3,56,597ರೂ ನಿವ್ವಲ ಲಾಭ; 16% ಡಿವಿಡೆಂಡ್, ಲೀ.ಗೆ 70 ಪೈಸೆ ಬೋನಸ್
ಪುತ್ತೂರು: ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 4,11,24,366 ರೂ.ಗಳ ವ್ಯವಹಾರ ಮಾಡಿದ್ದು ಸುಮಾರು 155 ಸಕ್ರಿಯ ಸದಸ್ಯರುಗಳು 8574885 ರೂ.ಗಳ 2,46,577 ಲೀಟರ್ ಹಾಲನ್ನು ಖರೀದಿಸಿ 3,47,808.00 ರೂ.ಗಳ 7433 ಲೀಟರ್ ಹಾಲನ್ನು ಸ್ಥಳೀಯವಾಗಿ ಸಂಘದಿಂದ ಮಾರಾಟ ಮಾಡಲಾಗಿದೆ.
ಅದೇ ರೀತಿ 9023823.66 ರೂ.ಗಳ 2,46,302 ಕೆಜಿ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ ಸಂಘವು 3,56,597 ರೂ ನಿವ್ವಲ ಲಾಭ ಗಳಿಸಿದ್ದು ಸದಸ್ಯರಿಗೆ 16% ಡಿವಿಡೆಂಡ್ ಹಾಗೂ ಪ್ರತೀ ಲೀಟರಿಗೆ 70 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು.
ಆ.20ರಂದು ಭಕ್ತಕೋಡಿಯಲ್ಲಿ ಸಂಘದ ವಠಾರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸದಸ್ಯರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಒಕ್ಕೂಟದಿಂದ ಕೂಡಾ ಉತ್ತಮ ಸಹಕಾರ ಸಿಗುತ್ತಿದೆ, ಮುಂದಕ್ಕೂ ನಿಮ್ಮೆಲ್ಲರ ಸಹಕಾರದಿಂದ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದರು.
ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಡಿ.ಆರ್ ಸತೀಶ್ ರಾವ್ ಮಾತನಾಡಿ ಹೈನುಗಾರಿಕೆಯಲ್ಲಿ ಲಾಭವಿದ್ದು ಕೆಲವು ಸಂದರ್ಭಗಳಲ್ಲಿ ಹಸು ಸಾಕಲು ಕಷ್ಟಕರವಾದ ಸಂದರ್ಭದಲ್ಲಿ ರೈತರು ಅದನ್ನು ಸಿಕ್ಕಿದ ಬೆಲೆಗೆ ಮಾರಾಟ ಮಾಡುತ್ತಾರೆ, ಅದು ಹಸುವನ್ನು ಘಟ್ಟ ಪ್ರದೇಶದಲ್ಲಿ ಡಬಲ್ ದರಕ್ಕೆ ಮಾರಾಟವಾಗುತ್ತದೆ, ಹೈನುಗಾರಿಕೆ ಕ್ಷೇತ್ರದಲ್ಲಿ ಸರಿಯಾಗಿ ತೊಡಗಿಸಿಕೊಂಡರೆ ಉತ್ತಮ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ದ.ಕ ಕನ್ನಡ ಹಆಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಅವರು ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಪ್ರಪುಲ್ಲನಾಥ ರೈ ವರದಿ ವಾಚಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬೆಳಿಯಪ್ಪ ಗೌಡ ಕೆ.ಎಂ, ನಿರ್ದೇಶಕರಾದ ವಿಶ್ವನಾಥ ರೈ ಬಿ, ಸುಧೀರ್ಕೃಷ್ಣ ಎಂ.ಪಿ, ಗುಣಪಾಲ ಗೌಡ, ಯಶೋಧರ ರೈ, ಗೀತಾ ಎಂ, ಕವಿತಾ ಕೆ, ಕೊರಗಪ್ಪ ಬಿ, ಐತ್ತಪ್ಪ ನಾಯ್ಕ, ಶಶಿಧರ ಎಸ್.ಡಿ, ಯತೀಶ್ ರೈ ಮೇಗಿನಗುತ್ತು ಉಪಸ್ಥಿತರಿದ್ದರು. ನಿರ್ದೇಶಕಿ ಗೀತಾ ಮರಿಯ ಪ್ರಾರ್ಥಿಸಿದರು. ನಿರ್ದೇಶಕ ಸುಧೀರ್ ಕೃಷ್ಣ ಎಂ.ಪಿ ಸ್ವಾಗತಿಸಿದರು. ಉಪಾಧ್ಯಕ್ಷ ಬೆಳಿಯಪ್ಪ ಗೌಡ ವಂದಿಸಿದರು. ಸಂಘದ ಹಾಲು ಪರೀಕ್ಷಕ ಐತ್ತಪ್ಪ ಪಿ ಸಹಕರಿಸಿದರು. ಸಭೆಯಲ್ಲಿ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಸಹಿತ ಸಂಘದ ಸದಸ್ಯರು ಉಪಸ್ಥಿತರಿದ್ದರು.