ನಾಳೆ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ‌ 14ನೇ ವರ್ಷದ ವರಮಹಾಲಕ್ಷ್ಮಿ‌ ವೃತ ಪೂಜೆ

0

ಪುತ್ತೂರು: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಆಶ್ರಯದಲ್ಲಿ‌ ಪ್ರಗತಿಬಂಧು ಸ್ವಸಹಾಯ ಸಂಘಗಳ‌ ಒಕ್ಕೂಟ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ, ಶಾಂತಿನಗರ ಮತ್ತು ಸೇಡಿಯಾಪು ಇದರ ಸಹಕಾರದೊಂದಿಗೆ 14ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಆ.16ರಂದು ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯೀ ಸಭಾಂಗಣದಲ್ಲಿ ನಡೆಯಲಿದೆ.


ಬೆಳಿಗ್ಗೆ ಕಲಶ ಪ್ರತಿಷ್ಠೆ ಹಾಗೂ ಶ್ರೀ ವರಮಹಾಲಕ್ಷ್ಮಿ‌ ಪೂಜೆ ಪ್ರಾರಂಭ, ಲಲಿತ ಸಹಸ್ರನಾಮ‌ ಪಾರಾಯಣ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here