ಪುತ್ತೂರು: ತಾಲೂಕು ಮಹಿಳಾ ಬಂಟರ ವಿಭಾಗದಿಂದ ಆ.7ರಂದು ಪುತ್ತೂರು ಎಂ.ಸುಂದರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆಟಿದ ಕೂಟ ಜರಗಿತು. ತಾಲೂಕು ಮಹಿಳಾ ಬಂಟರ ವಿಭಾಗದ ಗೌರವಧ್ಯಕ್ಷೆ ಮಲ್ಲಿಕಾ ಪ್ರಸಾದ್ ದೀಪ ಬೆಳಗಿಸಿ, ಕಾರ್‍ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ವಹಿಸಿದ್ದರು. ತಾಲೂಕು ಬಂಟರ ಸಂಘದ ಜೊತೆ ಕಾರ್‍ಯದರ್ಶಿ ಪುಲಸ್ಯ ರೈಯವರು ಆಟಿ ತಿಂಗಳ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.
ವೇದಿಕೆಯಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಬಂಟ ಸಮಾಜದ ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾೖಕ್, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಮಹಿಳಾ ಬಂಟರ ವಿಭಾಗದ ನಿಕಟಪೂರ್ವಾಧ್ಯಕ್ಷೆ ಸಬಿತಾ ಭಂಡಾರಿ, ಮಾಜಿ ಅಧ್ಯಕ್ಷೆ ಕುಮುದಾ ಎಲ್.ಎನ್.ಶೆಟ್ಟಿರವರುಗಳು ಉಪಸ್ಥಿತರಿದ್ದರು. ಬಂಟರ ವಿಭಾಗದ ಪ್ರಧಾನ ಕಾರ್‍ಯದರ್ಶಿ ಕುಸುಮ ಪಿ.ಶೆಟ್ಟಿ ಕೆರೆಕೋಡಿ ಸ್ವಾಗತಿಸಿ, ಕೋಶಾಧಿಕಾರಿ ಅರುಣಾ ಡಿ.ರೈ ವಂದಿಸಿದರು. ಮಹಿಳಾ ವಿಭಾಗದ ನಿಕಟಪೂರ್ವ ಕಾರ್‍ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು. ಸ್ವರ್ಣಲತಾ ಜೆ.ರೈರವರು ಸಹಕರಿಸಿದರು. ಇದೇ ವೇಳೆ ಮಹಿಳಾ ಬಂಟರ ಸಂಘದಿಂದ ಆರೋಗ್ಯ ಮತ್ತು ಶಿಕ್ಷಣಕ್ಕೆ ಧನಸಹಾಯವನ್ನು ನೀಡಲಾಯಿತು. ಮಹಿಳಾ ಬಂಟರು ತಯಾರಿಸಿದ ಸುಮಾರು 55 ಬಗೆಯ ವಿವಿಧ ಆಹಾರ ಆಟಿದ ಕೂಟದ ವಿಶಿಷ್ಟವಾಗಿತ್ತು. ಸಮಾರಂಭದಲ್ಲಿ ಬಂಟರ ಸಂಘ, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗ ಪದಾಧಿಕಾರಿಗಳು ಭಾಗವಹಿಸಿದರು.