ತಿಂಗಳಾಡಿ: ಬೋಳೋಡಿ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕೆದಂಬಾಡಿ ಗ್ರಾಮದ ಬೋಳೋಡಿ ಅಂಗನವಾಡಿ ಕೇಂದ್ರದಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಪಂ ಸದಸ್ಯೆ ರೇವತಿ ಬೋಳೋಡಿ ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ಗ್ರಾಪಂ ಮಾಜಿ ಸದಸ್ಯ, ಹಿರಿಯರಾದ ಬೋಳೋಡಿ ಚಂದ್ರಹಾಸ ರೈ, ಬಾಲವಿಕಾಸ ಸಮಿತಿ ಅಧ್ಯಕ್ಷೆ ರೇಖಾ ಕೊಡಂಕೀರಿ ಹಾಗೇ ಮಕ್ಕಳ ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕೆದಂಬಾಡಿ ಗ್ರಾಪಂ ಸೇರಿದಂತೆ ಕಿರಣ್ ಬೋಳೋಡಿ, ಅವಿನಾಶ್ ಬೋಳೋಡಿ, ಕಿಶನ್ ಬೋಳೋಡಿ, ಶಿವರಾಜ್ ರೈ, ಕವನ್ ಬಿ.ಕೆ, ಪುಷ್ಪರಾಜ್ ರೈ, ಚಂದ್ರಹಾಸ ರೈ ಇವರುಗಳು ಸಿಹಿತಿಂಡಿ ಪ್ರಾಯೋಜಕತ್ವ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಕುಸುಮ ಕಾರ್ಯಕ್ರಮ ನಿರೂಪಿಸಿದರು. ಚಂದ್ರಾವತಿ ರೈ ವಂದಿಸಿದರು.

LEAVE A REPLY

Please enter your comment!
Please enter your name here