ಕೂರ್ನಡ್ಕ: ಐಡಿಯಲ್‌ ಚಿಕನ್‌ ವರ್ಷದ ಹರ್ಷ – ಗ್ರಾಹಕರಿಗೆ ಉಚಿತ ಬಹುಮಾನ ಕೂಪನ್‌

0

ಕೂರ್ನಡ್ಕ: ಪ್ರೆಶ್‌ ಎನ್‌ ಟೇಸ್ಟಿ ಐಡಿಯಲ್‌ ಚಿಕನ್‌ ಕೂರ್ನಡ್ಕ ಇದರ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಉಚಿತ ಬಹುಮಾನ ಕೂಪನ್‌ ಗಳನ್ನು ಸೆ.15ರಂದು ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಪುತ್ತೂರು ನಗರ ಸಭೆಯ ನೂತನ ಉಪಾಧ್ಯಕ್ಷ ಬಾಲಚಂದ್ರ, ಕೂರ್ನಡ್ಕ ಫೀರ್‌ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷ ಕೆ ಎಚ್‌ ಖಾಸಿಂ ಹಾಜಿ ಬಹುಮಾನ ಕೂಪನ್‌ ಗಳನ್ನು ಬಿಡುಗಡೆಗೊಳಿಸಿದರು. ಸೆ.15ರಿಂದ ಅ.15ರ ವರೆಗೆ 250 ರೂಪಾಯಿಗಳ ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರತೀ ಖರೀದಿಗೆ ಬಹುಮಾನದ ಕೂಪನ್‌ ಗಳನ್ನು ನೀಡಲಾಗುವುದು. ಪ್ರಿಡ್ಜ್‌ , ಟಿವಿ, ಗ್ರೈಂಡರ್‌ ಸೇರಿದಂತೆ 10 ಆಕರ್ಷಕ ಬಹುಮಾನಗಳನ್ನು ಗ್ರಾಹಕರು ಗೆಲ್ಲಬಹುದಾಗಿದ್ದು, ಅ. 20ರಂದು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಡ್ರಾ ನಡೆಯಲಿದೆ. ಬಹುಮಾನ ಕೂಪನ್‌ ಬಿಡುಗಡೆ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಝುಬೈರ್‌ ಬಪ್ಪಳಿಗೆ, ಕಾಂಪ್ಲೆಕ್ಸ್‌ ಮಾಲಕ ಮಹಮ್ಮದ್‌ ಹಾರಿಸ್‌, ಪುತ್ತೂರು ಕಮ್ಯುನಿಟಿ ಸೆಂಟರ್‌ ನ ಇಮ್ತಿಯಾಝ್‌, ಮರೀಲ್‌ ಸೆಕ್ರೆಡ್ ಹಾರ್ಟ್‌ ಚರ್ಚ್‌ನ ಉಪಾಧ್ಯಕ್ಷ ಜಾನ್‌ ಮಸ್ಕರೇಂಜಸ್‌, ಐಡಿಯಲ್‌ ಚಿಕನ್‌ ನ ಸೀನಿಯರ್‌ ಮ್ಯಾನೇಜರ್‌ ಜಯರಾಂ ಸಾಲ್ಯಾನ್, ಮೊಹಮ್ಮದ್‌ ಪಿ ಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here