ಬೆಟ್ಟಂಪಾಡಿ: ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಸೆ. 7 ಮತ್ತು 8 ರಂದು ನಡೆಯಲಿರುವ 39 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಸೆ. 25 ರಂದು ಶ್ರೀ ಕ್ಷೇತ್ರದ ಬಿಲ್ವಶ್ರೀ ಸಭಾಂಗಣದಲ್ಲಿ ನಡೆಯಿತು.
ಬೆಳಿಗ್ಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನಿಕಟಪೂರ್ವಾಧ್ಯಕ್ಷ ಪ್ರಭಾಕರ ರೈ ಬಾಜುವಳ್ಳಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಶುಭ ಹಾರೈಸಿದರು. ನಂತರ ವಿವಿಧ ಸ್ಪರ್ಧೆಗಳು ಜರಗಿದವು. ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ, ಭರತನಾಟ್ಯ ಗುರು ವಿದುಷಿ ಗೌತಮಿ ಬೈಲಾಡಿ, ಭಜನಾ ತರಬೇತುದಾರರಾದ ರಮೇಶ್ ಬಳ್ಳ, ಗೋಪಾಲಕೃಷ್ಣ ಮಿತ್ತಡ್ಕ, ಶರಧಿ ಶಿಕ್ಷಣ ಸಂಸ್ಥೆಯ ಸಂತೋಷ್ ಕುಮಾರ್ ಡಿ.ಎನ್., ಸಂಗೀತ ಕಲಾವಿದೆ ಸಮನ್ವಿ ರೈ ನುಳಿಯಾಲು ಸ್ಪರ್ಧೆಗಳ ತೀರ್ಪುಗಾರಿಕೆಯಲ್ಲಿ ಸಹಕರಿಸಿದರು.
ಅಪರಾಹ್ನ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಪಟ್ಟೆ ಅರ್ಥ್‌ಮೂವರ್ಸ್ ಮ್ಹಾಲಕ, ಉದ್ಯಮಿ ರಾಧಾಕೃಷ್ಣ ರೈ ಪಟ್ಟೆ ಬಹುಮಾನ ವಿತರಿಸಿದರು. ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಸಂಚಾಲಕ ಡಾ. ಸುಬ್ರಹ್ಮಣ್ಯ ವಾಗ್ಲೆ, ಅಧ್ಯಕ್ಷ ಉಮೇಶ್ ಮಿತ್ತಡ್ಕ, ಕಾರ್ಯದರ್ಶಿ ಜಯರಾಮ ರೈ ಮೂರ್ಕಾಜೆ ಉಪಸ್ಥಿತರಿದ್ದರು. ಶಿವಪ್ರಸಾದ್ ತಲೆಪ್ಪಾಡಿ ಹಾಗೂ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.