ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 17 ಕಡೆಗಳಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯುವ ಸ್ಥಳಗಳ ವಿವರ ಈ ರೀತಿ ಇದೆ.
ಪೆರ್ನೆ ಶ್ರೀ ಆಂಜನೇಯ ಭಜನಾ ಮಂದಿರದಲ್ಲಿ ಸೆ.7ರಂದು, ಇಳಂತಿಲದ ವಾಣಿಶ್ರೀ ಭಜನಾ ಮಂದಿರದಲ್ಲಿ ಸೆ. 8ರಂದು, ಮೊಗ್ರು ಶ್ರೀ ರಾಮ ಭಜನಾ ಮಂದಿರದಲ್ಲಿ ಸೆ.7ರಂದು, ಉರುವಾಲು ಶ್ರೀ ಗಣೇಶ ಭಜನಾ ಮಂದಿರದಲ್ಲಿ ಸೆ.7ರಂದು ಕಣಿಯೂರು ಶ್ರೀ ಮಹಾಗಣಪತಿ ಸೇವಾ ಸಂಘದಲ್ಲಿ ಸೆ.7ರಂದು, ಮೂರುಗೋಳಿ ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ಸೆ.8ರಂದು, ಕಲ್ಲೇರಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ಸೆ.7ರಂದು, ಪಿಲಿಗೂಡು ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಸೆ. 8ರಂದು, ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ಕಲ್ಯಾಣ ಮಂಟಪದಲ್ಲಿ ಸೆ.9ರಂದು, ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಸೆ.7ರಂದು, ಹಿರೇಬಂಡಾಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಸೆ.8ರಂದು, ಬಜತ್ತೂರಿನ ಮುದ್ಯ ದೇವಾಲಯದಲ್ಲಿ ಸೆ.7ರಂದು, ನೆಲ್ಯಾಡಿ ಶಬರೀಶ ಕಲಾ ಮಂದಿರದಲ್ಲಿ ಸೆ.7ರಂದು, ಇಚಿಲಂಪಾಡಿ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಸೆ.7ರಂದು, ದೋಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಸೆ.9ರಂದು, ಗುಂಡ್ಯದ ಸಿರಿಬಾಗಿಲು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ದುರ್ಗಾ ಸನ್ನಿಧಿಯಲ್ಲಿ ಸೆ.7ರಂದು, ಉದನೆ ಶ್ರೀ ಗಣಪತಿ ಕಟ್ಟೆಯಲ್ಲಿ ಸೆ.7ರಂದು ಶ್ರೀ ಗಣೇಶ ವಿಗ್ರಹದ ವಿಸರ್ಜನೆ ನಡೆಯಲಿದೆ.