ವಿಟ್ಲ: ಭಾರತ್ ಸ್ಕೌಟ್ಸ್ – ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ, ಕರ್ನಾಟಕ ಪ್ರೌಢ ಶಾಲೆ, ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ – ಇವುಗಳ ಸಹಯೋಗದಲ್ಲಿ ಪಟಾಲಾಮ್ ಮತ್ತು ಷಟ್ಕ ನಾಯಕರ ತರಬೇತಿ ಮತ್ತು ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣದ ಬಳಿಕ 2023-24 ನೇ ಸಾಲಿನ ರಾಜ್ಯ ಪುರಸ್ಕಾರ, ಚತುರ್ಥ ಚರಣ, ಹಿರೇಕ್ ಪದಕ ಮತ್ತು ಎಸ್.ಎಸ್.ಎಲ್.ಸಿ. ಗರಿಷ್ಠ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ವಿದ್ಯಾಭಿವರ್ಧಕ ಸಂಘ ಮಾಣಿ ಇದರ ಅಧ್ಯಕ್ಷರಾದ ಕಿರಣ್ ಹೆಗ್ಡೆ, ಸ್ಥಳೀಯ ಸಂಸ್ಥೆ ಕೋಶಾಧಿಕಾರಿ ಹಾಜಿ ಇಬ್ರಾಹಿಂ ಕೆ., ಉಪಾಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಸಿ.ಆರ್.ಪಿ. ಸತೀಶ್ ರಾವ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ ಮೊದಲಾದವರು ಉಪಸ್ಥಿತರಿದ್ದರು.
ತೀರ್ಪುಗಾರಾಗಿ ಸ್ಕೌಟ್ಸ್ ಮಾಸ್ಟರ್ ಗಳಾದ ರಾಜೇಶ್ ವೈ, ಫಿರಾಜಿ ವಾಬಳೆ, ಶ್ಯಾಮಿಲಿ, ಗುರುರಾಜ್, ಜಯರಾಮ ಕಾಂಚನ ಸಹಕರಿಸಿದರು.
ತರಬೇತುದಾರರಾಗಿ ಬುಲ್ – ಬುಲ್ಸ್ ಕ್ಯಾಪ್ಟನ್ ಯಶೋಧ, ಕಬ್ಸ್ ಕ್ಯಾಪ್ಟನ್ ಶೀಲಾವತಿ,ಸ್ಕೌಟ್ಸ್ ಮಾಸ್ಟರ್ ಸ್ವಪ್ನ ಆಚಾರ್ಯ,ಹಾಗೂ ಗೈಡ್ಸ್ ಕ್ಯಾಪ್ಟನ್ ಸುಪ್ರಿಯ ಡಿ. ಮತ್ತು ಲೀಲಾ ಸಹಕರಿಸಿದರು.
ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಜೆ. ಪ್ರಹ್ಲಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮ್ಮರಗಿ ಶರಣಪ್ಪ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ಗೈಡ್ಸ್ ಕ್ಯಾಪ್ಟನ್ ಶ್ಯಾಮಲಾ ಕೆ. ವಂದಿಸಿ, ಸ್ಕೌಟ್ಸ್ ಮಾಸ್ಟರ್ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಾಣಿ ಸ್ಥಳೀಯ ಸಂಸ್ಥೆಗೆ ಒಳಪಡುವ ಮಾಣಿ ಮತ್ತು ಕೆದಿಲ ಕ್ಲಸ್ಟರ್ ನ ಶಾಲೆಗಳ ಸುಮಾರು 225 ವಿದ್ಯಾರ್ಥಿಗಳು ಮತ್ತು 25 ಶಿಕ್ಷಕ – ಶಿಕ್ಷಕಿಯರು ಭಾಗವಹಿಸಿದ್ದರು.