ಆಲಂಕಾರು: ಆಲಂಕಾರಿನ ಮಾತಾ ಕಾಂಪ್ಲೆಕ್ಸ್ ನಲ್ಲಿ ಶತಾಕ್ಷಿ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿಯನ್ನು ಉದ್ಘಾಟಸಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ವೃತ್ತಿ ಎನ್ನುವಂತಾದ್ದು ಉದ್ಯಮ ಅಲ್ಲ, ಅದೊಂದು ಜನರಿಗೆ ನೀಡುವ ಸೇವೆಯಾಗಿದ್ದು ಜನರ ಅರೋಗ್ಯದ ಸಮಸ್ಯೆಯನ್ನು ನಿವಾರಿಸುವ ಜೊತೆಗೆ ಸಮಾಜದ ಅರೋಗ್ಯ ಕಾಪಾಡುವುದು ವೈದ್ಯ ವೃತ್ತಿಯ ಒಂದು ಉದ್ದೇಶವಾಗಿದ್ದು ಬೆಳೆಯುತ್ತಿರುವ ಆಲಂಕಾರಿನಲ್ಲಿ ಶತಾಕ್ಷಿ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭಗೊಂಡಿದ್ದು ತುಂಬಾ ಸಂತಸದ ವಿಚಾರವಾಗಿದ್ದು, ಇದರಿಂದಾಗಿ ಜನರಿಗೆ ಉತ್ತಮ ಸೇವೆ ಲಭಿಸಲಿ ಎಂದು ತಿಳಿಸಿ
ಶತಾಕ್ಷಿ ಕ್ಲಿನಿಕ್ ನ ಡಾ!.ಕೃತಿ ಶೆಟ್ಟಿಯವರು ಸಾಂಸ್ಕೃತಿಕ ಹಾಗೂ ನಾಟ್ಯರಂಗದಲ್ಲೂ ಅನೇಕ ಪ್ರಶಸ್ತಿ ಪಡೆದವರು ಕೆಲವರು ಇಂಜಿನಿಯರ್,ಡಾಕ್ಟರ್ ಕಲಿತು ಪಟ್ಟಣ ಪ್ರದೇಶ ಹಾಗೂ ವಿದೇಶದಲ್ಲಿ ಸೇವೆ ನೀಡುತ್ತಾರೆ ಆದರೆ ಕೃತಿ ಶೆಟ್ಟಿ ಯವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡಬೇಕು ಎನ್ನುವ ಉದ್ದೇಶ ಉತ್ತಮವಾಗಿದ್ದು ಅವರ ಕ್ಲಿನಿಕ್ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಖ್ಯಾತ ವಾಸ್ತು ತಜ್ಞ ಮಹೇಶ ಮುನಿಯಂಗಳ ದೀಪ ಪ್ರಜ್ವಲನೆ ಮಾಡಿ ಮಾತನಾಡಿ ಶತಾಕ್ಷಿ ಕ್ಲಿನಿಕ್ ಉದ್ಘಾಟನೆಗೊಂಡು ಸಮಾಜಕ್ಕೆ ಸೇವೆ ಒದೆಗಿಸುವ ಸುಯೋಗ ಒದಗಿಬಂದಿದೆ, ಉತ್ತಮ ಅರೋಗ್ಯ ಸೇವೆ ನೀಡಿದಾಗ ಅದರ ಪ್ರತಿಫಲದಿಂದ ಭವಿಷ್ಯಕೂಡ ಉಜ್ವಲವಾಗುತ್ತದೆ. ಶತಾಕ್ಷಿ ಕ್ಲಿನಿಕ್ ಜನಾನುರಾಗಿ ಬೆಳಗಲಿ,ಭವಿಷ್ಯ ಉಜ್ವಲವಾಗಲಿ ಎಂದು ತಿಳಿಸಿ ಶುಭಹಾರೈಸಿದರು.
