮುಸ್ಲೀಂ ಯುವಜನ ಪರಿಶತ್ ನ ಮಾಜಿ ಅಧ್ಯಕ್ಷ ಅಶ್ರಫ್ ಕಲ್ಲೇಗ, ವಿಶೇಷ ಆಕರ್ಷಣೆಯಾಗಿ ಯೂಟೂಬರ್ ಗಳಾದ ಅನಿಲ್ ಪೂಜಾರಿ, ಜೀವನ್ ಕೆರೆಮೂಲೆ, ಬಲ್ನಾಡು ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ನಾಟೆಕಲ್ಲು,
ಅನ್ಸಾರುದ್ದೀನ್ ಜಮಾತ್ ಕಮೀಟಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಪ್ರಮುಖರಾದ ಹನೀಶ್ ಮೋನು ಬಪ್ಪಳಿಗೆ, ಶರೀಪ್ ಬಲ್ನಾಡು, ನಸೀರ್ ಬಲ್ನಾಡು, ಹಮೀದ್ ಹಾಜಿ ಬಲ್ನಾಡು, ಉದಯ ಶೆಟ್ಟಿಗಾರ್, ಉಮೇಶ್ ಪೂಜಾರಿ, ನೂರ್ ಮಹಮ್ಮದ್ ವಿಟ್ಲ, ಶಿವರಾಮ ಆಳ್ವಾ, ರಫೀಕ್ ಯು.ಪಿ. ಬಲ್ನಾಡ್, ಬಾತೀಶ್ ಅಳಕೆಮಜಲು, ರಾಜೇಶ್ ಬನ್ನೂರು, ಹಸನ್ ಕಟ್ಪಾಡಿ, ಸೂಫಿ ಮಾಡಾವು, ಇಫಾಸ್ ಬನ್ನೂರು, ಹಸೀಸ್ ಮಾಡಾವು, ಇರ್ಶಾದ್, ಹಬೀಬ್ ಮೊದಲಾದವರು ಉಪಸ್ಥಿತರಿದ್ದರು. ರಝಾಕ್ ಸಾಲ್ಮರ ಸ್ವಾಗತಿಸಿ ಕಾರ್ಯಕ್ರಮದ ನಿರೂಪಿಸಿ, ವಂದಿಸಿದರು. ಪಾಲುದಾರರಾದ ಸಾಬಿತ್ ಕುಂಬ್ರ, ಸಲಾಂ ಸಮ್ಮಿ, ಅನ್ವರ್ ಶಾ, ಮಂಚು ಕೆ.ಎಲ್. ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಪ್ರಮುಖರಾದ ರಿಝ್ವಾನ್ ಕುಂತೂರು, ಇರ್ಷಾದ್ ಮುಕ್ಚೆ, ಹನೀಸ್ , ಹಾರೀಸ್, ಸುಹೈಲ್ ಕುಂತೂರು, ಫಝ್ರೀದ್, ಮುಸ್ತಫ ಕೆ.ಎಲ್. ಸಹಕರಿಸಿದರು.
ತಿಂಗಳಿಗೆ ಸಾವಿರ ರೂಪಾಯಿ. ಒಟ್ಟು 24 ತಿಂಗಳು:
ಈ ಸ್ಕೀಂ ಸೇರಿದ ಸದಸ್ಯರು ತಿಂಗಳಿಗೆ ಸಾವಿರ ರೂಪಾಯಿಯಂತೆ ಒಟ್ಟು 24 ತಿಂಗಳು ಕಟ್ಟಬೇಕು. ಪ್ರತೀ ತಿಂಗಳ 15ರಂದು ಬಂಪರ್ ಡ್ರಾ ನಡೆಯಲಿದ್ದು, ಒಟ್ಟು 10 ಸುಸಜ್ಜಿತ ಮನೆ, 17 ಕಾರು, 90 ಟೂ ವಿಲರ್ಸ್ ಬೈಕ್, 70 ಐಪೋನ್, 1 ಕೋಟಿ ವರೆಗೆ ನಗದು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಬಹುಮಾನ ಲಕ್ಕೀ ಡ್ರಾ ಮೂಲಕ ಸಿಗಲಿದೆ. ಒಮ್ಮೆ ಡ್ರಾ ಆದ ಸದಸ್ಯರು ಮತ್ತೆ ಹಣ ಕಟ್ಟಬೇಕಾಗಿಲ್ಲ. ಹಾಗೆಯೇ 24 ತಿಂಗಳು ಹಣ ಕಟ್ಟಿ, ಯಾವುದೇ ಡ್ರಾ ಆಗದ ಸದಸ್ಯರಿಗೆ ಅವರು ಕಟ್ಟಿದ ಒಟ್ಟು ಮೊತ್ತದ ಹಣಕ್ಕೆ ಹೊಂದುವಂತಹ ಬಹುಮಾನಗಳು ಸಿಗಲಿದೆ.
