ಆರನೇ ಆವೃತಿಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಟಾಪ್ ಟೆ‌ನ್ ಲಕ್ಕಿ ಸ್ಕೀಂ – ಬಂಪರ್ ಡ್ರಾ ವಿಜೇತರಿಗೆ ಕಾರಿ‌ನ ಕೀ ಹಸ್ತಾಂತರ – ಹಲವಾರು ವಿಶೇಷತೆಗಳೊಂದಿಗೆ ಏಳನೇ ಆವೃತಿ ಆರಂಭ

0

ಪುತ್ತೂರು: ಟಾಪ್ ಟೆನ್ ಲಕ್ಕಿ ಸ್ಕೀಮ್ ನ ಆರನೇ ಆವೃತ್ತಿಯ  ಬಂಪರ್ ಡ್ರಾ ಎಂ.ಟಿ.ರಸ್ತೆಯಲ್ಲಿರುವ ಎ.ಹೆಚ್. ಹಿಂದುಸ್ತಾನ್ ಸಿಟಿ ಮಾರ್ಕೆಟ್‌ನ ಪ್ರಥಮ ಮಹಡಿಯಲ್ಲಿರುವ ಟೋಪ್ ಟೆನ್‌ನ ಕಚೇರಿಯಲ್ಲಿ ನಡೆಯಿತು. 
ದೇವಿಪ್ರಸಾದ್ ಬೆಳ್ಳಾರೆ ಬಂಪರ್ ಡ್ರಾ ವಿಜೇತರಾದರು.  ವೆಂಕಟೇಶ್ ಪುತ್ತೂರು, ಪುನಿತ್ ಕುಮಾರ್ ರೈ, ಪ್ರವೀಣ್ ಪೂಜಾರಿ, ಫಾರುಕ್ ಫೈನ್ ಫ್ಯಾಬ್ರಿಕ್ಸ್, ಉಮ್ಮಾರ್ ಪೆರಿಗೇರಿ, ನವಾಝ್ ಸಾಲ್ಮನ್‌, ಆಸೀಫ್ ಬಲ್ನಾಡು, ಶಫೀಕ್ ಪುತ್ತೂರು ಜುನೈದ್ ಸಾಲ್ಮರ ಮೊದಲಾದವರು ಡ್ರಾ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಕಾರಿನ ಕೀ ಹಸ್ತಾಂತರ: 
ಬಂಪರ್ ಬಹುಮಾನ ವಿಜೇತರಾದ ದೇವಿಪ್ರಸಾದ್ ಬೆಳ್ಳಾರೆರವರಿಗೆ ಆ.13ರಂದು ಕಾರಿನ ಕೀ ಹಸ್ತಾಂತರ ಮಾಡಲಾಯಿತು‌. ಈ ಸಂದರ್ಭದಲ್ಲಿ ಜುನೈದ್ ಸಾಲ್ಮರ, ಪ್ರವೀಣ್ ಬಲ್ನಾಡು,ಶಫೀಕ್ ಮೈದಾನ ಮೂಲೆ ಮೊದಲಾದವರು ಉಪಸ್ಥಿರಿದರು.

ಟಾಪ್‌ ಟೆನ್  ಲಕ್ಕಿ ಸ್ಕೀಮ್ ನ ಏಳನೇ ಆವೃತಿ ಪ್ರಾರಂಭ: 
ಈಗಾಗಲೇ ಆರು ಆವೃತಿಯನ್ನು ಪೂರ್ಣಗೊಳಿಸಿರುವ ಸಂಸ್ಥೆ ಏಳನೇ ಆವೃತ್ತಿಯನ್ನು ಆರಂಭಿಸಿದೆ. ಕಳೆದ ಆರು ಆವೃತಿಗಿಂತ ವಿಭಿನ್ನವಾಗಿ ಏಳನೇ ಆವೃತಿಯನ್ನು ನಡೆಸಲು ತೀರ್ಮಾನಿಸಿರುವ ಸಂಸ್ಥೆಯ ಪಾಲುದಾರರು   ಮನೆ, ಕಾರು, ದ್ವಿಚಕ್ರವಾಹನ, ಎಲೆಕ್ಟ್ರೋನಿಕ್ಸ್ ಐಟಂಗಳು ಹೀಗೆ ಹಲವಾರು ಬೆಲೆಬಾಳುವ ವಸ್ತುಗಳನ್ನು ವಿಜೇತರಿಗೆ ನೀಡಲಿದೆ.

ಫ್ಲ್ಯಾಟ್ – ಕಾರು ಗೆಲ್ಲುವ ಸುವರ್ಣಾವಕಾಶ:  

ಟಾಪ್ ಟೆನ್ ಲಕ್ಕಿ ಸ್ಕೀಂ ಕಳೆದ ಆರು ಆವೃತಿಗಳಲ್ಲಿಯೂ ತಮ್ಮ ಸದಸ್ಯರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವುದರೊಂದಿಗೆ ಜನರ ವಿಶ್ವಾಸ ಗಳಿಸಿದೆ ಮಾತ್ರವಲ್ಲದೆ ಪ್ರತಿಯೊಂದು ಸ್ಕೀಮ್ ನಲ್ಲಿಯೂ ಒಂದಲ್ಲ ಒಂದು ವಿಶೇಷತೆಗಳನ್ನು ಹೊಂದಿತ್ತು. ಈ ಭಾರಿಯ  ಸದಸ್ಯರಿಗೆ ಎರಡು ಬೆಡ್ ರೂಮ್‌ನ ಒಂದು ಮನೆ, ಒಂದು ಕಾರು, ಹತ್ತು ಬೈಕ್, 11 ಚಿನ್ನದ  ಚೈನ್, 1 ಆಕ್ಟೀವಾ ಹೋಂಡವನ್ನು ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.

