ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪ್ ಸೊಸೈಟಿಯಿಂದ 10.96 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

0

ಮಂಗಳೂರು: ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ವಜ್ರ ಮಹೋತ್ಸವ ಪ್ರಯುಕ್ತ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಮಂಗಳೂರಿನ ಶ್ರೀ ರಾಧಾಕೃಷ್ಣ ಸಭಾಂಗಣದಲ್ಲಿ ನಡೆಯಿತು.


ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ಭಾರತದ ಭವಿಷ್ಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಆಪರೇಟಿವ್ ಸೊಸೈಟಿ ಮಾಡುತ್ತಿದೆ. ದೇಶ ವಿಶ್ವಗುರುವಾಗುವ ಕಾಲಘಟ್ಟದಲ್ಲಿದ್ದು, ಅದಕ್ಕೆ ಪೂರಕ ತಯಾರಿಗಳನ್ನು ವಿದ್ಯಾರ್ಥಿ ಜೀವನದಲ್ಲೇ ಮಾಡಬೇಕು. ವಿಶ್ವಕ್ಕೆ ಮಾರ್ಗದರ್ಶಿಯಾಗಿ ಭಾರತವನ್ನು ಬೆಳೆಸುವ ವಿದ್ಯಾರ್ಥಿ ಸಮುದಾಯದಲ್ಲಿದೆ ಎಂದರು.


ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪ್ ಸೊಸೈಟಿ ವಿದ್ಯಾರ್ಥಿ ವೇತನ ನೀಡುವ ಮೂಲಕ ದೇವರು ಮೆಚ್ಚುವ ಕೆಲಸ ಮಾಡುತ್ತಿದೆ. ಕಲಿಯುವ ವಿದ್ಯಾರ್ಥಿಗಳಿಗೆ ಸಹಕಾರ ನಿಜಾರ್ಥದ ಸೇವೆಯಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಪಿ ಉಪೇಂದ್ರ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ನೀಡುವ ಪುರಸ್ಕಾರ ಮೌಲ್ಯ ಅಳೆಯದೆ, ನೀಡುವ ಮನಸ್ಸನ್ನು ತೂಗಬೇಕು. ಮಕ್ಕಳ ನೈಪುಣ್ಯವನ್ನು ಪೋಷಕರು ಕಂಡುಹಿಡಿದು ಪ್ರೋತ್ಸಾಹಿಸಬೇಕು ಎಂದರು.


ನಿಟ್ಟೆ ಕ್ಯೂಬೇಷನ್ ಸೆಂಟರ್‌ನ ಮುಖ್ಯ ಕಾರ್ಯನಿರ್ವಹಣಾಽಕಾರಿ ಎ.ಪಿ. ಆಚಾರ್, ಜಿಲ್ಲಾ ಪೊಲೀಸ್ ಅಽಕ್ಷಕ ಯತೀಶ್ ಎನ್., ಮಂಗಳೂರಿನ ವಿಶ್ವ ಕರ್ಮ ಕಲಾ ಪರಿಷತ್ ಅಧ್ಯಕ್ಷ ಡಾ| ಎಸ್ .ಪಿ ಗುರುದಾಸ್, ಪ್ರಧಾನ ವ್ಯವಸ್ಥಾಪಕ ಯಜೇಶ್ವರ, ನಿರ್ದೇಶಕರಾದ ಕೆ. ಯಕ್ಷೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ಜಯ ಆಚಾರ್, ಕೆ. ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್. ಉಪಸ್ಥಿತರಿದ್ದರು.
ಸೊಸೈಟಿಯ ಉಪಾಧ್ಯಕ್ಷ ಎ. ಆನಂದ ಆಚಾರ್ಯ ಸ್ವಾಗತಿಸಿದರು. ನಿರ್ದೇಶಕ ಕೆ. ಪ್ರಕಾಶ್ ಆಚಾರ್ಯ ವಂದಿಸಿದರು. ಉದಯ ಭಾಸ್ಕರ ಸುಳ್ಯ, ಉಷಾ ಮನೋಜ್ ನಿರೂಪಿಸಿದರು.

ಸೊಸೈಟಿಯ ವತಿಯಿಂದ ದಾಖಲೆ ಎಂಬಂತೆ 10.96 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಎಸೆಸೆಲ್ಸಿಯ 160, ಪಿಯುಸಿಯ 176 ವಿದ್ಯಾರ್ಥಿಗಳು ಸೇರಿ 336 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು. ಅತ್ಯಽಕ ಅಂಕಗಳಿಸಿದ 6 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here