ಹೊರರೋಗಿ ಕೊಠಡಿಯ ಉದ್ಘಾಟನೆಯನ್ನು ನೇರವೆರಿಸಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಪದ್ಮನಾಭ ಶೆಟ್ಟಿ ಮತ್ತು ವತ್ಸಲಾ ಪದ್ಮನಾಭ ಶೆಟ್ಟಿಯವರು ನಮಗೆ ಬಹಳ ಅತ್ಮೀಯರು,ಕೃತಿ ಶೆಟ್ಟಿಯವರಿಗೆ ಸುಸಂಸ್ಕೃತ ಶಿಕ್ಷಣ ನೀಡಿ ಬೆಳೆಸಿದವರು
ಡಾ!.ಕೃತಿ ಶೆಟ್ಟಿ ಯವರು ಪುತ್ತೂರಿನ ಖ್ಯಾತ ಡಾ!.ಪ್ರಸಾದ ಭಂಡಾರಿಯವರ ಆಶೀರ್ವಾದದೊಂದಿಗೆ ಡಾಕ್ಟರ್ ವೃತ್ತಿಯನ್ನು ಪ್ರಾರಂಭಿಸಿದವರು. ಆಲಂಕಾರು ಬೆಳೆಯುತ್ತಿರುವ ಪ್ರದೇಶವಾಗಿದ್ದು, ರೋಗಿಗಳ ಮನಸ್ಸನ್ನು ಗೆಲ್ಲುವ ವೈದ್ಯೆಯಾಗಿ ,ಅವರ ಕೈಗುಣದಿಂದ ಬಂದಂತಹ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡಿ, ಪರಿಣಾಮಕಾರಿಯಾಗಿ ಚಿಕಿತ್ಸೆ ಫಲಿಸಲಿ ಮುಂದೆ ಉತ್ತಮ ಸಾಧಕಿಯಾಗಿ ಎಂ.ಡಿ ಯಾಗಿ ಉತ್ತಮ ವೈದ್ಯೆಯಾಗಿ ಸಮಾಜದಲ್ಲಿ ಹೊರಹೊಮ್ಮಲಿ ಎಂದು ಹಾರೈಸಿದರು.
ಎ.ಪಿಎಂ.ಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮಾತನಾಡಿ ಡಾ.ಕೃತಿ ಶೆಟ್ಟಿ ಬಾಲ್ಯದ ಜೀವನದಲ್ಲಿ ಪಾದರಸದಂತೆ ಕೆಲಸ ಕಾರ್ಯವನ್ನು ಮಾಡಿದವರು, ಅಸ್ಪತ್ರೆ ಮತ್ತು ಕ್ಲಿನಿಕ್ ಗಳನ್ನು ನಡೆಸುವುದು ಸವಾಲಿನ ಕೆಲಸವಾಗಿದ್ದು ಡಾ. ಕೃತಿ ಶೆಟ್ಟಿಯವರ ಉದ್ಯಮ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಕಾರ್ಯದರ್ಶಿ ಸೇಸಪ್ಪ ರೈ ಕೆ,ಯವರು ಮಾತನಾಡಿ, ಶತಮಾನದ ನೆನಪನ್ನು ಇಟ್ಟುಕೊಂಡು ಶತಾಕ್ಷಿ ಕ್ಲಿನಿಕ್ ಉದ್ಘಾಟನೆ ಮಾಡಿದ್ದು ಡಾ. ಕೃತಿ ಶೆಟ್ಟಿಯವರು ಜೀವನವು ಡಾಕ್ಟರ್ ಸೇವೆಯೊಂದಿಗೆ ವಿದ್ಯಾಭ್ಯಾಸ ಕೂಡ ಮುಂದುವರಿಯಲಿ ಎಂದು ಹಾರೈಸಿದರು. ಉಪ್ಪಿನಂಗಡಿ ಧನ್ವಂತರಿ ಕ್ಲಿನಿಕ್ ನ ಡಾ.ನಿರಂಜನ್ ರೈ ಡಾ. ಕೃತಿ ಶೆಟ್ಟಿಯವರು ಕ್ಲಿನಿಕ್ ಮುಂದಕ್ಕೆ ಅಸ್ಪತ್ರೆಯಾಗಿ ಮುಂದುವರಿಯಲಿ ಇದರಿಂದ ಬಡವರಿಗೆ ಪ್ರಯೋಜನವಾಗಲಿ ಎಂದು ತಿಳಿಸಿದರು.
ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ರವರು ಮಾತನಾಡಿ, ಆಲಂಕಾರು ಬೆಳೆಯುತ್ತಿರುವ ಪಟ್ಟಣವಾಗಿದ್ದು ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿದ್ಯಾಸಂಸ್ಥೆಗಳು,ಬ್ಯಾಕಿಂಗ್ ವ್ಯವಸ್ಥೆಗೆ ಸಹಕಾರಿ ಬ್ಯಾಂಕ್ ಹಾಗು ರಾಷ್ಟ್ರೀಕೃತ ಬ್ಯಾಂಕ್ ಗಳು ಉದ್ಯಮಕ್ಕೆ ಅನುಕೂಲವಾಗುವಂತೆ ಸುಸಜ್ಜಿತ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಶತಾಕ್ಷಿ ಕ್ಲಿನಿಕ್ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ ಮಾತನಾಡಿ, ದುರ್ಗಾಮಾತೆಯ ಇನ್ನೊಂದು ಹೆಸರು ಶತಾಕ್ಷಿ ಶರವೂರು ದುರ್ಗಾಪರಮೇಶ್ವರಿ ದೇವಿಯ ಅನುಗ್ರಹದಿಂದ ಶತಾಕ್ಷಿ ಕ್ಲಿನಿಕ್ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಆಲಂಕಾರು ಮೂರ್ತೆದಾರ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಆಲಂಕಾರಿನಲ್ಲಿ ಡಾ.ಕೃತಿ ಶೆಟ್ಟಿ ಯವರು ವೈದ್ಯಾಧಿಕಾರಿಯಾಗಿ ಜನಪ್ರಿಯತೆ ಗಳಿಸಿದವರು ವೃತ್ತಿಯಲ್ಲಿ ವಿಖ್ಯಾತಿ ಪಡೆಯುವಂತಾಗಲಿ ಎಂದು ತಿಳಿಸಿದರು. ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯದ ಅಧ್ಯಕ್ಷ ಶಿವಣ್ಣ ಗೌಡ ಕಕ್ವೆ, ಆಲಂಕಾರು ಆಕಾರ್ ಅಸೋಸಿಯೇಟ್ಸ್ ನ ಸಿವಿಲ್ ಇಂಜೀನಿಯರ್ ಲಕ್ಷ್ಮೀ ನಾರಾಯಣ ಅಲೆಪ್ಪಾಡಿ ಸಂರ್ದಭೋಚಿತವಾಗಿ ಮಾತನಾಡಿ, ಶುಭಹಾರೈಸಿದರು. ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾಕ್ಟರ್ ರೋಗಿಯ ಪ್ರಾಣ ಉಳಿಸುವ ದೇವರು ,ಶತಾಕ್ಷಿ ಕ್ಲಿನಿಕ್ ನಲ್ಲಿ ಪಟ್ಟಣ ಪ್ರದೇಶದಲ್ಲಿ ಸಿಗುವ ಸವಲತ್ತು ಶತಾಕ್ಷಿ ಕ್ಲಿನಿಕ್ ಆಲಂಕಾರಿನಲ್ಲಿ ಸಿಗುವಂತಾಗಲಿ ಎಂದು ತಿಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾತಾ ಕಾಂಪ್ಲೆಕ್ಸ್ ನ ಮಾಲಕ ಕುಶಾಲಪ್ಪ ಗೌಡ ಸುರುಳಿ ಉಪಸ್ಥಿತರಿದ್ದರು.
ನಿವೃತ್ತ ಕೃಷಿ ಅಧಿಕಾರಿ ಪದ್ಮನಾಭ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಡಾ.ಕೃತಿ ಶೆಟ್ಟಿ ಯವರು ಗ್ರಾಮಾಂತರ ಪ್ರದೇಶದಲ್ಲಿ ಸೇವೆ ನೀಡಬೇಕೆನ್ನುವ ಉದ್ದೇಶದಿಂದ ಆಲಂಕಾರಿನಲ್ಲಿ ಶತಾಕ್ಷಿ ಕ್ಲಿನಿಕ್ ಪ್ರಾರಂಭ ಮಾಡಿದ್ದು,ಎಲ್ಲಾರ ಸಹಕಾರ ನೀಡುವಂತೆ ವಿನಂತಿಸಿ ಸ್ವಾಗತಿಸಿದರು. ಶತಾಕ್ಷಿ ಕ್ಲಿನಿಕ್ ನ ವೈದ್ಯೆ ಡಾ. ಕೃತಿ ಶೆಟ್ಟಿ ವಂದಿಸಿದರು. , ಶಿಕ್ಷಕ ಪ್ರದೀಪ್ ಬಾಕಿಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ,ಪುತ್ತೂರಿನವಕೀಲರಾದ ದಿನಕರ ರೈ ಆರುವಾರ ಮತ್ತು ಅರುಣಾದಿನಕರ ರೈ, ಶ್ರೀ ದುರ್ಗಾಟವರ್ ್ಸ ನ ಮಾಲಕರಾದ ರಾಧಾಕೃಷ್ಣ ರೈ ಪರಾರಿಗುತ್ತು, ವಿಶ್ರಾಂತ ಪ್ರಾಂಶುಪಾಲರಾದ ಕೊಣಾಲುಗುತ್ತು ವಿಠಲ ರೈ,ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಪುತ್ತೂರು ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಪೂವಪ್ಪ ನಾಯ್ಕ್ ಎಸ್ ಸೇರಿದಂತೆ ಹಲವು ಮಂದಿ ಅಗಮಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪದ್ಮನಾಭ ಶೆಟ್ಟಿಯವರ ಪತ್ನಿ ವತ್ಸಲಾ ಪದ್ಮನಾಭ ಶೆಟ್ಟಿ, ಮಗಳು ಶೃತಿ ಶೆಟ್ಟಿ, ಮೊಮ್ಮಗಳು ಶಿಯಾ ಶೆಟ್ಟಿ ಶತಾಕ್ಷಿ ಕ್ಲಿನಿಕ್ ನ ಸಿಬ್ಬಂದಿಗಳಾದ ವಸಂತ, ರಕ್ಷಾ,ರಮ್ಯ,ವೀಕ್ಷಿತ, ಇರ್ಫಾನಾ ಸಹಕರಿಸಿದರು.