ಪ್ರತೀ ಹದಿನೈದು ದಿನಗಳಿಗೊಮ್ಮೆ 500 ಪಾವತಿ: 
ಟಾಪ್ ಟೆನ್ ಲಕ್ಕಿ ಸ್ಟೀಂ ನ ಏಳನೇ ಆವೃತಿಯ ಪ್ರಥಮ ಡ್ರಾ ಅ.1ರಂದು ನಡೆಯಲಿದ್ದು, ಪ್ರತೀ ಹದಿನೈದು ದಿನಗಳಿಗೊಮ್ಮೆ 500 ರೂಪಾಯಿಯಂತೆ 40 ಕಂತುಗಳನ್ನು ಪಾವತಿಸಬೇಕಾಗಿದೆ. ಪ್ರತೀ ತಿಂಗಳ 1 ಹಾಗೂ 16ನೇ ದಿನಾಂಕದಂದು ಸಾಯಂಕಾಲ ಐದು ಗಂಟೆಗೆ ಕಚೇರಿಯಲ್ಲಿ ಡ್ರಾ ನಡೆಯಲಿದ್ದು, ಡ್ರಾ ವಿಜೇತರಾದ ಸದಸ್ಯರು ಮುಂದಿನ ಕಂತು ಕಟ್ಟಬೇಕಾಗಿಲ್ಲ. ಉಳಿದಂತೆ 40 ಕಂತುಗಳನ್ನು ಕಟ್ಟಿ ವಿಜೇತರಾಗದೆ ಉಳಿದ ಸದಸ್ಯರಿಗೆ ಬ್ರಾಂಡೆಟ್ ಕಂಪನಿಗಳ ಎಲೆಕ್ಟೋನಿಕ್ಸ್ ಐಟಂಗಳನ್ನು ಉತ್ತಮ ವ್ಯಾರೆಂಟಿಯೊಂದಿಗೆ ಅಥವಾ ಆಯ್ದ ಚಿನ್ನಾಭರಣಗಳನ್ನು ನೀಡಲಾಗುವುದು. 

ಏಳನೇ ಆವೃತಿ ಕಡೆಗೆ ಮುಂದಡಿ ಇಟ್ಟಿದ್ದೇವೆ 
ನಾವು ಈಗಾಗಲೇ ಆರನೇ ಆವೃತ್ತಿಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ  ಬಂಪರ್ ಡ್ರಾ ವಿಜೇತರಿಗೆ ಕಾರು ಹಸ್ತಾಂತರ ಮಾಡಿದ್ದೇವೆ. ಈಗಾಗಲೇ ವಿಜೇತರಾಗದೆ ಉಳಿದಿರುವ ಸದಸ್ಯರಿಗೆ ಅವರ ಆಯ್ಕೆಯ ವಸ್ತುಗಳನ್ನು ನೀಡುವ ಪ್ರಕ್ರೀಯೆಯನ್ನು ಆರಂಭಿಸಿದ್ದೇವೆ.  ಈ ಹಿಂದಿನ ಆವೃತಿಗಳಲ್ಲಿ ಅದೃಷ್ಟ ಗ್ರಾಹಕರಿಗೆ ಬೈಕ್ ಗಳು ಹಾಗೂ ಬಂಪರ್ ಡ್ರಾದಲ್ಲಿ ಕಾರುಗಳನ್ನು ನೀಡಿದ್ದೇವೆ. ಅಷ್ಟು ಮಾತ್ರವಲ್ಲದೆ, ವಿಜೇತರಿಗೆ ಹಾಗೂ ವಿಜೇತರಾಗದೆ ಉಳಿದ ಸದಸ್ಯರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವ ಮೂಲಕ ಎಲ್ಲರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ವರೆಗೆ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ಟಾಪ್ ಟೆನ್ ಲಕ್ಕಿ ಸ್ಟೀಮ್ ಇಷ್ಟೊಂದು ಮುನ್ನಡೆಯಲು ಸಾಧ್ಯವಾಗಿದೆ.

ಇದೀಗ ಗ್ರಾಹಕರ ಅಪೇಕ್ಷೇಯಂತೆ ಏಳನೇ ಆವೃತ್ತಿಯನ್ನು ಆರಂಭಿಸಿದ್ದೇವೆ. ಈಗಾಗಲೇ ಕಾರ್ಡ್ ಬಿಡುಗಡೆಗೊಂಡಿದ್ದು, ರಾಜ್ಯದ ಹಲವೆಡೆಯ ಗ್ರಾಹಕರು ಈ ಸ್ಕೀಮ್ ನ ಸದಸ್ಯರಾಗಿದ್ದರೆ. ಹೋದ ಎಲ್ಲಾ ಕಡೆಗಳಲ್ಲಿಯೂ ನಮಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗ್ರಾಹಕರ ಪ್ರಶಂಸೆಯ ಮಾತುಗಳಿಂದ ತುಂಬಾ ಖುಶಿಯಾಗಿದೆ. ಏಳನೇ ಆವೃತಿಯ ಕಡೆಗೆ ಮುಂದಡಿ ಇಟ್ಟಿದ್ದೇವೆ ಎಲ್ಲರೂ ಸಹಕರಿಸಿ ಎಂದು ಪಾಲುದಾರರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here