ಸ್ಕೀಂ ಇತಿಹಾಸದಲ್ಲಿಯೇ ಅತೀ ಹೆಚ್ಚು ಬಹುಮಾನವನ್ನು ಕೊಡುವ ಸಂಸ್ಥೆ ಎಂಬ ಹೆಗ್ಗಳಿಕೆ:
ವಿಷನ್ 2 ಇಂಡಿಯಾ ಸಂಸ್ಥೆಯು ಬಡವರ ಪಾಲಿಗೆ ಬೆಳಕಾಗುವ ವಿಭಿನ್ನ, ವಿಶಿಷ್ಟ ಯೋಜನೆಯಾಗಿದೆ. ಸೀಸನ್ 01ರ ಯಶಸ್ವಿಯ ಬಳಿಕ, ಇದೀಗ ಸೀಸನ್ 02 ಆರಂಭಿಸಿದ್ದು ಅದೃಷ್ಟ ವ್ಯಕ್ತಿಗಳಿಗೆ ಮನೆ, ಕಾರು, ಬೈಕ್, ಆಕ್ಟೀವಾ, ಮೊಬೈಲ್ ಫೋನ್, ಚಿನ್ನ, ನಗದು ಹೀಗೆ ಲಕ್ಷಾಂತರ ಮೌಲ್ಯದ ಬಹುಮಾನಗಳು ದೊರಕಲಿದ್ದು, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ ಅಂತಿಮವಾಗಿ ಅವರು ಕಟ್ಟಿದ ಹಣಕ್ಕೆ ಹೊಂದುವ, ಯಾವುದೇ ನಷ್ಟವಾಗದ ರೀತಿಯಲ್ಲಿ 15 ವಿವಿಧ ರೀತಿಯ ಬಹುಮಾನಗಳು ಸಿಗಲಿದೆ.
ಬೆಸ್ಟ್ ಇನ್ವೆಸ್ಟ್ ಮೆಂಟ್ ಕಂಪೆನಿ ಆಫ್ ದ ಇಯರ್ :
ಈ ಸಂಸ್ಥೆಗೆ 2023ರ ದುಬೈ ಸಮ್ಮಿಟ್ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಸ್ಟ್ ಇನ್ವೆಸ್ಟ್ ಮೆಂಟ್ ಕಂಪೆನಿ ಎಂಬ ಅವಾರ್ಡ್ ಕೂಡ ದೊರಕಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ
8197103223 , 7204695652 , 9663659906, 7090101166 ಗೆ ವಾಟ್ಸ್ಯಾಪ್ ಮೆಸೇಜ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಸೀಸನ್ ಒಂದನ್ನು ಯಶಸ್ವಿಯಾಗಿ ಪೂರೈಸಿ ಸೀಸನ್ ಎರಡು ಆರಂಭ
ಇದೊಂದು ಸೇವಿಂಗ್ಸ್ ಪ್ಲ್ಯಾನ್ ಆಗಿದೆ. 1000 ರೂಪಾಯಿಯ ಹಾಗೆ 24 ತಿಂಗಳು ಕಟ್ಟಬೇಕಿದೆ. ಕೊನೆಯಲ್ಲಿ ಡ್ರಾ ವಿಜೇತರಾಗದ ಸದಸ್ಯರಿಗೆ ಅವರಿಗೆ ಬೇಕಾದ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡಲಿದ್ದೇವೆ. ತಾವುಗಳು ಕಡಿಮೆ ಮೊತ್ತದ ವಸ್ತುಗಳನ್ನು ತೆಗೆದುಕೊಂಡಲ್ಲಿ ಉಳಿದ ಹಣವನ್ನು ನೀಡಲಾಗುವುದು. ಇಡೀ ಕರ್ನಾಟಕದಲ್ಲಿ 20000 ಸದಸ್ಯರನ್ನು ಮಾಡುವ ಯೋಜನೆ ನಮ್ಮದಾಗಿದೆ. ಅದರಲ್ಲಿ 3000 ಸದಸ್ಯರು ವಿಜೇತರಾಗಲಿದ್ದಾರೆ. ಈ ಯೋಜನೆಯಲ್ಲಿ 15ಕಾರು, 90 ದ್ವಿಚಕ್ರವಾಹನ, 70 ಐಫೋನ್ ಸೇರಿದಂತೆ ಹತ್ತು ಹಲವು ಬಹುಮಾನಗಳಿವೆ. ಮನೆ ವಿಜೇತರಾದ ಸದಸ್ಯರಿಗೆ ಅವರ ಊರಿನಲ್ಲಿ ಅವರಿಗೆ ಬೇಕಾದ ಮನೆಯನ್ನು ಕಟ್ಟಿಕೊಡಲಾಗುವುದು. ನಮ್ಮದೇ ಕಂಪೆನಿಯಲ್ಲಿ ತಯಾರಾಗುವ ಎಲೆಕ್ಟ್ರೋನಿಕ್ಸ್ ಐಟಂಗಳನ್ನು ವಿಜೆಡತರಾಗದ ಸದಸ್ಯರಿಗೆ ನೀಡುವ ನಿಟ್ಟಿಲ್ಲಿ ಗುಣಮಟ್ಟದ ವಸ್ತುಗಳನ್ನು ನಮಗೆ ನೀಡಲು ಸಾಧ್ಯವಾಗುತ್ತಿದೆ. ಬಡ, ಮಧ್ಯಮ ವರ್ಗದ ಜನರಿಗೂ ಒಂದು ಸ್ವಂತ ಮನೆ ಇರಬೇಕು ಎನ್ನುವುದು ನಮ್ಮ ಆಸೆಯಾಗಿದೆ. ಈಗಾಗಲೇ ಸೀಸನ್ ಒಂದನ್ನು ನಾವು ಯಶಸ್ವಿಯಾಗಿ ಪೂರೈಸಿ ಸೀಸನ್ ಎರಡನ್ನು ಆರಂಭಿಸಿದ್ದೇವೆ. ಹಿಂದಿನಂತೆಯೇ ಈ ಭಾರಿಯೂ ಎಲ್ಲರ ಸಹಕಾರ ಇರಲಿ
ಸಿರಾಜ್ ಎರ್ಮಾಲ್ ,ಪಾಲುದಾರರು